spot_img
Saturday, February 14, 2026
spot_img

ಕುಂದಾಪುರದಲ್ಲಿ ಮತ್ತೆ ಹೋಟೆಲ್ ಶಿವಪ್ರಸಾದ್ ಆರಂಭಕ್ಕೆ ಸಿದ್ಧತೆ

 

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಕುಂದಾಪುರದಲ್ಲಿ ಐದು ದಶಕಗಳಿಂದ ಮನೆಮಾತಾಗಿದ್ದ ಶಿವಪ್ರಸಾದ ಹೋಟೆಲ್ ಸ್ಥಗಿತಗೊಂಡು ಒಂದು ದಶಕವೇ ಕಳೆದು ಹೋಗಿದೆ. ಕುಂದಾಪುರದ ’ಜನಸಮಾನ್ಯರ ಹೋಟೆಲ್’ ಎಂದೇ ಪ್ರಸಿದ್ಧಿ ಪಡೆದ ಶಿವಪ್ರಸಾದ್ ಹೋಟೆಲ್ ಬಾಗಿಲು ಮುಚ್ಚಿದ್ದು ಆಹಾರಪ್ರಿಯರಿಗೆ ಬಹಳ ನಿರಾಸೆ ಉಂಟಾಗಿತ್ತು. ಶಿವಪ್ರಸಾದ್ ಹೋಟೆಲ್‌ನಂತಹ ಹೋಟೆಲ್ ಕುಂದಾಪುರಕ್ಕೆ ಮರಳಿ ಬರಲಿಲ್ಲ. ಶಿವಪ್ರಸಾದ್ ಹೋಟೆಲ್ ಮತ್ತೆ ಬೇಕು ಎನ್ನುವ ಬೇಡಿಕೆ ಕೇಳಿ ಬರುತ್ತಲೇ ಇತ್ತು. ಈಗ ವಿಶೇಷವೆಂದರೆ ಶಿವಪ್ರಸಾದ್ ಹೋಟೆಲ್ ಪುನಃ ಕುಂದಾಪುರದ ಶಿವಪ್ರಸಾದ್ ಗ್ರ್ಯಾಂಡ್‌ನ ಕಟ್ಟಡದಲ್ಲಿ ಸ್ವಂತ ಆಡಳಿತದೊಂದಿಗೆ ಆರಂಭವಾಗುತ್ತಿದೆ. ಇದು ಕುಂದಾಪುರದ ಜನರಲ್ಲಿ ಸಂತೋಷ ತಂದಿದೆ.

ಕುಂದಾಪುರದ ಶಾಸ್ತ್ರೀ ವೃತ್ತದ ಹತ್ತಿರ ಇದ್ದ ಶಿವಪ್ರಸಾದ್ ಹೋಟೆಲ್‌ನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. ಅಲ್ಲಿನ ರುಚಿ, ಶುಚಿ, ಜನಸಾಮಾನ್ಯರ ಕೈಗೆಟುಕುವ ಬೆಲೆ ಎಲ್ಲವೂ ಅದ್ಭುತ. ಸುದೀರ್ಘ ಅವಧಿಯ ತನಕ ಕುಂದಾಪುರದಲ್ಲಿ ಮನೆ ಮಾತಾಗಿದ್ದ ಶಿವಪ್ರಸಾದ್ ಹೋಟೆಲ್ ಅರುಣ್ ಕುಮಾರ್ ಶೆಟ್ಟಿಯವರ ದಕ್ಷ ಯಜಮಾನಿಕೆಯಲ್ಲಿ ನಡೆಯುತ್ತಿತ್ತು. ಕುಂದಾಪುರ ತಾಲೂಕು ಮಾತ್ರವಲ್ಲ ಬೇರೆ ಬೇರೆ ಭಾಗದಿಂದ ಶಿವಪ್ರಸಾದ್ ಹೋಟೆಲ್ ಹುಡುಕಿಕೊಂಡು ಗ್ರಾಹಕರು ಬರುತ್ತಿದ್ದರು. ವಿದ್ಯಾರ್ಥಿಗಳ ಪಾಲಿಗೆ ಮಧ್ಯಾಹ್ನದ ಹಸಿವು ಇಂಗಿಸುವ ಸ್ಥಳವೇ ಆಗಿತ್ತು. ಅಂದಿನ ದಿನಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಊಟ, ಉಪಹಾರಗಳು ಸಿಗುತ್ತಿದ್ದ ಏಕೈಕ ಹೋಟೆಲ್ ಶಿವಪ್ರಸಾದ್ ಆಗಿತ್ತು. ಹಲವು ವರ್ಷಗಳು ಕಳೆದರು ತಿಂಡಿ, ಊಟ, ಉಪಹಾರದಲ್ಲಿಯೂ ಬದಲಾಗಲೇ ಇಲ್ಲ. ಊರು ಬಿಟ್ಟು ಹಲವು ವರ್ಷಗಳ ಬಳಿಕ ಬಂದರೂ ಶಿವಪ್ರಸಾದ್‌ಗೆ ಭೇಟಿ ಕೊಡುತ್ತಿದ್ದರು.

