spot_img
Friday, April 25, 2025
spot_img

ಜನ್ಮಜಾತ ಊರು ಕಲಿತ. ಶಾಲೆಯನ್ನು  ಮರೆಯಬಾರದು-ಶಾಸಕ ಗುರ್ಮೆ  ಸುರೇಶ್ ಶೆಟ್ಟಿ

ಕುಂದಾಪುರ: ಅಲ್ಪ ಮಾನವತ್ವವನ್ನು ವಿಶ್ವ ಮಾನವತೆಯ ಕಡೆಗೆ ಬಿತ್ತರಿಸಬೇಕು ಎಂಬ ಆಶಯ ದೊಂದಿಗೆ   ಕಟ್ಟಿಕೊಂಡ ಶೈಕ್ಷಣಿಕ ವ್ಯವಸ್ಥೆ  ನಮ್ಮದು ಎಂದು ಶಾಸಕ ಗುರ್ಮೆ  ಸುರೇಶ್ ಶೆಟ್ಟಿ ಹೇಳಿದರು.
ಅವರು. ಮಾರ್ಚ್ 23ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ   ಪ್ರಾಕ್ತನ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾಗಾಗಿ ಹೆತ್ತ ತಾಯಿಗೆ ನಮನ.  ಹೊತ್ತ   ಇಳೆಗೆ ನಮನ.  ತುತ್ತಿಟ್ಟ  ಬಂಧು ಬಳಗಕ್ಕೆ ನಮನ ಕುರಿತು ಶಾಲೆಗೆ ನಮನ ತಿದ್ದಿ ತೀಡಿದ. ಗುರುಗಳಿಗೆ ನಮನ ಎಂದು ಹೇಳುತ್ತ  ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಒಳ್ಳೆಯ ಸಂಸ್ಕಾರ ಮತ್ತು ಉತ್ತಮ ಜ್ಞಾನವನ್ನು ನಿಮಗೆ ನೀಡಿ ಬದುಕನ್ನು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಕ್ಕಿ ಆಹಾರಕ್ಕಾಗಿ ಭೂಮಿಗೆ ಬರುವಂತೆ ನಾವು ಎಷ್ಟೇ  ಮುಂದುವರಿದರೂ ಉನ್ನತ ಹುದ್ದೆಯಲ್ಲಿದ್ದರೂ ಜನ್ಮಜಾತ ಊರು ಕಲಿತ. ಶಾಲೆಯನ್ನು  ಮರೆಯಬಾರದು ಅಲ್ಲದೇ ಮರಳಿ ಬರಲೇಬೇಕು ಎಂದು ಹೇಳಿದರು.
ಇಂದು ನೀತಿ ಇಲ್ಲದ ವ್ಯಾಪಾರ, ಶೀಲವಿಲ್ಲದ ಶಿಕ್ಷಣ, ತತ್ವರಹಿತ ರಾಜಕಾರಣ, ಮಾನವತೆ ಇಲ್ಲದ ವಿಜ್ಞಾನ. ಒಂದು ರೀತಿಯಲ್ಲಿ ಎಲ್ಲವೂ ಸರಕಾಗಿಬಿಟ್ಟಿದೆ.  ಮನಸು ಮಾರುಕಟ್ಟೆಯಾಗಿದೆ. ಚಿಂತೆಗಳು ಸಂತೆಯಾಗಿದೆ. ಜಗ್ಗಾಟದ ಯಾತ್ರೆಯಾಗಿದೆ. ಪಾತಕಿಗಳು ಪಾತ್ರೆಯಾಗಿದೆ. ಹೀಗೆ ಬಗೆಹರಿಯದ ಲೆಕ್ಕ ಉತ್ತರ ಸಿಗದ ಪ್ರಶ್ನೆಗಳಲ್ಲಿಯೇ ನಮ್ಮ ಬದುಕಲ್ಲಿ ಅದು.  ಅನಿವಾರ್ಯವಾಗಿದೆ. ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಶಾಸಕ ಕಿರಣ್ ಕೊಡ್ಗಿ ಮಾತನಾಡಿ.   ಈ ಭಾಗದ    ಜನತೆಗೆ ಉನ್ನತ ಶಿಕ್ಷಣ ಕನಸಾಗಿದ್ದ 1963ರ.  ಕಾಲಘಟ್ಟದಲ್ಲಿ  ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಇಂದು ನಾವು ನೆನಪಿಸಿಕೊಳ್ಳುವ ಅನಿವಾರ್ಯತೆ ಇದೆ.ಇಲ್ಲಿ ಕುರಿತು ಲಕ್ಷಾಂತರ ಜನ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆ    ಎಷ್ಟೋ ಜನರು ಆಶಯಗಳು ಜೀವ ತುಂಬಿದೆ. ಅಲ್ಲದೆ ಈ ದಿನ ವಿಶೇಷ ದಿನವಾಗಿದೆ    ನಾವು ಸರಿಯಾದ ಗುರಿ ಇಟ್ಟುಕೊಂಡು ಮುಂದೆ ನಡೆದರೆ ಯಶಸ್ಸು ಖಂಡಿತ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಹರಿ ಛಾತ್ರ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ     ಕಾಲೇಜಿನ ವಿಶ್ವಸ್ಥ ಮಂಡಳಿಯ.   ಸದಸ್ಯರಾದ ರಾಜೇಂದ್ರ ತೋಳಾರ್     ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ. ಡಾ. ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಹಳೆ ವಿದ್ಯಾರ್ಥಿಗಳಾದ  ಮಡಾಮಕ್ಕಿ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಾದ ಕಿರಣ್ ಹಟ್ಟಿಯಂಗಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು  ಈ ಸಂದರ್ಭದಲ್ಲಿ rank ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ  ಸಂದೇಶ ಶೆಟ್ಟಿ ಸಳ್ವಾಡಿ   ಕಾರ್ಯಕ್ರಮ ನಿರೂಪಿಸಿದರು.
ಮನು ಹಂದಾಡಿಯವರಿಂದ ಕಾಮಿಡಿ ಟೈಮ್ ಕಾರ್ಯಕ್ರಮ, ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಸತೀಶ್ ಹೆಮ್ಮಾಡಿಯವರಿಂದ ಜಾದೂ ಕಾರ್ಯಕ್ರಮ ಮತ್ತು ಹಾಡುಗಾರ ತಂಡ ರಾಕೇಶ್ ದಿಲ್ಸೆ ಮತ್ತು ದೀಪ್ತಿಯವರ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯ ಪ್ರಾಕ್ತನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!