spot_img
Friday, April 25, 2025
spot_img

ಬಗ್ವಾಡಿ ಹೋಬಳಿ ಗುರಿಕಾರರ ಸಮಾವೇಶ | ಗುರಿಕಾರರು ಮೊಗವೀರ ಸಮಾಜದ ಆಸ್ತಿ-ಜಯ ಸಿ.ಕೋಟ್ಯಾನ್

ಕುಂದಾಪುರ: ಮೊಗವೀರ ಸಮಾಜದಲ್ಲಿರುವ ಗುರಿಕಾರ ಪದ್ದತಿ ಅತ್ಯಂತ ಶ್ರೇಷ್ಠವಾದುದುರಿದು ಮೊಗವೀರ ಸಮಾಜದ ಆಸ್ತಿ. ಈ ಪದ್ದತಿಯನ್ನು ಉಳಿಸಿ ಬೆಳೆಸುವಲ್ಲಿ ನಾಡೋಜ ಡಾ.ಜಿ.ಶಂಕರ್ ಅವರು ಆರಂಭಿಸಿದ ಗುರಿಕಾರರನ್ನು ಗೌರವಿಸುವುದು, ಗೌರವದ ಧನ ನೀಡುವ ಕಾರ್ಯಕ್ರಮ ಈಗ ಹೋಬಳಿ ಮಟ್ಟದಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಮೂರು ಹೋಬಳಿಗಳಲ್ಲಿಯೂ ಕೂಡಾ ಗುರಿಕಾರ ಸೇವೆಯನ್ನು ಗೌರವಿಸಲಾಗುತ್ತಿದೆ ಎಂದು ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ಹೇಳಿದರು.
ಅವರು ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ 1941) ಮುಂಬೈ, ಕುಂದಾಪುರ ಶಾಖೆ, ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನ ಶ್ರೀ ಕ್ಷೇತ್ರ ಬಗ್ವಾಡಿ ಇವರ ನೇತೃತ್ವದಲ್ಲಿ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಮಾವೇಶ-2025 ಹಾಗೂ ಹೋಬಳಿ ವ್ಯಾಪ್ತಿಯ ಐದು ಮೊಗವೀರ ಯುವ ಸಂಘಟನೆಗಳ ಮಾಜಿ-ಹಾಲಿ ಅಧ್ಯಕ್ಷರುಗಳ ಸೇವಾ ಸ್ಮರಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಚ್ಚಿಲ ದಸರಾ ಸೇರಿದಂತೆ ಎಲ್ಲಾ ಕಾರ್ಯಕ್ರಮದಲ್ಲೂ ಕೂಡಾ ಬಗ್ವಾಡಿ ಹೋಬಳಿಯವರ ಪಾಲ್ಗೊಳ್ಳುವಿಕೆ ಗಮನಾರ್ಹವಾದುದು. ಶೀಘ್ರದಲ್ಲಿ ಉಚ್ಚಿಲದಲ್ಲಿ ವಿದ್ಯಾರ್ಥಿನಿಲಯ ಉದ್ಘಾಟನೆಗೊಳ್ಳುತ್ತಿದ್ದು ಆ ಸಂದರ್ಭದಲ್ಲೂ ಮೂರು ಹೋಬಳಿಯ ಗುರಿಕಾರರನ್ನು ಗೌರವಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಮಾತನಾಡಿ, ಬಗ್ವಾಡಿ ಹೋಬಳಿಯಲ್ಲಿ ಪ್ರತಿ ವರ್ಷ ಗುರಿಕಾರರ ಸಮಾವೇಶ ನಡೆಸಿ ಗುರಿಕಾರರನ್ನು ಗೌರವಿಸಲಾಗುತ್ತಿದೆ. ಗುರಿಕಾರರು ಸಮಾಜವನ್ನು ವ್ಯವಸ್ಥಿತವಾಗಿ ಮುನ್ನೆಡೆಸಬೇಕು. ಅದೇ ರೀತಿ ಏ.12ರಂದು ನಡೆಯುವ ಬಗ್ವಾಡಿ ರಥೋತ್ಸವದಲ್ಲಿ ಹೋಬಳಿಯ ಪ್ರತಿಯೋರ್ವರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಗುರಿಕಾರರನ್ನು ಗೌರವಿಸುವ ಈ ಕಾರ್ಯಕ್ರಮ ಮಾದರಿಯಾದುದು. ಮುಂದಿನ ಪೀಳಿಗೆಗೆ ಸಮಾಜದ ಆಚಾರ ವಿಚಾರಗಳನ್ನು ತಿಳಿಯ ಪಡಿಸುವ ಕಾರ್ಯ ಶ್ಲಾಘನಾರ್ಹವಾದುದು ಎಂದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯಕುಮಾರ ಹಟ್ಟಿಯಂಗಡಿ ಮಾತನಾಡಿ, ಗುರಿಕಾರ ಪದ್ದತಿಯನ್ನು ಇನ್ನಷ್ಟು ಬಲಿಷ್ಟ ಗೊಳಿಸುವ ನಿಟ್ಟಿನಲ್ಲಿ ಈಗ ಬಗ್ವಾಡಿ ಹೋಬಳಿಯಲ್ಲಿರುವ 180 ಕೂಡಿಗೆಗಳನ್ನು 18 ಸಂಯುಕ್ತ ಸಭಾಗಳಾಗಿ ಮಾಡಲಾಗಿದ್ದು ಪ್ರತಿಯೊಂದು ಸಂಯುಕ್ತ ಸಭಾಕ್ಕೂ ಅಧ್ಯಕ್ಷ, ಪದಾಧಿಕಾರಿಗಳ ನೇಮಕ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರ ಗುರಿಕಾರರ ಚಿಂತನ ಮಂಥನ ಸಭೆ ನಡೆಸಲಾಗುವುದು. ಬಗ್ವಾಡಿ ದೇವಸ್ಥಾನದಲ್ಲಿ ಈಗಾಗಲೇ ಪ್ರತೀ ಶುಕ್ರವಾರ ಅನ್ನಸಂತರ್ಪಣೆಗೆ ನಾಡೋಜ ಡಾ.ಜಿ.ಶಂಕರ ಜನ್ಮದಿನದಂದು ಚಾಲನೆ ನೀಡಲಾಗಿದ್ದು, ಈಗಾಗಲೇ ಅನ್ನದಾನ ನಿಧಿಯಲ್ಲಿ 96 ಲಕ್ಷ ಸಂಗ್ರಹವಾಗಿದ್ದು ಈ ರಥೋತ್ಸವದ ಒಳಗೆ 1 ಕೋಟಿಗೆ ತಲುಪಿಸುವ ಗುರಿ ಇದೆ. ಅದೇ ರೀತಿ ಏಪ್ರಿಲ್ 12 ರಂದು ಬಗ್ವಾಡಿ ರಥೋತ್ಸವ ನಡೆಯಲಿದ್ದು ಬಗ್ವಾಡಿ ಹೋಬಳಿಯ ಪ್ರತಿಯೊಂದು ಮನೆಯಿಂದ ದೇವಿಗೆ ಹಣ್ಣುಕಾಯಿ ಸೇವೆ ಆಗಬೇಕು ಎನ್ನುವ ಸಂಕಲ್ಪದಿಂದ ಪ್ರತಿ ಕೂಡಿಗೆಯ ಪ್ರತೀ ಮನೆಯವರು ಹಾಗೂ ಬಗ್ವಾಡಿ ಗ್ರಾಮದ ಪ್ರತೀ ಮನೆಯವರು ರಥೋತ್ಸವದಂದು ಒಂದೊಂದು ಹಣ್ಣುಕಾಯಿ ಸೇವೆ ಸಲ್ಲಿಸಬೇಕು ಎಂದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರಾದ ಕೆ.ಕೆ ಕಾಂಚನ್, ಎಂ.ಎಂ.