spot_img
Tuesday, March 17, 2026
spot_img

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಂಭ್ರಮದ ಶ್ರೀ ಮನ್ಮಹಾರಥೋತ್ಸವ

ಜನಪ್ರತಿನಿಧಿ ವಾರ್ತೆ] ಬ್ರಹ್ಮಾವರ, ಫೆ.13: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ಫೆ.13ರಂದು ವಿಜೃಂಭಣೆಯಿಂದ ನಡೆಯಿತು.

ಮಧ್ಯಾಹ್ನ 12.30ಕ್ಕೆ ಶ್ರೀ ಮನ್ಮಹಾರಥಾರೋಹಣ ನಡೆಯಿತು. ಚಾಮುಂಡೇಶ್ವರಿ ದೇವಸ್ಥಾನದ ತನಕ ರಥ ವೈಭವದಿಂದ ಸಾಗಿಬಂತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾಭಿಮಾನಿಗಳು ಜಯಘೋಷ ಹಾಕುತ್ತಾ ರಥದೊಂದಿಗೆ ಸಾಗಿಬಂದರು. ರಥೋತ್ಸವ ಸಂದರ್ಭದಲ್ಲಿ ಡೊಳ್ಳು ಕುಣಿತ, ವಿವಿಧ ಗೊಂಬೆ ಕುಣಿತ, ಬ್ಯಾಂಡ್ ಗೋಷ್ಠಿ, ಅಂಜನೇಯ ವ್ಯಾಯಾಮ ಶಾಲೆ ಉಪ್ಪೂರು ಇವರಿಂದ ವಿವಿಧ ತಾಲೀಮು ಪ್ರದರ್ಶನ ನಡೆಯಿತು. ರಥಕ್ಕೆ ಹಣ್ಣುಕಾಯಿ ಸಲ್ಲಿಸಲು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರ ಸರದಿಯೇ ನೆರೆದಿತ್ತು. ಭಕ್ತರಿಗೆ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಶಿಲಾಮಯ ಆಧಿಸುಬ್ರಹ್ಮಣ್ಯ ದೇವಳ ಈ ಬಾರಿ ರಥೋತ್ಸವದ ವಿಶೇಷ ಆಕರ್ಷಣೆಯಾಗಿತ್ತು.

ಫೆ.9ರಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಆದಿತ್ಯವಾರ ಬೆಳಿಗ್ಗೆ 9ಗಂಟೆಯಿಂದ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮ, ರಾತ್ರಿ ಶ್ರೀ ಕ್ಷೇತ್ರದಲ್ಲಿ ವಿಘ್ನೇಶ್ವರ ಪ್ರಾರ್ಥನೆ, ರಂಗಪೂಜೆ (ಹೆಗ್ಗುಂಜೆ ದೊಡ್ಡಮನೆಯವರಿಂದ ಕಟ್ಟುಕಟ್ಟಳೆ) ಫೆ.10 ಸೋಮವಾರ ರಾತ್ರಿ 8 ಗಂಟೆಯಿಂದ ವಿಶೇಷ ಪೂಜೆ, ರಂಗಪೂಜೆ (ಹೆಗ್ಗುಂಜೆ ದೊಡ್ಡಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆಪೂಜೆ, ಫೆ.11 ಮಂಗಳವಾರ ರಾತ್ರಿ 8 ಗಂಟೆಗೆ ರಂಗಪೂಜೆ (ಹೆಗ್ಗುಂಜೆ ಹೊಸಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆಪೂಜೆ, ವಸಂತ ಪೂಜೆ ನಡೆಯಿತು.

ಫೆ.12 ಬುಧವಾರ ರಾತ್ರಿ 9 ಗಂಟೆಯಿಂದ ಕೆಂಡಸೇವೆ ನಡೆಯಿತು. ಸಹಸ್ರಾರು ಭಕ್ತರು ಗೆಂಡಸೇವೆ ಸಲ್ಲಿಸಿದರು. ರಾತ್ರಿ 3 ಗಂಟೆಯಿಂದ ಹಾಲಿಟ್ಟು ಸೇವೆ, ನಾಗದರ್ಶನ, ರಾತ್ರಿ 4ರಿಂದ ಹಿರೇ ರಂಗಪೂಜೆ, ಬಲಿ ಉತ್ಸವ, ಡಕ್ಕೆಬಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಹೆಚ್.ಧನಂಜಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ, ಅನುವಂಶಿಕ ಮೊಕ್ತೇಸರರಾದ ಹೆಚ್.ಪ್ರಭಾಕರ ಶೆಟ್ಟಿ, ಹೆಚ್.ಶಂಭು ಶೆಟ್ಟಿ, ಆರ್.ಶ್ರೀನಿವಾಸ ಶೆಟ್ಟಿ, ಹೆಚ್.ಜಯರಾಮ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಊರ ಸಮಸ್ತರು, ದೇವಳದ ಅರ್ಚಕ ವೃಂದ, ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!