ಬೇಡಿಕೆ ಇರುವಂತೆಯೇ ಶಿವಪ್ರಸಾದ್ ಹೋಟೆಲ್ ಸ್ಥಗಿತವಾಯಿತು. ಹೊಸ ಕಟ್ಟಡ ನಿರ್ಮಾಣ ಉದ್ದೇಶದಿಂದ ಶಿವಪ್ರಸಾದ್ ಹೋಟೆಲ್ ಅನಿವಾರ್ಯವಾಗಿ ಕುಂದಾಪುರದಿಂದ ಮರೆಯಾಯಿತು, ಆದರೂ ಕೂಡಾ ಗ್ರಾಹಕರು ಹೊಸ ಕಟ್ಟಡದಲ್ಲಿ ಶಿವಪ್ರಸಾದ್ ಹೋಟೆಲ್ ಪುನಃ ಆರಂಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಶಿವಪ್ರಸಾದ್ ಗ್ರ್ಯಾಂಡ್ ಹೊಸ ಕಟ್ಟಡ ನಿರ್ಮಾಣವಾಯಿತು. ಬೇರೆ ಐಶಾರಾಮಿ ಹೋಟೆಲ್‌ಗಳು ಈ ಕಟ್ಟಡದಲ್ಲಿ ಬಂದವು. ಆದರೆ ಕುಂದಾಪುರದ ಜನರ ಮನಸ್ಸಿನಲ್ಲಿ ಲ್ಯಾಂಡ್ ಮಾರ್ಕ್ ಆಗಿದ್ದ ಶಿವಪ್ರಸಾದ್ ಬರಲಿಲ್ಲ ಎನ್ನುವ ಬೇಸರ ಇತ್ತು. ಆ ಸ್ಥಾನವನ್ನು ಯಾವ ಹೋಟೆಲ್‌ನಿಂದಲೂ ತುಂಬಿ ಕೊಡಲು ಆಗಲಿಲ್ಲ.

ಕುಂದಾಪುರದ ಶಾಸ್ತ್ರೀ ವೃತ್ತ ಎಂದಾಗ ತಟ್ಟನೆ ಕಣ್ಮುಂದೆ ಬರುವ ಹೋಟೆಲ್ ಶಿವಪ್ರಸಾದ್ ಸೃಷ್ಟಿಸಿದ ಹವಾ ಅಂತಹದ್ದು. ಎಲ್ಲಾ ರೀತಿಯ ಗ್ರಾಹಕರು ಇಲ್ಲಿಗೆ ಬರುತ್ತಿದ್ದರು. ರುಚಿ, ಶುಚಿ, ದರ ಮಾತ್ರವಲ್ಲ ನಗುಮೊಗದ ಸೇವೆ, ಮೇಲ್ವಿಚಾರಣೆ, ಗುಣಮಟ್ಟ ಎಲ್ಲವೂ ಕೂಡಾ ಬುದ್ಧಿವಂತ ಕುಂದಾಪುರದ ಜನರನ್ನು ಆಕರ್ಷಿಸಿತ್ತು. ಅರುಣ್ ಕುಮಾರ್ ಶೆಟ್ಟಿಯವರ ಸಮರ್ಥ ನೇತೃತ್ವದಲ್ಲಿ ಉತ್ತಮ ತಂಡ ಶಿವಪ್ರಸಾದ್‌ನಲ್ಲಿತ್ತು. ನುರಿತ ಬಾಣಸಿಗರ ತಂಡವೇ ಇಲ್ಲಿತ್ತು. ಸರಳವಾದ ಊಟ, ಬೆಳಿಗ್ಗೆ, ಸಂಜೆಯ ತಿಂಡಿ ತಿನಿಸುಗಳನ್ನು ಗ್ರಾಹಕರು ಎಂದೂ ಮರೆಯಲು ಸಾಧ್ಯವಿಲ್ಲ. ಅದೊಂದು ಕಾಲ ಇತ್ತು ಎಂದು ನೆನಪಿಸಿಕೊಳ್ಳುತ್ತಿದ್ದ ಕುಂದಾಪುರದ ಜನರಿಗೆ ಮತ್ತೆ ಅದೇ ಶಿವಪ್ರಸಾದ್ ವೈಭವ ಮರುಕಳಿಸುತ್ತಿದೆ ಎನ್ನುವ ಸಂತೋಷವಿದೆ.

ಮತ್ತೆ ಶಿವಪ್ರಸಾದ್ ಆರಂಭವಾಗುತ್ತಿದೆ. ಶೀಘ್ರ ಗ್ರಾಹಕರ ಸೇವೆಗೆ ಸಿದ್ಧವಾಗುತ್ತದೆ. ಗ್ರಾಹಕರು ಯಾವಾಗ ಆರಂಭವಾಗುತ್ತದೆ ಎನ್ನುವ ಕುತೂಹಲದಿಂದಿದ್ದಾರೆ. ಗ್ರಾಹಕರ ನಿರೀಕ್ಷೆಗೂ ಮೀರಿ ಇನ್ನಷ್ಟು ಹೊಸತನದೊಂದಿಗೆ ಅದೇ ಗತವೈಭವದೊಂದಿಗೆ ಶಿವಪ್ರಸಾದ್ ಕುಂದಾಪುರದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಮಾಲೀಕರಾದ ಅರುಣ ಕುಮಾರ್ ಶೆಟ್ಟಿ ಮತ್ತು ಅಭಿನಂದನ್ ಶೆಟ್ಟಿ ತಿಳಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!