spot_img
Wednesday, April 1, 2026
spot_img

ಕೋಟೇಶ್ವರ: ಸೌಖ್ಯಂ ಸ್ಯಾನಿಟರಿ ಪ್ಯಾಡ್ ಗಳ ಉಚಿತ ವಿತರಣೆ

ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿಯ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಮಹಿಳಾ ವೇದಿಕೆ ಮತ್ತು ಶ್ರೀ ಮಾತಾಮೃತಾನಂದಮಯಿ ಮಠ ಕೇರಳ ಇದರ ಆಯುರಾರೋಗ್ಯ ಸೌಖ್ಯಂ ಫೌಂಡೇಶನ್ ಇದರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಪರಿಸರ ಸ್ನೇಹಿಯಾದ ಮತ್ತು ಬಾಳೆದಿಂಡನ್ನು ಉಪಯೋಗಿಸಿ ಉತ್ಪಾದಿಸಿದ ಸೌಖ್ಯಂ ಸ್ಯಾನಿಟರಿ ಪ್ಯಾಡ್ ಗಳ ಉಚಿತ ವಿತರಣೆ ಕಾರ್ಯಕ್ರಮ ಮಾ.13ರಂದು ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನೆಕ್ಸಸ್ ಮಾಲ್ ಇದರ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ನಿಶಾ ಅಂಚನ್ ಅವರು ಮಾತನಾಡಿ ಪರಿಸರ ರಕ್ಷಣೆ ಮತ್ತು ಮಹಿಳೆಯರು ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಋತುಚಕ್ರದ ಸಮಯದಲ್ಲಿ ಈ ಮರುಬಳಕೆ ಮಾಡಬಹುದಾದ ಪ್ಯಾಡ್ ಗಳ ಬಳಕೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.

ಆಯುರಾರೋಗ್ಯ ಸೌಖ್ಯ ಫೌಂಡೇಶನ್ ಕುಂದಾಪುರ ವಿಭಾಗದ ಪ್ರತಿನಿಧಿಯಾದ ಕಲ್ಪನಾ ಭಾಸ್ಕರ್ ಅವರು ಮಾತನಾಡಿ ಸೌಖ್ಯಂ ಪಾಡ್ ಗಳನ್ನು ಸುಮಾರು ಆರು ವರ್ಷಗಳ ಕಾಲ ಬಳಸಬಹುದಾಗಿದ್ದು ಇದರ ಉಪಯುಕ್ತತೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಅವಶ್ಯಕತೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಐ ಕ್ಯೂ ಎ ಸಿ ಸಂಚಾಲಕರಾದ ನಾಗರಾಜ ಯು., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ ಹಾಗೂ ಮಹಿಳಾ ವೇದಿಕೆಯ ಸಂಚಾಲಕರಾದ ರೋಹಿಣಿ ಇವರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ನೆಕ್ಸಸ್ ಮಾಲ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕಾಲೇಜಿನ 250 ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೌಖ್ಯಂ ಪ್ಯಾಡ್ ಗಳನ್ನು ವಿತರಿಸಲಾಯಿತು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!