spot_img
Tuesday, March 31, 2026
spot_img

ಯುವಶಕ್ತಿ ಮಿತ್ರ ಮಂಡಲ ವಕ್ವಾಡಿ :‌ ಮಾ. 08ಕ್ಕೆ 28ನೇ ವಾರ್ಷಿಕೋತ್ಸವ ʼಯುವ ಸಂಭ್ರಮ-2025

ವಿ.ಕೆ ಮೋಹನ್‌ ಬಯಲು ರಂಗ ಮಂಟಪ, ಹೈ ಮಾಸ್ಟ್‌ ದೀಪ, ಪ್ರತಿಮೆ ಅನಾವರಣ, ಮಕ್ಕಳ ಪಾರ್ಕ್‌ ಉದ್ಘಾಟನೆ

ಜನಪ್ರತಿನಿಧಿ (ವಕ್ವಾಡಿ) : ಯುವಶಕ್ತಿ ಮಿತ್ರ ಮಂಡಲ (ರಿ.) ಹೆಗ್ಗಾರಬೈಲು ವಕ್ವಾಡಿ ಇದರ 28ನೇ ವಾರ್ಷಿಕೋತ್ಸವದ ಪ್ರಯುಕ್ತ ʼಯುವ ಸಂಭ್ರಮ-2025ʼ, ಶನಿವಾರ(08 ಮಾರ್ಚ್) ಸಂಜೆ, ವಕ್ವಾಡಿಯ ಪಂಚಾಯತ್‌ ವಠಾರದಲ್ಲಿ ನೂತನವಾಗಿ ನಿರ್ಮಿಸಿರುವ ದಿ. ವಿ.ಕೆ ಮೋಹನ್‌ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಜೆ 6.30ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಡ್ಯಾನ್ಸ್‌ ಮತ್ತು ವಿವಿಧ ವಿನೋದಾವಳಿ, ರಾತ್ರಿ 7.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್‌ ಕುಮಾರ್‌ ಕೊಡ್ಗಿ ಸಭಾಧ್ಯಕ್ಷತೆ ವಹಿಸಲಿದ್ದು, ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿ.ಕೆ ಮೋಹನ್‌ ಬಯಲು ರಂಗ ಮಂಟಪವನ್ನು ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಉದ್ಘಾಟಿಸಲಿದ್ದಾರೆ. ಗೀತಾನಂದ ಫೌಂಡೇಶನ್‌ ಕೋಟದ ಪ್ರವರ್ತಕರಾದ ಆನಂದ ಸಿ. ಕುಂದರ್‌ ಅವರು ವಿ.ಕೆ. ಮೋಹನ್‌ ಅವರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ರಜತಾದ್ರಿ ಗ್ರೂಪ್‌ ಆಫ್‌ ಹೋಟೇಲ್‌ ನ ಮಾಲೀಕರಾದ ಎಂ. ರಾಜು ಪೂಜಾರಿ ಅವರು ಹೈ ಮಾಸ್ಟ್‌ ದೀಪದ ಉದ್ಘಾಟನೆ, ಕಾಳಾವರ ಗ್ರಾಮ ಪಂಚಾಯತ್‌ ನ ಅಧ್ಯಕ್ಷ ಮಂಜುನಾಥ್‌ ಶೆಟ್ಟಿಗಾರ್‌ ಮಕ್ಕಳ ಪಾರ್ಕ್‌ ಉದ್ಘಾಟನೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಭಾ ಕಾರ್ಯಕ್ರಮದಲ್ಲಿ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್‌ ನ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ, ಮೊಳಹಳ್ಳಿ ದಿನೇಶ್‌ ಹೆಗ್ಡೆ ಜಯರತ್ನ ಟ್ರಸ್ಟ್‌ ಮೊಳಹಳ್ಳಿ ಇದರ ಅಧ್ಯಕ್ಷ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಉದ್ಯಮಿಗಳಾದ ವಿಠಲ ಪೂಜಾರಿ, ಸುಧೀರ್‌ ಕುಮಾರ್‌ ಶೆಟ್ಟಿ, ಸಂಪತ್‌ ಕುಮಾರ್‌ ಶೆಟ್ಟಿ, ಕುಂದಾಪುರ ತಾಲೂಕು ಕೆ.ಡಿ.ಪಿ ಸದಸ್ಯ ರಮೇಶ್‌ ಶೆಟ್ಟಿ ವಕ್ವಾಡಿ ಹಾಗೂ ಪ್ರೇಮಾ ಮೋಹನ್‌, ವಿ.ಕೆ ಗೋಪಾಲ್‌, ಪ್ರೇಮ್‌ ಸಾಗರ್‌ ಸೇರಿ ವಿ. ಕೆ ಮೋಹನ್‌ ಸ್ನೇಹಿತರು, ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

ಇದೇ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಭವಾನಿ ಎಸ್.‌ ಆಚಾರ್ಯ ಅವರಿಗೆ ಊರ ಗೌರವ ಪ್ರದಾನ ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಾಲತಿ ಶೆಟ್ಟಿಗಾರ್‌ ವಕ್ವಾಡಿ, ಕನ್ನಡ ಭಾಷಾ ಶಿಕ್ಷಕ ಡಾ. ರಾಮಮೂರ್ತಿ ಕೆ.ಎನ್‌ ಮತ್ತು ಕ್ಯಾನ್ಸರ್‌ ತಜ್ಞ ಡಾ. ಸಂತೋಷ್‌ ಕುಲಾಲ್‌ ವಕ್ವಾಡಿ ಅವರಿಗೆ ಈ ವರ್ಷದ ʼಯುವ ಸ್ಪೂರ್ತಿ ಪುರಸ್ಕಾರʼ ಪ್ರದಾನ ನಡೆಯಲಿದೆ. ಇನ್ನು, ರಾತ್ರಿ ಸಹ ಬೋಜನದ ವ್ಯಸ್ಥೆಯನ್ನೂ ಮಾಡಲಾಗಿದೆ. ಸಭಾಕಾರ್ಯಕ್ರಮದ ಬಳಿಕ ಓಂಕಾರ್‌ ಕಲಾವಿದರು ಕನ್ನುಕೆರೆ, ತೆಕ್ಕಟ್ಟೆ ಅವರಿಂದ ಸಾಮಾಜಿಕ ಹಾಸ್ಯ ನಾಟಕ ʼಆಪುದೆಲ್ಲಾ ಒಳ್ಳೆದಕ್ಕೆʼ ನಾಟಕ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!