spot_img
Tuesday, March 17, 2026
spot_img

ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ ಮಂಡನೆ : ಹೊಸ ಐಟಿ ಬಿಲ್‌ನಲ್ಲಿ ಏನಿದೆ ?

ಜನಪ್ರತಿನಿಧಿ (ನವ ದೆಹಲಿ) : ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಇದೇ ಬಜೆಟ್ ಅಧಿವೇಶನದಲ್ಲಿ ಆದಾಯ ತೆರಿಗೆ ಮಸೂದೆಯನ್ನು ಸಂಸತ್ತಿನ ಮುಂದಿಟ್ಟಿದೆ.

ಇಂದು (ಗುರುವಾರ) ಮಧ್ಯಾಹ್ನ 2 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ. 622 ಪುಟಗಳಿರುವ ಐನ್ಕಮ್ ಟ್ಯಾಕ್ಸ್ ಮಸೂದೆ 2025 ಅನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಿಸಲಾಗಿತ್ತು. ಫೆಬ್ರುವರಿ 7ರಂದು ಕೇಂದ್ರ ಸಂಪುಟ ಅನುಮೋದನೆ ಕೂಡ ಮಾಡಿತ್ತು.

ಲೋಕಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಇದಾದ ಬಳಿಕ ಸಂಸತ್​ನ ಹಣಕಾಸು ಸ್ಥಾಯಿ ಸಮಿತಿಯ ಅವಗಾಹನೆಗೆ ಈ ಮಸೂದೆಯನ್ನು ಕಳುಹಿಸಲಾಗುತ್ತದೆ. ಅದಾದ ಬಳಿಕ ಏನಾದರೂ ಬದಲಾವಣೆ ಮಾಡಲಾಗಿದ್ದರೆ ಸಂಸತ್ತಿನ ಎರಡೂ ಸದನಗಳ ಬಳಿ ಈ ಮಸೂದೆ ಮರಳಿ ಬರಲಿದೆ. ಸಂಸತ್​ನಿಂದ ಅಂತಿಮ ಒಪ್ಪಿಗೆ ಮುದ್ರೆ ದೊರೆತ ಬಳಿಕ ಅದು ಕಾಯ್ದೆಯಾಗಲಿದೆ. 2026ರ ಏಪ್ರಿಲ್​ನಿಂದ ಈ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಬಹುದು.

ಆರು ದಶಕಗಳ ಹಿಂದೆ ರಚಿತವಾದ 1961ರ ಆದಾಯ ತೆರಿಗೆ ಕಾಯ್ದೆಯ ಬದಲಾಗಿ ಹೊಸ ಕಾಯ್ದೆ ತರಲು ಈ ಮಸೂದೆ ರೂಪಿಸಲಾಗಿದೆ. 622 ಪುಟಗಳು ಇದ್ದು, ಹಳೆಯ ಕಾಯ್ದೆಯ ನಿಯಮ ಮತ್ತು ಕಾನೂನುಗಳನ್ನು ಸರಳಗೊಳಿಸಲಾಗಿದೆ. ವಿವಿಧ ಸೆಕ್ಷನ್​ಗಳ ಸಂಖ್ಯೆಯನ್ನು ಶೇ. 25ರಿಂದ 30ರಷ್ಟು ಕಡಿಮೆ ಮಾಡಲಾಗಿದೆ. ಪರಿಭಾಷೆಗಳನ್ನು ಸರಳಗೊಳಿಸಲಾಗಿದೆ. ಕಾನೂನು ಪರಿಣಿತರು ಅಲ್ಲದವರಿಗೂ ಅರ್ಥವಾಗುವ ರೀತಿಯಲ್ಲಿ ಕಾನೂನು ವಿವರಿಸಲಾಗಿದೆ.

ಉದಾಹರಣೆಗೆ, ಐಟಿ ರಿಟರ್ನ್ ಫೈಲ್ ಮಾಡುವಾಗ ಅಸೆಸ್ಮೆಂಟ್ ವರ್ಷ, ಹಣಕಾಸು ವರ್ಷ ಎಂದು ಎರಡು ವರ್ಗೀಕರಣ ಇತ್ತು. ಇದು ತೆರಿಗೆ ಪಾವತಿದಾರರಿಗೆ ಗೊಂದಲ ಮೂಡಿಸುವುದಾಗಿದೆ. ಇವೆರಡರ ಬದಲು ಒಂದೇ ಟ್ಯಾಕ್ಸ್ ಇಯರ್ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನಾವು 2024-25ರ ಹಣಕಾಸು ವರ್ಷಕ್ಕೆ ತೆರಿಗೆ ಪಾವತಿಸುವಾಗ, ಅದರ ಅಸೆಸ್ಮೆಂಟ್ ವರ್ಷ 2025-26 ಎಂದು ಕರೆಯಲಾಗುತ್ತಿತ್ತು. ಈಗ ಈ ಅಸೆಸ್ಮೆಂಟ್ ಇಯರ್​ನ ಜಂಝಾಟವನ್ನು ತೆಗೆಯಲಾಗಿದೆ. ಯಾವ ವರ್ಷಕ್ಕೆ ತೆರಿಗೆ ಪಾವತಿಸುತ್ತೇವೆಯೋ ಅದನ್ನು ಆ ಟ್ಯಾಕ್ಸ್ ಇಯರ್ ಎಂದು ಪರಿಗಣಿಸಲಾಗುತ್ತದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!