spot_img
Tuesday, March 31, 2026
spot_img

ಮಂದಾರ್ತಿ ಶ್ರೀ ಆದಿಸುಬ್ರಹ್ಮಣ್ಯ ದೇವಸ್ಥಾನ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ |ಮಹಾಕುಂಭಮೇಳದ ಸಂದರ್ಭದಲ್ಲಿ ಈ ದೇವತಾ ಕಾರ್ಯ ನೆರವೇರಿದ್ದು ದೇವರ ಸಂಕಲ್ಪ-ಕೃಷ್ಣಮೂರ್ತಿ ಮಂಜರು |

 

ಜನಪ್ರತಿನಿಧಿ ವಾರ್ತೆ] ಮಂದಾರ್ತಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧಪಟ್ಟ ಶ್ರೀ ಆದಿಸುಬ್ರಹ್ಮಣ್ಯ ದೇವರ ನೂತನ ಶಿಲಾಮಯ ದೇವಸ್ಥಾನವನ್ನು ಸುಬ್ರಹ್ಮಣ್ಯ ಮಂಜರ ಸವಿನೆನಪಿಗಾಗಿ ದಾನಿಗಳಾದ ಶ್ರೀಮತಿ ವಿಶಾಲಾಕ್ಷಿ ಮತ್ತು ಮಕ್ಕಳು ಹಾಗೂ ಮೊಮ್ಮಕ್ಕಳು ಮಾರಣಕಟ್ಟೆ ಜೀರ್ಣೋದ್ದಾರಗೊಳಿಸಿದ್ದು, ಪುನರ್ ಪ್ರತಿಷ್ಠಾಪನೆ ಮಹೋತ್ಸವ ಜ.31 ಶುಕ್ರವಾರದಿಂದ ಫೆ.3 ಸೋಮವಾರದ ತನಕ ನಡೆಯಿತು.

ಫೆ.2ರಂದು ಬೆಳಿಗ್ಗೆ ಮಕರ ಲಗ್ನದಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠೆ ನೆರವೇರಿತು. ಫೆ.3 ಸೋಮವಾರ ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಸಂದರ್ಶನ, ಅನ್ನಸಂತರ್ಪಣೆ ನಡೆಯಿತು. ವೇ.ಮೂ.ಹೃಷಿಕೇಶ ಬಾಯರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು.

