spot_img
Thursday, March 19, 2026
spot_img

ಮೆಟ್ರೋ ಪ್ರಯಾಣಿಕರ ಗಮನಕ್ಕೆ | ನಮ್ಮ ಮೆಟ್ರೋ ಟಿಕೇಟ್‌ ದರ ಏರಿಕೆ : BMRCL ಅಧಿಕೃತ ಆದೇಶ

ಜನಪ್ರತಿನಿಧಿ (ಬೆಂಗಳೂರು) : ನಮ್ಮ ಮೆಟ್ರೋ  ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ನಾಳೆ(ಆದಿತ್ಯವಾರ)ಯಿಂದಲೇ ಮೆಟ್ರೋ ಪ್ರಯಾಣ ಟಿಕೆಟ್ ದರ ಏರಿಕೆಯಾಗಲಿದೆ.

ಈ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ BMRCL ಅಧಿಕೃತ ಆದೇಶ ಹೊರಡಿಸಿದೆ. ನಾಳೆ(ಆದಿತ್ಯವಾರ) ಬೆಳಗ್ಗೆ 7 ಗಂಟೆಯಿಂದಲೇ ಪರಿಷ್ಕೃತ ದರ ಜಾರಿ ಆಗಲಿದೆ.

ಮೆಟ್ರೋ ರೈಲ್ವೆ 2002ರ ಸೆಕ್ಷನ್ 34 ಕಾಯಿದೆ ಅಡಿಯಲ್ಲಿ, ಕೇಂದ್ರ ಸರ್ಕಾರ 2024 ಅಕ್ಟೋಬರ್​ 7ರಂದು ಹೈಕೋರ್ಟ್‌ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಲಾಗಿತ್ತು. ದರ ಪರಿಷ್ಕರಣೆ ಸಮಿತಿಯು ಪರಿಷ್ಕೃತ ದರದ ಶಿಫಾರಸು ವರದಿಯನ್ನು ಡಿಸೆಂಬರ್​ 16ರಂದು ಸಲ್ಲಿಸಲಾಗಿತ್ತು.

ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 37ರ ಕಾಯಿದೆಯ ಪ್ರಕಾರ ದರ ಪರಿಷ್ಕರಣೆ ಸಮಿತಿಯು ಮಾಡಿದ ಶಿಫಾರಸುಗಳು ಮೆಟ್ರೋ ರೈಲ್ವೆ ಆಡಳಿತದ ಮೇಲೆ ಬದ್ಧವಾಗಿದೆ. ಅದರಂತೆ, ಬಿ.ಎಂ.ಆರ್.ಸಿ.ಎಲ್ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ, ಪರಿಷ್ಕೃತ ದರ ನಾಳೆ  ಜಾರಿಗೆ ಬರಲಿದೆ ಎಂದು ಬಿಎಂಆರ್​ಸಿಎಲ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಷ್ಕೃತ ದರ ಹೀಗಿದೆ

  • 0-2 ಕಿಲೋ ಮೀಟರ್​​ ಪ್ರಯಾಣಕ್ಕೆ 10 ರೂ.
  • 2-4 ಕಿಲೋ ಮೀಟರ್​ ಪ್ರಯಾಣಕ್ಕೆ 20 ರೂ.
  • 4-6 ಕಿಲೋ ಮೀಟರ್​ ಪ್ರಯಾಣಕ್ಕೆ 30 ರೂ.
  • 6-8 ಕಿಲೋ ಮೀಟರ್​ ಪ್ರಯಾಣಕ್ಕೆ 40 ರೂ.
  • 8-10 ಕಿಲೋ ಮೀಟರ್​ ಪ್ರಯಾಣಕ್ಕೆ 50 ರೂ.
  • 10-15 ಕಿಲೋ ಮೀಟರ್​ ಪ್ರಯಾಣಕ್ಕೆ 60 ರೂ.
  • 15-20 ಕಿಲೋ ಮೀಟರ್​ ಪ್ರಯಾಣಕ್ಕೆ 70 ರೂ.
  • 20-25 ಕಿಲೋ ಮೀಟರ್​ ಪ್ರಯಾಣಕ್ಕೆ 80 ರೂ.
  • 25-30 ಕಿಲೋ ಮೀಟರ್​ ಪ್ರಯಾಣಕ್ಕೆ 90 ರೂ.
  • 30 ಕಿ.ಮೀ.​​ಕ್ಕಿಂತ ಹೆಚ್ಚಿನ ಪ್ರಯಾಣಕ್ಕೆ ಟಿಕೆಟ್ ದರ 90 ರೂ.

ಸ್ಮಾರ್ಟ್​ ಕಾರ್ಡ್​​ನ ಮೇಲೆ 5 ರೂ. ರಿಯಾಯಿತಿ ಮುಂದುವರಿಯಲಿದೆ. ಸ್ಮಾರ್ಟ್​​ ಕಾರ್ಡ್​​ನಲ್ಲಿ 50 ರೂ. ಮಿನಿಮಮ್​ ಹಣ ಇರಬೇಕಿತ್ತು. ಆದರೆ ಈಗ ಮಿನಿಮಮ್ 90 ರೂ. ಇರಲೇಬೇಕು. ಆ ಮೂಲಕ 40 ರೂಪಾಯಿ ಏರಿಕೆ ಮಾಡಲಾಗಿದೆ.

ಆಫ್-ಪೀಕ್ ಸಮಯದಲ್ಲಿ ಪ್ರಯಾಣಕ್ಕಾಗಿ ಮೆಟ್ರೋ ವ್ಯವಸ್ಥೆಗೆ ಪ್ರವೇಶಿಸುವ ಸಮಯವನ್ನು ಆಧರಿಸಿ, ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ಶೇ 5 ರಿಯಾಯಿತಿ ಶೇ 5 ಪೀಕ್ ಅವರ್ +ಶೇ 5 ಆಫ್ ಪೀಕ್ ಅವರ್-ಒಟ್ಟು ಶೇ 10 ರಿಯಾಯಿತಿ ನೀಡಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!