spot_img
Thursday, March 19, 2026
spot_img

ಉಳ್ತೂರು: ಅಪಾರ ದೇವರ ಭಕ್ತಿ, ಉಪವಾಸದಿಂದ ಅಸ್ವಸ್ಥರಾಗಿ ಸಾವು ಶಂಕೆ

ಕುಂದಾಫುರ: ಅಪಾರ ದೇವರ ಭಕ್ತಿ, ನಿರಂತರ ಉಪವಾಸ ಮಾಡುತ್ತಿದ್ದ ವೃದ್ದರೊಬ್ಬರು ಅಸ್ವಸ್ಥರಾಗಿ ಹಟ್ಟಿಯಂಗಡಿ ದೇವಸ್ಥಾನದ ಸಮೀಪ ಶವ ಪತ್ತೆಯಾಗಿದೆ.

ಉಳ್ತೂರು ಗ್ರಾಮದ ಕೆ, ಶ್ರೀನಿವಾಸ (85ವ ) ರವರು ದೇವರ ಅಪಾರ ಭಕ್ತರಾಗಿದ್ದು ಆಗಾಗ ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಹೀಗಿರುವಾಗ ಮಾ.23ರಂದು ಬೆಳಿಗ್ಗೆ ತಿಂಡಿ ತಿಂದು ಮನೆಯಲ್ಲಿ ಯಾರಿಗೂ ಹೇಳದೆ ಹೊರಟು ಹೋಗಿದ್ದು ಸುತ್ತ-ಮುತ್ತ ಎಲ್ಲಾ ದೇವಸ್ಥಾನಗಳಲ್ಲಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದಲ್ಲಿ ಎಲ್ಲಿಯೂ ಸಿಗದ ಕಾರಣ ಮಾ.24 ರಂದು ಕೋಟ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಲಾಗಿತ್ತು. ಮಾ.26 ರಂದು ಸಂಜೆ ಕೆ, ಶ್ರೀನಿವಾಸ ಇವರು ಹಟ್ಟಿಯಂಗಡಿ ದೇವಸ್ಥಾನದ ಪಕ್ಕದಲ್ಲಿರುವ ಸಭಾಭವನದ ಮೇಲಿನ ಟೆರೇಸಿನಲ್ಲಿ ಹಾಕಲಾದ ಅಡಿಕೆ ಒಣಗಿಸಲು ಮಾಡಿದ ಪ್ಲಾಸ್ಟಿಕ್ ಶೆಡ್ಡಿನ ಒಳಗೆ ಬಿಸಿಲಿನಿಂದ ಬೆಂದು ಕರಕಲಾಗಿ ಕೊಳೆತ ಸ್ಥಿತಿಯಲ್ಲಿ ಅಂಗಾತನೆ ಬಿದ್ದಿರುವಂತೆ ಕಂಡು ಬಂದಿದ್ದು, ಮಾರ್ಚ್ 18 ರಿಂದ ಮಾ.26 ರವರೆಗೆ ಯಾವುದೋ ಒಂದು ದಿನ ಮೃತಪಟ್ಟಿದ್ದು ಕೊಳೆತ ಸ್ಥಿತಿಯಲ್ಲಿ ಬುಧವಾರ ಮೃತದೇಹ ಪತ್ತೆಯಾಗಿದೆ. ಕೆ, ಶ್ರೀನಿವಾಸ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಅಲ್ಲದೆ ದೇವರ ಮೇಲಿನ ಅಪಾರ ಭಕ್ತಿಯಿಂದ ಉಪವಾಸ ಮಾಡಿದ್ದರಿಂದ ಅಸ್ವಸ್ಥರಾಗಿ ಅಥವಾ ಬೇರಾವುದೋ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!