ಮಂದಾರ್ತಿ ದೇವಳದ ವತಿಯಿಂದ ಆದಿಸುಬ್ರಹ್ಮಣ್ಯ ದೇವಸ್ಥಾನ ಸೇವಾಕರ್ತರಾದ ಕೃಷ್ಣಮೂರ್ತಿ ಮಂಜರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಮೂರ್ತಿ ಮಂಜರು, ಶ್ರೀ ಸುಬ್ರಹ್ಮಣ್ಯ ದೇವರ ಸಂಕಲ್ಪ ಮಾತ್ರದಿಂದ ಈ ಕಾರ್ಯ ನೆರವೇರಿದೆ. ಈ ಪುಣ್ಯ ಅವಕಾಶ ನಮ್ಮ ಕುಟುಂಬಕ್ಕೆ ಲಭಿಸಿದೆ. ಉಳಿದಿರುವುದೆಲ್ಲವೂ ಶ್ರೀ ದೇವರ ನಿಶ್ಚಯದಂತೆ ನೆರವೇರಿದೆ. ಅತ್ಯಂತ ಕಾರಣಿಕ ಶ್ರೇಷ್ಠವಾದ ಈ ಕ್ಷೇತ್ರದಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಪವಾಡದ ರೀತಿಯಲ್ಲಿ ಶ್ರೀ ಆದಿಸುಬ್ರಹ್ಮಣ್ಯ ಕ್ಷೇತ್ರ ನಿರ್ಮಾಣವಾಗಿದೆ. ೧೪೪ ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ನಡೆಯುವ ಈ ಪುಣ್ಯ ಸಂದರ್ಭದಲ್ಲಿ ಉತ್ತರಾಯಣ ಕಾಲ ಶ್ರೀಪಂಚಮಿಯ ಕಾಲದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಟಾಪನೆ ಆಗಿದೆ. ಇದೆಲ್ಲವೂ ದೇವರ ಸಂಕಲ್ಪ ಎಂದೇ ಭಾವಿಸುತ್ತೇನೆ. ಇದರಲ್ಲಿ ಸಹಕಾರ ನೀಡಿದ, ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಹಣವಿದ್ದವರು ಸಮಾಜದಲ್ಲಿ ತುಂಬಾ ಜನರಿದ್ದಾರೆ. ಎಲ್ಲರಿಗೂ ಕೊಡುವ ಮನಸು ಇರುವುದಿಲ್ಲ. ಇಂಥಹ ಪುಣ್ಯ ಕಾರ್ಯಗಳಿಗೆ ಆರ್ಹವ್ಯಕ್ತಿಯನ್ನು ದೇವರೆ ಆಯ್ಕೆ ಮಾಡಿ ಅವಕಾಶ ಕೊಡುತ್ತಾನೆ. ಅಂತಹ ಅವಕಾಶ ಇವತ್ತು ಕೃಷ್ಣಮೂರ್ತಿ ಮಂಜರ ಕುಟುಂಬಕ್ಕೆ ಲಭಿಸಿದೆ. ನೂರಾರು ವರ್ಷಗಳಿಗೊಮ್ಮೆ ಸಿಗುವ ಇಂಥಹ ಅವಕಾಶಗಳು ಸಿಗುವುದು ಅತಿ ವಿರಳ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಅರ್ಚಕರು. ಬ್ರಹ್ಮಲಿಂಗನ ಪೂರ್ಣಾನುಗ್ರಹಕ್ಕೆ ಪಾತ್ರರಾದವರು. ಧರ್ಮಿಷ್ಟರು. ಮಾರಣಕಟ್ಟೆಯ ಹೈಗುಳಿ ದೇವಸ್ಥಾನ, ಕೊಲ್ಲೂರು ವೀರಭದ್ರ ದೇವಸ್ಥಾನ, ಇದೀಗ ಮಂದಾರ್ತಿ ಕ್ಷೇತ್ರದಲ್ಲಿ ಆದಿಸುಬ್ರಹ್ಮಣ್ಯನ ಕ್ಷೇತ್ರದ ಜೀರ್ಣೀದ್ದಾರ, ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ ನೆರವೇರಿಸಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮಹತ್ಕಾರ್ಯ ಅವರು ಮಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವಿಶಾಲಾಕ್ಷಿ ಅಮ್ಮನವರನ್ನು ದೇವಳದ ವತಿಯಿಂದ ಗೌರವಿಸಲಾಯಿತು. ಶ್ರೀಧರ ಮಂಜರು ದಂಪತಿಗಳು, ನಾಗರಾಜ ಮಂಜರು ದಂಪತಿಗಳನ್ನು ಗೌರವಿಸಲಾಯಿತು.

ದೇವಸ್ಥಾನದ ಅಧ್ಯಕ್ಷರಾದ ಮೊಕ್ತೇಸರರಾದ ಎಚ್.ಧನಂಜಯ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಡಿ.ಎನ್ ಜೀವರಾಜ್, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ವಿಠಲ ಶೆಟ್ಟಿ ಶೇಡಿಕೊಡ್ಲು ಉಪಸ್ಥಿತರಿದ್ದರು.

ಅನುವಂಶಿಕ ಮೊಕ್ತೇಸರರಾದ ಹೆಚ್.ಪ್ರಭಾರಕ ಶೆಟ್ಟಿ, ಹೆಚ್.ಶಂಭು ಶೆಟ್ಟಿ, ಆರ್.ಶ್ರೀನಿವಾಸ ಶೆಟ್ಟಿ, ಹೆಚ್.ಜಯರಾಮ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಯಕ್ಷಗಾನ ಕಲಾವಿದ ಗೋಪಾಲ ಗಾಣಿಗ ಆಜ್ರಿ ಅವರ ಗೃಹ ನಿರ್ಮಾಣಕ್ಕೆ ಕೃಷ್ಣಮೂರ್ತಿ ಮಂಜರು ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿದರು.

ಆಧಿಸುಬ್ರಹ್ಮಣ್ಯ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದ ಶಿಲ್ಪಿ ದಿನೇಶ ಕಾರ್ಕಳ, ಕಾಷ್ಟ ಶಿಲ್ಪಿ ಕಳಿ ಚಂದ್ರಯ್ಯ ಆಚಾರ್ಯ, ರಾಜೀವ ನಾಯ್ಕ, ಸಂದೀಪ ನಾಯ್ಕ ಮಂದಾರ್ತಿ, ಅಮ್ಮ ಕ್ರೈನ್‌ನ ಗುರು ಅವರನ್ನು ಸನ್ಮಾನಿಸಲಾಯಿತು.

ವಿಠಲ ಶೆಟ್ಟಿ ಶೇಡಿಕೊಡ್ಲು ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!