spot_img
Thursday, March 19, 2026
spot_img

ಕರ್ನಾಟಕ ಬೆಸ್ಟ್ ಡ್ಯಾನ್ಸರ್ ಜೂನಿಯರ್ ಸಿಸನ್-1: ಮಾನ್ವಿ ಆರ್. ಸಾಲಿಗ್ರಾಮಗೆ ವಿಜಯಮಾಲೆ

ಕುಂದಾಪುರ: ಸ್ಪಂದನ ಟಿವಿ ರಿಯಾಲಿಟಿ ಶೋ ಕರ್ನಾಟಕ ಬೆಸ್ಟ್ ಡ್ಯಾನ್ಸರ್ (ಕೆಬಿಡಿ) ಜೂನಿಯರ್ ಸಿಸನ್-1 ಇದರಲ್ಲಿ ಮಾನ್ವಿ ಆರ್. ಸಾಲಿಗ್ರಾಮ ಗೆಲುವು ಸಾಧಿಸಿದ್ದಾರೆ.

ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದ ಆಡಿಷನ್ನಿನ 1000ಕ್ಕೂ ಮಿಕ್ಕಿ ನೃತ್ಯ ಪ್ರತಿಭೆಗಳಲ್ಲಿ, ಮೆಗಾ ಆಡಿಷನ್‌ಗೆ ಆಯ್ಕೆಯಾದ 128 ಸ್ಪರ್ಧಿಗಳಲ್ಲಿ ಕ್ವಾರ್ಟರ್ ಫೈನಲ್ 42 ಪ್ರತಿಸ್ಪರ್ಧಿಗಳಲ್ಲಿ, ಸೆಮಿಫೈನಲ್ಲಿನ 24 ಮತ್ತು ಫೈನಲ್ಲಿನ 11 ಸ್ಪರ್ಧಿಗಳ ಜಿದ್ದಾ-ಜಿದ್ದಿನ ಹೋರಾಟದಲ್ಲಿ ವಿಜಯಮಾಲೆ ಮಾನ್ವಿಗೆ ದೊರಕಿದೆ.

ಮಾನ್ವಿ ಔಷಧ ಕಂಪನಿಯೊಂದರ ಪ್ರತಿನಿಧಿ ಪಾರಂಪಳ್ಳಿಯ ರಾಜು ಮತ್ತು ಶ್ರೀಮತಿ ರೇವತಿಯವರ ಪುತ್ರಿ.

ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಫೆಬ್ರವರಿ-1ರಂದು ನಡೆದ ಅದ್ಧೂರಿಯ, ವರ್ಣರಂಜಿತ ಸಮಾರಂಭದಲ್ಲಿ ಮಹಾಗುರುವಾಗಿ ಡಿಕೆಡಿಯ ಭಜರಂಗಿ ಮೋಹನ್, ಜಜ್ಜಸ್ ಆಗಿ ಸುಮಿತ್ ಅಮೀನ್, ಸೂರಜ್ ಸನಿಲ್, ಪ್ರಿಯಾಂಕ ಶೆಟ್ಟಿ ಆಗಮಿಸಿದ್ದರು. ಟ್ವಿಸ್ಟರ್ಸ್ ಡಾನ್ಸ್ ಅಕಾಡೆಮಿ ಮೂಡಬಿದ್ರೆ ಕಾರ್ಯಕ್ರಮ ನಡೆಸಿಕೊಟ್ಟಿತು. ನಾಗರಾಜ್ ಸಂಜನಾ ಮತ್ತು ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!