spot_img
Sunday, February 15, 2026
spot_img

ಗ್ಯಾರಂಟಿ ಯೋಜನೆ ತಾಲೂಕಿಗೆ ಫೆಬ್ರವರಿಯಲ್ಲಿ 24 ಕೋಟಿ ಬಿಡುಗಡೆ | ಮಾರ್ಚ್ ತಿಂಗಳಲ್ಲಿ ಕುಟುಂಬದ ಪ್ರತಿ ಸದಸ್ಯರಿಗೂ 15 ಕೆಜಿ ಅಕ್ಕಿ | ಗ್ಯಾರಂಟಿ ಸಮಿತಿಯಿಂದ ಪಡಿತರ ಅಂಗಡಿಗಳ ಕಾರ್ಯವೈಖರಿ ವೀಕ್ಷಣೆ-ಹೆಚ್.ಹರಿಪ್ರಸಾದ್ ಶೆಟ್ಟಿ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಮಾ.24: ಅನ್ನಭಾಗ್ಯ ಯೋಜನೆಯಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿ ಕುಟುಂಬ ಸದಸ್ಯರಿಗೆ 15 ಕೆಜಿ ಅಕ್ಕಿಯನ್ನು ಮಾರ್ಚ್ ತಿಂಗಳಲ್ಲಿ ನೀಡಲಾಗುತ್ತಿದೆ. ಗ್ಯಾರಂಟಿ ಸಮಿತಿ ಸದಸ್ಯರು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಫಲಾನುಭವಿಗಳಿಗೆ ಸರಿಯಾಗಿ ಪರಿತರ ನೀಡಲಾಗುತ್ತದೆಯೇ ಎನ್ನುವುದನ್ನು ಪರಿಶೀಲನೆ ಮಾಡಬೇಕು, ಪ್ರತಿಯೋರ್ವ ಫಲಾನುಭವಿಗಳು ಸರಕಾರ ನಿಗಧಿಗೊಳಿಸಿದ ಪ್ರಮಾಣದಲ್ಲಿ ಅಕ್ಕಿ ಸಿಗಬೇಕು ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಟಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಪಡಿತರ ಅಂಗಡಿಗಳು ಸಹಕಾರ ಸಂಘಗಳು ನಡೆಸುವುದರಿಂದ ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ ಕೆಲವೊಂದು ಕಡೆಗಳಲ್ಲಿ ಪಡಿತರ ಕೇಂದ್ರಗಳಲ್ಲಿ ಮಹಿಳೆಯರು, ವಯೋವೃದ್ಧರು ಸರದಿಯಲ್ಲಿ ನಿಂತಿದ್ದರೂ ಪಡಿತರ ವಿತರಣೆ ಮಾಡುವವರು ಅವರ ಪರಿಚಿತರಿಗೆ ಮೊದಲು ಆದ್ಯತೆ ನೀಡುತ್ತಾರೆ ಎನ್ನುವ ಆರೋಪವಿದೆ. ಈ ಬಗ್ಗೆಯೂ ಗಮನ ಹರಿಸಲಾಗುವುದು ಎಂದರು.

ಫೆಬ್ರವರಿ 2025ರಲ್ಲಿ ಗ್ರಹಲಕ್ಷ್ಮೀ ಯೋಜನೆಗೆ 14,45,42,000 ರೂ., ಗೃಹಜ್ಯೋತಿ ಯೋಜನೆಗೆ 4,18,46,445 ರೂ., ಅನ್ನಭಾಗ್ಯ ಯೋಜನೆಗೆ 3,41,37,810 ರೂ., ಶಕ್ತಿಯೋಜನೆಗೆ 2,40,58,604 ರೂ., ಯುವನಿಧಿ ಯೋಜನೆಗೆ 13,83,000 ರೂ ಬಿಡುಗಡೆಯಾಗಿದೆ. ಒಟ್ಟು ರೂ.24,59,67,859 ಬಿಡುಗಡೆಯಾಗಿದೆ, ಕುಂದಾಪುರ ತಾಲೂಕಿಗೆ ಒಟ್ಟು ಈ ತನಕ ರೂ.3,49,44,77,652 ಬಿಡುಗಡೆಯಾಗಿzಎಂದು ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

ಆಧಾರ್ ಮ್ಯಾಪಿಂಗ್ ಬಗ್ಗೆ ಸರಿಯಾದ ಮಾಹಿತಿ ಫಲಾನುಭವಿಗಳಿಗೆ ಇಲ್ಲದೆ ಸಮಸ್ಯೆಯಾಗುತ್ತಿದೆ. ಸಿಡಿಪಿ ಕಛೇರಿಯಲ್ಲಿಯೇ ಆಧಾರ್ ಮ್ಯಾಪಿಂಗ್ ಮಾಡಲಾಗುವ ಮಾಹಿತಿ ನೀಡಿದರೆ ಸಮಸ್ಯೆ ಪರಿಹಾರವಾಗುತ್ತದೆ. ಅಂಗನವಾಡಿ ಕಾರ್ಯಕರ್ತೆರ ಮೂಲಕ ಮಾಹಿತಿ ಫಲಾನುಭವಿಗಳಿಗೆ ನೀಡಬಹುದು ಎಂದರು.

ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮುಗಿಯುವ ತನಕ ಏಪ್ರಿಲ್ 4ರ ತನಕ ವಿದ್ಯುತ್ ನಿಲುಗಡೆ ಮಾಡಬಾರದು ಎಂದು ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

 

ಹಕ್ಲಾಡಿ ಮಾರ್ಗದಲ್ಲಿ ಸರಕಾರಿ ಬಸ್ ಸಂಚಾರಿಸದ ಬಗ್ಗೆ ಅರುಣ್ ಹಕ್ಲಾಡಿ ಗಮನ ಸಳೆದರು. ಹುದ್ದೆಗಳ ನೇಮಕಾತಿ ಆದ ತಕ್ಷಣ ಬಸ್ ಸಂಚಾರ ಆರಂಭಿಸಲಾಗುವುದು. ಕೊಲ್ಲೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರದ ಬಗ್ಗೆ ಚಾಲನಾ ಸಿಬ್ಬಂದಿಗಳ ಕೊರತೆ ಇದೆ. ಮೈಸೂರು ಗ್ರಾಮಾಂತರ ವಿಭಾಗದವರಿಗೆ ಪತ್ರ ಬರೆಯಲಾಗಿದೆ. ಕೊಲ್ಲೂರಿನಲ್ಲಿ ಕೆ.ಎಸ್.ಆರ್.ಟಿ ಬಸ್ ನಿಲ್ಲಿಸಲು ಸ್ಥಳವಕಾಶ ನೀಡಬೇಕೆಂದು ದೇವಸ್ಥಾನಕ್ಕೆ ಪತ್ರ ಬರೆಯಲಾಗಿದೆ ಎಂದರು. ಹಟ್ಟಿಯಂಗಡಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಕಲ್ಪಿಸಬೇಕು ಎನ್ನುವ ಮನವಿಯನ್ನು ಸದಸ್ಯರು ಮುಂದಿಟ್ಟರು. ಈ ಮಾರ್ಗದಲ್ಲಿ ಬಸ್ ಬೇಕು ಎನ್ನುವುದರ ಬಗ್ಗೆ ಮನವಿ ಸಲ್ಲಿಸಿ, ಬಳಿಕ ಹೊಸ ಮಾರ್ಗದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಎಂದರು.

ಗೃಹಲಕ್ಷ್ಮೀ ಯೋಜನೆ ಮುಖ್ಯವಾಗಿ ಕೊರಗ ಕುಟುಂಬಗಳಿಗೆ ಅವಶ್ಯಕವಾಗಿದೆ. ದುರಂತವೆಂದರೆ ತಾಲೂಕಿನಲ್ಲಿ 101 ಕೊರಗ ಕುಟುಂಬಗಳು ಅರ್ಜಿಯೇ ಸಲ್ಲಿಸಿಲ್ಲ. ಏಕೆ ಆಗಿಲ್ಲ. ಬ್ಯಾಂಕ್ ಆಧಾರ್ ಸೀಡ್ ಮ್ಯಾಪಿಂಗ್ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗಣೇಶ ಕುಂದಾಪುರ ಸಭೆಯ ಗಮನ ಸಳೆದರು. ಇದಕ್ಕೆ ಉತ್ತರಿಸಿದ ಸಿಡಿಫಿಐ ಅಧಿಕಾರಿಗಳು ಈಗ 75 ಪ್ರಕರಣ ಮಾತ್ರ ಬಾಕಿ ಇದೆ. 7 ಕುಟುಂಬಗಳು ಆರೋಗ್ಯ ಸಮಸ್ಯೆ, ಮೊಬೈಲ್ ಇಲ್ಲದಿರುವುದು, ಆದಾಯ ತೆರಿಗೆ ಪಾವತಿ ವಿಚಾರಗಳಿಂದ ಈ ಕುಟುಂಬಗಳಿಗೆ ಗೃಹಲಕ್ಷ್ಮೀ ಸಾಧ್ಯವಾಗಿಲ್ಲ ಎಂದರು. ಮೊಬೈಲ್ ಇಲ್ಲದಿದ್ದರೆ ಆ ವ್ಯಕಿಗಳಿಗೆ ಯೋಜನೆ ಸಿಗುವುದಿಲ್ಲವೇ? ಮೊಬೈಲ್ ಮಾನದಂಡವಾಗಬಾರದು. ಪರ್ಯಾಯ ಕ್ರಮ ಕೈಗೊಂಡು ಅವರಿಗೆ ಯೋಜನೆಯ ಫಲ ಸಿಗುವಂತೆ ಮಾಡಬೇಕು ಎಂದು ಗಣೇಶ ಹೇಳಿದರು.

