spot_img
Sunday, February 15, 2026
spot_img

ಜೆಸಿಐ ಕುಂದಾಪುರ ಸಿಟಿ : ಸರಕಾರಿ ಪ್ರೌಢಶಾಲೆ ವಡೇರಹೋಬಳಿಯಲ್ಲಿ ʼಪರೀಕ್ಷೆ ಒಂದು ಹಬ್ಬʼ ಕಾರ್ಯಕ್ರಮ

ಜನಪ್ರತಿನಿಧಿ (ಕುಂದಾಪುರ) : ಸರಕಾರಿ ಪ್ರೌಢಶಾಲೆ ವಡೇರಹೋಬಳಿ ಕುಂದಾಪುರ ಇಲ್ಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ  ಜೆಸಿಐ ಕುಂದಾಪುರ ಸಿಟಿ ಇವರ ವತಿಯಿಂದ “ಪರೀಕ್ಷೆ ಒಂದು ಹಬ್ಬ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜೆಸಿಐ ಕುಂದಾಪುರ ಸಿಟಿ ಇದರ ಅಧ್ಯಕ್ಷರಾದ  ಜೆಸಿ ಯೂಸುಫ್ ಸಲೀಂ ಅಧ್ಯಕ್ಷತೆ ವಹಿಸಿದ್ದರು.

ಜೆಸಿಐ ಕುಂದಾಪುರ ಸಿಟಿ ಯಾ ಪೂರ್ವ ಅಧ್ಯಕ್ಷ ರಾದ ಜಯಚಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಪರೀಕ್ಷೆಯ  ಸಂದರ್ಭದಲ್ಲಿ ಯಾವದೇ ರೀತಿಯ ಸಮಸ್ಯೆ ಗಳಿಗೆ ಅವಕಾಶ ನೀಡದೆ ನಾವು ನಮಗೆ ನೀಡಿದ ಸಮಯ ಹಾಗು ಪ್ರಶ್ನೆ ಗಳಿಗೆ ಉತ್ತರಿಸುವ ಬಗ್ಗೆ ಆಲೋಚಿಸ ಬೇಕು, ಪರೀಕ್ಷೆ ಎನ್ನುವುದು ಒಂದು ಹಬ್ಬ ನಾವು ಹಬ್ಬದ ಸಂದರ್ಭದಲ್ಲಿ ಯಾವ ರೀತಿ ತಯಾರು ಮಾಡುತ್ತೇವೆ ನಮ್ಮ ಆಹಾರ,ಬಟ್ಟೆ, ಜೊತೆಗೆ ಬೇರೆ ಬೇರೆ ನಮಗೆ ಬೇಕಾದ ಸಾಮಗ್ರಿಗಳನ್ನು ತಯಾರು ಮಾಡಿ ಹಬ್ಬದ ದಿನ ಸಂಭ್ರಮ ಆಚರಿಸುತ್ತೇವೆ ಹಾಗೇಹೇ ಪರೀಕ್ಷೆಯ ಸಂದರ್ಭದಲ್ಲಿ ನಾವು ತಯಾರು ಮಾಡಿಕೊಳ್ಳಬೇಕೆಂದು  ಅವರು ನುಡಿದರು.

ಜೆಸಿಐ ವಲಯ ತರಬೇತುದಾರರಾದ JC ರಾಘವೇಂದ್ರ ಚರಣ ನಾವುಡ ವಿದ್ಯಾರ್ಥಿಗಳಲ್ಲಿ ʼಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ?ʼ ಎಂಬುದರ ಕುರಿತು   ತರಬೇತಿ ನೀಡಿದರು.

ವೇದಿಕೆಯಲ್ಲಿ  ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ  ಪೂರ್ವ ಅಧ್ಯಕ್ಷ ವಿಜಯ ಭಂಡಾರಿ ಕಾರ್ಯದರ್ಶಿ  ಕಿರಣ ದೇವಾಡಿಗ,  ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಚಂದ್ರ ಹೆಬ್ಬಾರ್ ಉಪಸ್ಥಿತರಿದ್ದು,, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದರು.

ಅಧ್ಯಾಪಕ ನಾರಾಯಣ ರಾಜು ದೇವಾಡಿಗ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!