spot_img
Wednesday, March 4, 2026
spot_img

ಹಳೆಕೋಟೆ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ರೂ. 30.03 ಲಕ್ಷ ವ್ಯಯ : ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಸ್ಪಷ್ಟನೆ

ಜನಪ್ರತಿನಿಧಿ (ಸ್ಪಷ್ಟೀಕರಣ) : ʼಕುಂದಾಪುರ : ಸ್ಮಶಾನಗಳಿಗೆ ಬೇಕಿದೆ ಕಾಯಕಲ್ಪ, ಪುರಸಭೆಯ ನಿರ್ವಹಣೆಯಲ್ಲಿನ ಸ್ಮಶಾನ ದಾಖಲೆಗೆ ಮಾತ್ರʼ ಎಂಬ ತಲೆ ಬರಹದಡಿಯಲ್ಲಿ ಜನಪ್ರತಿನಿಧಿ ಪತ್ರಿಕೆಯ ಕಳೆದ ವಾರದ ಸಂಚಿಕೆಯಲ್ಲಿ(೩೦/೦೧/೨೦೨೫) ವರದಿಯೊಂದನ್ನು ಪ್ರಕಟಿಸಿತ್ತು. ವರದಿಯಲ್ಲಿ ʼಕುಂದಾಪುರದ ಸಂಗಂ ಬಳಿ ಇರುವ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟ್‌ನಿಂದ ನಡೆಸಲ್ಪಡುವ ಹಿಂದೂ ರುದ್ರಭೂಮಿಗೆ ಪುರಸಭೆಯಿಂದ ಯಾವುದೇ ಸಹಕಾರ ಇಲ್ಲ. ಪರಸಭೆಯಿಂದ ಯಾವುದೇ ಸಹಕಾರವನ್ನು ತೆಗೆದುಕೊಳ್ಳಲಾಗುತ್ತಿಲ್ಲʼ ಎಂಬ ವೆಂಕಟರಮಣ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಣೈ ಅವರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಲಾಗಿತ್ತು. ಅವರ ಹೇಳಿಕೆಗೆ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಪ್ರತಿಕ್ರಿಯಿಸಿದ್ದು, ಕುಂದಾಪುರ ಪುರಸಭೆಯ ವ್ಯಾಪ್ತಿಗೆ ಬರುವ ಹಳೆಕೋಟೆಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ನಡೆಸಲ್ಪಡುತ್ತಿರುವ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಈವರೆಗೆ ಸುಮಾರು ರೂ. 30.03 ಲಕ್ಷ ವ್ಯಯ ಮಾಡಲಾಗಿದೆ ಎಂದು ಕಾಮಗಾರಿಯ ದಾಖಲೆ ಸಹಿತ ಮಾಹಿತಿ ಮೂಲಕ ಜನಪ್ರತಿನಿಧಿ ಪತ್ರಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ.

2009-10ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿಯಿಂದ ಕುಂದಾಪುರ ಪುರಸಭೆಯ ವ್ಯಾಪ್ತಿಯ ಹಳೆಕೋಟೆ ಹಿಂದೂ ರುದ್ರಭೂಮಿ ಕಟ್ಟಡ ಅಭಿವೃದ್ಧಿಗೆ ಪುರಸಭೆಯಿಂದ 4.61 ಲಕ್ಷ, 2009-10 ನೇ ಸಾಲಿನ ಪುರಸಭಾ ನಿಧಿಯಿಂದ ಸಿಲಿಕಾನ್ ಛೇಂಬರ್ ಸರಬರಾಜು ಮಾಡಿ ಅಳವಡಿಸುವುದಕ್ಕಾಗಿ 2.30 ಲಕ್ಷ, 2015-16ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಿಂದ ರುದ್ರಭೂಮಿ ಅಭಿವೃದ್ಧಿಗೆ 3.90 ಲಕ್ಷ, 2016-17ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಿಂದ ರುದ್ರಭೂಮಿ ಅಭಿವೃದ್ಧಿಗೆ 4.90 ಲಕ್ಷ, 2018-19ನೇ ಸಾಲಿನ  ಸಾಮಾನ್ಯ ಮೂಲ ಅನುದಾನದಿಂದ ರುದ್ರಭೂಮಿ ಅಭಿವೃದ್ಧಿಗೆ 2.71ಲಕ್ಷ, 2020-21ನೇ ಸಾಲಿನ 15ನೇ  ಹಣಕಾಸು ಸಾಮಾನ್ಯ ಮೂಲ ಅನುದಾನದಿಂದ ರುದ್ರಭೂಮಿ ಅಭಿವೃದ್ಧಿಗೆ 5.50ಲಕ್ಷ, 2021-22 ನೇ ಸಾಲಿನ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಿಂದ ರುದ್ರಭೂಮಿ ಅಭಿವೃದ್ಧಿಗೆ 3.44 ಲಕ್ಷ, 2023-24ನೇ ಸಾಲಿನ ಪುರಸಭಾ ನಿಧಿಯಿಂದ ರುದ್ರಭೂಮಿ ಸಿಲಿಕಾನ್ ಛೇಂಬರ್ ಸರಬರಾಜು ಮಾಡಿ ಅಳವಡಿಸುವ  ಉದ್ದೇಶದಿಂದ 2.64 ಲಕ್ಷ ಸೇರಿ ಒಟ್ಟು ಹಳೆಕೋಟೆ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಒಟ್ಟಾರೆ 30.03 ಲಕ್ಷ ವ್ಯಯ ಮಾಡಿದ್ದಲ್ಲದೇ, ಹಳೆಕೋಟೆ ಬಳಿ ಇರುವ ಚಿಕ್ಕಮ್ಮ ದೇವಸ್ಥಾನದ ಬಳಿ ಶೌಚಾಲಯ ನಿರ್ಮಾಣಕ್ಕೆ  5. 10 ಲಕ್ಷ ಖರ್ಚು ಮಾಡಲಾಗಿದೆ ಎಂದು ಪುರಸಭೆ ಅಧ್ಯಕ್ಷರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!