ಗಂಗೊಳ್ಳಿಯಲ್ಲಿ ಪಡಿತರ ತರಲು ಹೋದಾಗ ಅಲ್ಲಿನ ಸಿಬ್ಬಂದಿಯೊಬ್ಬರು ನಿಮ್ಮವರು ಗಲ್ಫ್‍ನಲ್ಲಿದ್ದಾರೆ, ನಿಮಗೆ ಏಕೆ ರೇಷನ್ ? ಎಂದು ಮಾತನಾಡಿ ಪಡಿತರ ಚೀಟಿಯನ್ನು ಎಸೆದಿದ್ದಾರೆ ಎಂದು ಗ್ಯಾರಂಟಿ ಸದಸ್ಯರು ದೂರಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಅಧ್ಯಕ್ಷರು ತಿಳಿಸಿದರು.

ನಾರಾಯಣ ಆಚಾರ್ ಕೋಣಿ ಮಾತನಾಡಿ ಮೆಸ್ಕಾಂ ಸಮಸ್ಯೆ, ಮೀಟರ್ ವಿಳಂಬದ ಬಗ್ಗೆ ಸಭೆಯ ಗಮನ ಸಳೆದರು.

ಅಭಿಜಿತ್ ಪೂಜಾರಿ ಮಾತನಾಡಿ, ಮೃತಪಟ್ಟ ವ್ಯಕ್ತಿಯ ಹೆಸರಿಗೆ ಗೃಹಲಕ್ಷ್ಮೀ ಹಣ ಬರುತ್ತಿದ್ದು, ಈ ಬಗ್ಗೆ ಸತತವಾಗಿ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಲ್ಲ. ಮೃತ ವ್ಯಕ್ತಿಯ ಹೆಸರಿಗೆ ಹಣ ಪಾವತಿಯಾಗುವುದರಿಂದ ಆ ಕುಟುಂಬ ಸದಸ್ಯರಿಗೆ ಸಮಸ್ಯೆಯಾಗಿದೆ. 2020 ಇಸವಿಯಲ್ಲಿಯೇ ಆ ವ್ಯಕ್ತಿ ಮೃತರಾಗಿದ್ದಾರೆ. ಪಡಿತರ ಚೀಟಿ ಬದಲಾಗಿದ್ದರೂ ಇಲಾಖೆಯ ತಾಂತ್ರಿಕ ಸಮಸ್ಯೆಯಿಂದ ಮೃತ ವ್ಯಕ್ತಿಯ ಖಾತೆಗೆ ಹಣ ಜಮಾ ಆಗುತ್ತಿದೆ. ಕೂಡಲೇ ಇದನ್ನು ಸರಿಪಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು, ಮುಂದಿನ ಸಭೆಯ ಅಜೆಂಡಾದಲ್ಲಿ ಈ ವಿಷಯ ಬರಬಾರದು ಎಂದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ವಾಣಿ ಆರ್.ಶೆಟ್ಟಿ ಮೊಳಹಳ್ಳಿ, ನಾರಾಯಣ ಆಚಾರ್ ಕೋಣಿ, ಅಭಿಜಿತ್ ಪೂಜಾರಿ ಹೇರಿಕುದ್ರು, ಮಂಜು ಕೊಠಾರಿ ಕೆರಾಡಿ, ಗಣೇಶ ಕುಂದಾಪುರ, ಆಶಾ ಕರ್ವೇಲ್ಲೋ ಚರ್ಚ್‍ರೋಡ್ ಕುಂದಾಪುರ, ಸವಿತಾ ಪೂಜಾರಿ ಚಿತ್ತೂರು, ಜಹೀರ್ ಆಹಮ್ಮದ್ ಗಂಗೊಳ್ಳಿ, ಚಂದ್ರ ಕಾಂಚನ್ ಜನ್ನಾಡಿ, ಅರುಣ್ ಹಕ್ಲಾಡಿ ಹಾಗೂ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!