spot_img
Sunday, February 15, 2026
spot_img

ಸಕ್ಕರೆ ಕಾರ್ಖಾನೆ ಬಹುಕೋಟಿ ಹಗರಣ | ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದ ಪ್ರಕರಣದ ತನಿಖೆ ವಿಳಂಬ : ಪ್ರತಾಪಚಂದ್ರ ಶೆಟ್ಟಿ ಆಕ್ರೋಶ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಬಹುಕೋಟಿ ವಂಚನೆಯ ಮತ್ತು ಅದರ ತನಿಖೆಯಲ್ಲಿ ವಿಳಂಬ ನೀತಿಯ ವಿರುದ್ಧ ʼಅನ್ನದಾತರ ನ್ಯಾಯಾಗ್ರಹʼ

ಜನಪ್ರತಿನಿಧಿ (ಬ್ರಹ್ಮಾವರ) : ನ್ಯಾಯಾಂಗ ಮತ್ತು ಶಾಸಕಾಂಗಳಿಂದ ಆರೋಪಿಗಳಿಗೆ ರಕ್ಷಣೆ ಒದಗಿಸುವ ವ್ಯವಸ್ಥೆಯಾಗುತ್ತದೆ ಎಂದರೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದೆ ಇದರ ಅರ್ಥ. ಸರ್ಕಾರ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಹಗರಣದ ಬಗ್ಗೆ ಜಾಣ ಮೌನ ವಹಿಸಿರುವುದು ಖಂಡನೀಯ. ಸಾರ್ವಜನಿಕ ಸ್ವತ್ತು ರಾಜಾರೋಷವಾಗಿ ಲೂಟಿಯಾಗುತ್ತದೆ ಎಂದರೇ ಇದು ನಮ್ಮ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಆರೋಪಿಗಳಿಗೆ ಪೂರಕವಾಗುವಂತೆ ನಡೆದುಕೊಂಡಿರುವ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದರು.

ಇಂದು(ಶನಿವಾರ) ಸಕ್ಕರೆ ಕಾರ್ಖಾನೆಯ ಪ್ರವೇಶ ರಸ್ತೆಯ ಬಳಿ ನಡೆಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಬಹುಕೋಟಿ ವಂಚನೆಯ ಮತ್ತು ಅದರ ತನಿಖೆಯಲ್ಲಿ ವಿಳಂಬ ನೀತಿಯ ವಿರುದ್ಧ ʼಅನ್ನದಾತರ ನ್ಯಾಯಾಗ್ರಹʼ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಕರಣದ ಬಗ್ಗೆ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಿದ್ದೇವು. ಪೊಲೀಸರು ನ್ಯಾಯಾಲಯಕ್ಕೆ ತೆರಳುವಂತೆ ಹೇಳಿದರು. ಇದು ಒಬ್ಬ ಐಪಿಎಸ್‌ ಅಧಿಕಾರಿಯ ಅಸಹಾಯಕತೆ.ಈ ರಾಜ್ಯವನ್ನು ಮುನ್ನಡೆಸುವಂತಹ ಸಂಪೂರ್ಣ ಅಧಿಕಾರವನ್ನು ಹೊಂದಿರುವಂತಹ ಇಡೀ ವ್ಯವಸ್ಥೆ ಅಸಹಾಯಕತೆಯಲ್ಲಿ ಇದೆ ಎನ್ನುವುದು ದುರಂತ ಎಂದು ಹೇಳಿದರು.

ಜಿಲ್ಲೆಯ ಯಾವೊಬ್ಬ ಚುನಾಯಿತ ಪ್ರತಿನಿಧಿಯೂ ಈ ಹಗರಣದ ಬಗ್ಗೆ ಧ್ವನಿ ಎತ್ತದೆ ಇರುವುದು ವಿಷಾದನೀಯ. ತನಿಖೆಯನ್ನು ವಿಳಂಬಗೊಳಿಸಿರುವುದರ ಬಗ್ಗೆ ರೈತರು ಖಂಡಿಸಬೇಕಿದೆ. ಪ್ರತಿಯೊಬ್ಬ ರೈತರು ಆತ್ಮಾವಲೋಕನ ಮಾಡಿಕೊಳ್ಳುವಂತಹ ದಿನ ಬಂದಿದೆ. ಈ ಬಹುಕೋಟಿ ಹಗರಣದ ಬಗ್ಗೆ ಸಂಬಂಧಪಟ್ಟ ಇಲಾಖೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದೇ ಇರುವುದು ನಾಡಿನ ರೈತರಿಗೆ ಬಗೆದ ದ್ರೋಹ ಎಂದು ಅವರು ಆಕ್ರೋಶ ಹೊರಹಾಕಿದರು.

ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದ ಈ ಪ್ರಕರಣದ ತನಿಖೆ ವಿಳಂಬವಾಗಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ನಮ್ಮ ಹೋರಾಟಕ್ಕೆ ವಿವಿಧ ಸಂಘಟನೆಗಳು ಜೊತೆಗೂಡಿರಿವುದು ಸಂತಸದ ಸಂಗತಿ. ನಮ್ಮ ಹೋರಾಟ ಯಾವುದೇ ಸರ್ಕಾರದ ವಿರುದ್ಧ ಅಲ್ಲ. ನಮ್ಮ ಹೋರಾಟ ಹದಗೆಟ್ಟಿರುವ ವ್ಯವಸ್ಥೆಯ ವಿರುದ್ಧ. ಉಡುಪಿ ಜಿಲ್ಲೆಯ ರೈತ ಸಂಘ ತಣ್ಣೀರನ್ನೂ ತಣಿಸಿ ಕುಡಿಯುವ ತಾಳ್ಮೆಯಿಂದ ಇದೆ. ಹಾಗೆಂದ ಮಾತ್ರಕ್ಕೆ ಹಗರಣದ ವಿರುದ್ಧ ಹೋರಾಟವನ್ನು ಹಿಂಪಡೆದಿದ್ದೇವೆ ಎಂದರ್ಥವಲ್ಲ. ನ್ಯಾಯ ಸಿಗುವವರೆಗೆ ನಾವು ಸತ್ಯಾಗ್ರಹ ಮುಂದುವರಿಸುತ್ತೇವೆ. ರೈತರಿಗೆ ನ್ಯಾಯ ಕೊಡಿಸುವುದರ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಮ್ಮ ಸತ್ಯಾಗ್ರಹ ನಿಲ್ಲಿಸಲ್ಲ ಎಂದು ಹೇಳಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಜಯಶೀಲ ಶೆಟ್ಟಿ ಮೊಳಹಳ್ಳಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮುಖೇನ ʼಅನ್ನದಾತರ ನ್ಯಾಯಾಗ್ರಹʼಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕರಣ ಬೆಳಕಿಗೆ ಬಂದು ಎರಡು ವರ್ಷಗಳೆ ಕಳೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಇರುವುದು ಖಂಡನೀಯ. ಹಗರಣ ಆಗಿದೆ ಎನ್ನುವುದಕ್ಕೆ ಪೂರಕ ದಾಖಲೆಗಳು ಇದ್ದರೂ ತನಿಖೆ ವಿಳಂಬ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದರು.

ಪತ್ರಕರ್ತ, ಅಂಕಣಕಾರ ರಾಜಾರಾಂ ತಲ್ಲೂರು ಮಾತನಾಡಿ, ನ್ಯಾಯದ ವಿಳಂಬ ಮಾಡುವುದು ಕೂಡ ನ್ಯಾಯಶಾಸ್ತ್ರದ ನಿರಾಕರಣೆ. ಇದು ಸತ್ಯಾಗ್ರಹ ಅಲ್ಲ. ಇಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಾಗಾಗಿ ಇದು ನ್ಯಾಯಕ್ಕಾಗಿನ ಆಗ್ರಹ. ಸತ್ಯ ಏನು ಎಂದು ಗೊತ್ತಿಲ್ಲದೆ ಇರುವವರು ಇಲ್ಲಿ ಯಾರೂ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವುದರಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ಕರ್ನಾಟಕ ಪ್ರಾಂತ್ಯ ರೈತ ಸಂಘದ ಬಾಲಕೃಷ್ಣ ಶೆಟ್ಟಿ, ಹೆಗ್ಗುಂಜೆ ರಾಜೀವ್‌ ಶೆಟ್ಟಿ ಚಾರೀಟೇಬಲ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಡಾ. ಹೆಚ್. ಎಸ್.‌ ಶೆಟ್ಟಿ ತಪ್ಪಿತಸ್ಥರಿಗೆ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ವಿಳಂಬ ನೀತಿ ಖಂಡನೀಯ ಎಂದು ಹೇಳಿದ್ದಲ್ಲದೇ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ,‌ ಸದಾನಂದ ಶೆಟ್ಟಿ ಕೆದೂರು, ಅಶೋಕ್‌ ಶೆಟ್ಟಿ ಚೋರಾಡಿ, ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಸೇರಿ ಉಡುಪಿ ಜಿಲ್ಲಾ ರೈತ ಸಂಘ(ರಿ.)ದ ಪದಾಧಿಕಾರಿಗಳು, ಸಕ್ಕರೆ ಕಾರ್ಖಾನೆಯ ಸದಸ್ಯರು, ವಿವಿಧ ರೈತ ಸಂಘಟನೆಗಳು ಮತ್ತು ಸದಸ್ಯರು, ಸಹಕಾರಿ ಕ್ಷೇತ್ರದ ಪ್ರಮುಖರು, ಪಂಚಾಯತ್ ರಾಜ್ ಒಕ್ಕೂಟದ ಪ್ರತಿನಿಧಿಗಳು ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು.

ಸತೀಶ್‌ ಕಿಣಿ ಬೆಳ್ವೆ ಸ್ವಾಗತಿಸಿದರು. ಕೃಷ್ಣರಾಜ್‌ ಶೆಟ್ಟಿ ಆವರ್ಸೆ ವಂದಿಸಿದರು. ಗಾಯಕ ಗಣೇಶ್‌ ಗಂಗೊಳ್ಳಿ ಅವರು ರೈತ ಗೀತೆಗಳನ್ನು ಹಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!