ಸುವರ್ಣ, ಮೊಗವೀರ ಯುವಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ, ಅನಂದ ಶ್ರೀಯಾನ್, ಅರವಿಂದ ಪುತ್ರನ್ ಮುಂಬೈ, ಸದಾನಂದ ಸುವರ್ಣ ಉಳ್ಳಾಲ, ಮನೋಜ್, ಯುವ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ವಿನಯ ಕರ್ಕೆರಾ, ಶಿವರಾಮ ಕೋಟ, ಮಾಜಿ ಕಾರ್ಯದರ್ಶಿ ಯತೀಶ ಕಿದಿಯೂರು, ಹೆಮ್ಮಾಡಿ ಘಟಕದ ಅಧ್ಯಕ್ಷ ದಿನೇಶ ಕಾಂಚನ್ ಬಾಳಿಕೆರೆ, ಬೈಂದೂರು ಘಟಕದ ಅಧ್ಯಕ್ಷ ಸೋಮಶೇಖರ, ಕುಂದಾಪುರ ಘಟಕದ ಅಧ್ಯಕ್ಷ ನಾಗೇಶ ಹಳ್ನಾಡು, ಹಾಲಾಡಿ ಶಂಕರನಾರಾಯಣ ಘಟಕದ ಅಧ್ಯಕ್ಷ ರಾಘವೇಂದ್ರ, ಕೋಟೇಶ್ವರ ಘಟಕದ ಅಧ್ಯಕ್ಷ ನಾಗರಾಜ ಬೀಜಾಡಿ, ಕೋಟೇಶ್ವರ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಾರ್ಕೋಡು, ಬಗ್ವಾಡಿ ಹೋಬಳಿ ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷೆ ಶ್ಯಾಮಲ ಜಿ.ಚಂದನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೋಬಳಿಯ ಎಲ್ಲಾ ಗುರಿಕಾರರನ್ನು ಗೌರವಿಸಲಾಯಿತು. ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಸದಾಶಿವ ಅವರನ್ನು ಸನ್ಮಾನಿಸಲಾಯಿತು. ಬಗ್ವಾಡಿ ಹೋಬಳಿ ವ್ಯಾಪ್ತಿಯ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರು, ಐದು ಘಟಕಗಳು, ಮಹಿಳಾ ಘಟಕ, ಮೊಗವೀರ ಸ್ತ್ರೀಶಕ್ತಿಯ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರಿಗೆ ಗೌರವಾರ್ಪಣೆ ಮಾಡಲಾಯಿತು.

ರಘು ರಟ್ಟಾಡಿಯವರು ಸಿದ್ಧ ಪಡಿಸಿದ ಮಹಿಷಾಸುರಮರ್ದಿನಿಯ ಭಕ್ತಿಗೀತೆಯನ್ನು ಅನಾವರಣಗೊಳಿಸಲಾಯಿತು. ಗುರಿಕಾರರಾದ ನರಸಿಂಹ ಬಂಟ್ವಾಡಿ ಮತ್ತು ಗಣಪತಿ ಟಿ.ಶ್ರಿಯಾನ್ ಗುರಿಕಾರರ ಪರವಾಗಿ ಮಾತನಾಡಿದರು.

ಶೋಭಾ ಜಿ.ಪುತ್ರನ್ ಪ್ರಾರ್ಥನೆ ಮಾಡಿದರು. ಮೊಗವೀರ ಮಹಾಜನಸೇವಾ ಸಂಘ ಬಗ್ವಾಡಿ ಹೋಬಳಿಯ ಕುಂದಾಪುರ ಶಾಖಾ ಉಪಾಧ್ಯಕ್ಷ ಸದಾನಂದ ಬಳ್ಕೂರು ಸ್ವಾಗತಿಸಿದರು. ಶಾಖೆಯ ಕಾರ್ಯದರ್ಶಿ ಪ್ರಭಾಕರ ಎನ್.ಎಂ.ಸೇನಾಪುರ ವರದಿ ಮಂಡಿಸಿದರು. ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸತೀಶ್ ಎಂ ನಾಯ್ಕ್ ವಂದಿಸಿದರು. ಸುಧಾಕರ ಕಾಂಚನ್ ಹಾಗೂ ಲೋಹಿತಾಶ್ವ ಆರ್ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!