spot_img
Thursday, March 19, 2026
spot_img

ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಬಹುಮುಖ ಪ್ರತಿಭೆ ಬ್ರಾಹ್ಮೀ ಬಳ್ಕೂರು

ಜನಪ್ರತಿನಿಧಿ ವರದಿ] ಕುಂದಾಪುರ: ವಿವಿಧ ಕ್ಷೇತ್ರದಲ್ಲಿ ಪ್ರತಿಭಾವ್ಯಕ್ತಿಯ ಮೂಲಕ ಗುರುತಿಸಿಕೊಂಡ ಬಹುಮುಖ ಪ್ರತಿಭೆ ಬ್ರಾಹ್ಮೀ ಬಳ್ಕೂರು. ಲಲಿತಾರಂಗ, ಕರಾಟೆ , ಭಜನೆ ಹೀಗೆ ಹಲವಾರು ಸಾಂಸ್ಕ್ರತಿಕ ವಲಯಗಳಲ್ಲಿ ಬ್ರಾಹ್ಮೀ ತೊಡಗಿಸಿಕೊಂಡು, ಪ್ರಸ್ತುತ ರಾಜ್ಯ ಮಟ್ಟದಲ್ಲಿ ಗಮನ ಸಳೆಯುತ್ತಿರುವ ಪ್ರತಿಭೆ.

ಅಶೋಕ ಅಂಪಾರು ಹಾಗೂ ರಜನಿ ಅಶೋಕ ಇವರ ಪುತ್ರಿಯಾಗಿರುವ ಬ್ರಾಹ್ಮೀ ಕುಂದಾಪುರದ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಾರೆ.

ಸಾಧಿಸುವ ಛಲಗಾತಿ ಬ್ರಾಹ್ಮೀ ಹುಟ್ಟು ಪ್ರತಿಭಾ ಸಂಪನ್ನೆ. ಕಲಿಕೆಯ ಜೊತೆಯಲ್ಲಿ ಪಾಠೇತರ ಚಟುವಟಿಕೆಯಲ್ಲೂ ಆಸಕ್ತಿ ಹೊಂದಿದವರು. ಅದಕ್ಕೆ ಪೂರಕವಾಗಿ ತಂದೆ-ತಾಯಿಯ ಪ್ರೋತ್ಸಾಹ, ಶಾಲಾ ಕಾಲೇಜುಗಳಲ್ಲಿ ಸಹಕಾರ, ಮಾರ್ಗದರ್ಶನ, ಅವಕಾಶಗಳು ದೊರೆತವು.

ಭರತನಾಟ್ಯದಲ್ಲಿ ವಿದ್ವತ್ ಪಡೆಯುತ್ತಿದ್ದು, ಸುಮಾರು ನೂರ ಐವತ್ತಕ್ಕೂ ಅಧಿಕ ಕಾರ್ಯಕ್ರಮವನ್ನು ನೀಡಿದ್ದಾರೆ. ಉತ್ತಮ ಭರತನಾಟ್ಯ ಕಲಾವಿದೆಯಾಗಿ ಮೆಚ್ಚುಗೆ ಪಡೆದಿದ್ದಾರೆ.

ಯಕ್ಷಗಾನದಲ್ಲೂ ಸಹಾ ತನ್ನದೇ ಆದ ವಿಶಿಷ್ಠ ಛಾಪನ್ನು ಮೂಡಿಸಿರುವ ಯುವ ಪ್ರತಿಭೆ ಇವರು. ಯಕ್ಷಗಾನದ ಹೆಜ್ಜೆ ಅಭ್ಯಾಸ ಮಾಡಿ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ರಂಗಸ್ಥಳದಲ್ಲೂ ಕೂಡಾ ತನ್ನ ಛಾಪು ಮೂಡಿಸಿದ್ದಾರೆ.

ಕರಾಟೆಯಲ್ಲಿ ತರಭೇತಿ ಪಡೆದು ಅನೇಕ ಪ್ರಶಸ್ತಿ ಪಡೆದು ರಾಷ್ಟ್ರೀಯ ಮಟ್ಟದ ಕರಾಟೆ ಪ್ರದರ್ಶಿಸಿದ್ದಾರೆ, ಬ್ಲಾಕ್ ಬೆಲ್ಟ್ ಪಡೆದಿರುವ ಇವರು, ಕರಾಟೆ ತರಭೇತಿ ನೀಡುತ್ತಿದ್ದಾರೆ, ಸುಮಾರು ತೊಂಬತ್ತೈದು ವಿದ್ಯಾರ್ಥಿಗಳಿಗೆ ಕರಾಟೆಯ ತರಬೇತಿ ನೀಡಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಬ್ರಾಹ್ಮೀ ಕಾಲೇಜು ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಸಿ.ಎಗೆ ಸೇರಿದ ಕೂಡಲೆ ರಾಷ್ಟ್ರೀಯ ಸೇವಾ ಯೋಜನಾ ಘಟಕ್ಕ ಸೇರ್ಪಡೆಗೊಳ್ಳುತ್ತಾರೆ. ಅಲ್ಲಿ ಇವರ ಸೇವಾಸಕ್ತಿಗೆ ಉತ್ತಮ ವೇದಿಕೆ ಲಭಿಸುತ್ತದೆ. ಮಂಗಳೂರು ವಿಶ್ವ ವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮೂಲಕ ಆಯ್ಕೆಯಾಗಿ ರಾಜ್ಯದಲ್ಲೇ ಉತ್ತಮ ಪ್ರದರ್ಶನ ನೀಡಿ ಸಮಗ್ರ ಪ್ರಶಸ್ತಿ ಪಡೆದು ರಾಜ್ಯ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ.

ಇಲ್ಲಿಗೆ ಬ್ರಾಹ್ಮೀಯ ಸಾಧನೆ, ಪ್ರತಿಭೆಯ ಪಥ ನಿಲ್ಲುವುದಿಲ್ಲ. ಧಾರ್ಮಿಕ ವಲಯದಲ್ಲಿ ಆಸಕ್ತಿ ಹೊಂದಿದ ಇವರು ಭಜನೆಯ ತರಬೇತಿ ಪಡೆದು ಭಜನಾ ತಂಡದೊಂದಿಗೆ ತೆರಳಿ ಭಜನೆ ಸೇವೆಯನ್ನು ನೀಡುವ ಮೂಲಕ ಉತ್ತಮ ಭಜನಾ ಪಟುವಾಗಿ ಮೂಡಿ ಬಂದಿದ್ದಾರೆ.
ಟೀಮ್ ಅಂಪಾರು ಪ್ರಸ್ತುತಿ ಕಲಾಸಂಜೆ ಕಾರ್ಯಕ್ರಮದಲ್ಲಿ ಹಾಗೂ ನಮ್ಮೂರ ಸಂಭ್ರಮ ಅನೇಕ ವೇದಿಕೆಯಲ್ಲಿ ನೃತ್ಯದ ಮೂಲಕ ಬ್ರಾಹ್ಮೀ ಮಿಂಚಿದ್ದಾರೆ.ರಾಜ್ಯ ಮಟ್ಟದ ವೇದಿಕೆಗಳಲ್ಲಿ ನೃತ್ಯ, ಯಕ್ಷಗಾನ, ಭರತನಾಟ್ಯ ಪ್ರದರ್ಶನ ನೀಡಿರುವ ಬ್ರಾಹ್ಮೀ ಸಾಂಸ್ಕೃತಿಕ ಲೋಕದಲ್ಲಿ ಭರವಸೆಯ ತಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!