spot_img
Saturday, February 14, 2026
spot_img

ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ | ಯುವಕರಿಗೆ ಸಣ್ಣಕತೆ, ಕವನ ಸ್ಪರ್ಧೆ

ಜನಪ್ರತಿನಿಧಿ (ಮೈಸೂರು) : ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ. ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022 ರಲ್ಲಿ ಸ್ಥಾಪಿಸಿರುವ ‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ -2025’ಕ್ಕೆ ಮಹಿಳೆಯರ ಕವನ ಸಂಕಲನವನ್ನು ಆಹ್ವಾನಿಸಿದೆ.

ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

  • 2020-2024ರ ಅವಧಿಯಲ್ಲಿ ಪ್ರಥಮ ಮುದ್ರಣ ಕಂಡಿರುವ ಕವನ ಸಂಕಲನ ಪರಿಗಣನೆ.
  • ಪ್ರಶಸ್ತಿ 25,000 ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ.
  • ಆಸಕ್ತ ಪ್ರಕಾಶಕರು/ ಲೇಖಕಿಯರು ಸಂಕಲನದ ನಾಲ್ಕು ಪ್ರತಿಗಳನ್ನು ಮಾರ್ಚ್ 15 ರೊಳಗೆ ಕಳುಹಿಸಬೇಕು.

ಸಂಪರ್ಕ ವಿಳಾಸ:
ಎಂ.ಎಸ್.ವೇದಾ
ಅಲಂಪು, ಮನೆ ಸಂಖ್ಯೆ 1257, ಪಡುವಣ ರಸ್ತೆ, 4ನೇ ಕ್ರಾಸ್, ಟಿ. ಕೆ. ಬಡಾವಣೆ, 4ನೇ ಹಂತ, ಕುವೆಂಪುನಗರ, ಮೈಸೂರು.
ಸಂಪರ್ಕ ಸಂಖ್ಯೆ : 9481814836.

ಯುವ ಲೇಖಕಿಯರಿಗೆ ರಾಜ್ಯಮಟ್ಟದ ಸಣ್ಣ ಕತೆ ಸ್ಪರ್ಧೆ

ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಹಿಳೆಯರಿಂದ ‘ರಾಜ್ಯಮಟ್ಟದ ಸಣ್ಣಕತೆ ಮತ್ತು ಕವನ ಸ್ಪರ್ಧೆ-2025’ ಆಯೋಜಿಸಲಾಗಿದೆ.

20 ರಿಂದ 40 ವಯೋಮಾನದ ಲೇಖಕಿಯರು ಭಾಗವಹಿಸಬಹುದು. ಸಣ್ಣ ಕತೆಯ ಪದಮಿತಿ 2000 ಪದಗಳಾಗುದ್ದು, 20 ರಿಂದ 35 ವಯೋಮಾನದ ವಿದ್ಯಾರ್ಥಿ, ಯುವಜನರು ಭಾಗವಹಿಸಬಹುದಾಗಿದೆ.

ವಿದ್ಯಾರ್ಥಿ, ಯುವಜನರಿಗೆ ರಾಜ್ಯಮಟ್ಟದ ಕವನ ಸ್ಪರ್ಧೆ

  • 20 ರಿಂದ 35 ವಯೋಮಾನದ ವಿದ್ಯಾರ್ಥಿ, ಯುವಜನರು ಭಾಗವಹಿಸಬಹುದು. ಒಂದು ಕವನ ಕಳುಹಿಸಬೇಕು.
  • ಸಣ್ಣಕತೆ, ಕವನ ಸ್ಪರ್ಧೆಗೆ ನಿಯಮಗಳು
  • ಈ ಮೊದಲು ಎಲ್ಲಿಯೂ ಪ್ರಸಾರ/ ಪ್ರಕಟ ಆಗಿರಬಾರದು.
  • ವಯಸ್ಸಿನ ಖಚಿತತೆಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಆಧಾರ್ ಕಾರ್ಡ್ ಲಗತ್ತಿಸಬೇಕು.
  • ಪ್ರಥಮ ರೂ.5 ಸಾವಿರ, ದ್ವಿತೀಯ ರೂ. 3 ಸಾವಿರ, ತೃತೀಯ 2 ಸಾವಿರ ರೂ.
  • ಪ್ರತ್ಯೇಕ ಬಹುಮಾನಗಳಿವೆ.
  • ಕತೆ, ಕವನಗಳನ್ನು ಹಾಳೆಯ ಒಂದು ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದು ಅಥವಾ
  • ಟೈಪ್ ಮಾಡಿ, ಪ್ರತ್ಯೇಕ ಹಾಳೆಯಲ್ಲಿ ಹೆಸರು, ವಿಳಾಸ, ಫೋನ್ ಸಂಖ್ಯೆ, ಇ-ಮೇಲ್ ವಿವರ ನಮೂದಿಸಿ 03.2025 ರ ಒಳಗೆ ಕಳಿಸಬೇಕು.

ಸಂಪರ್ಕ ವಿಳಾಸ :
ಚಂದ್ರಮತಿ ಸೋಂದಾ
ನಂಬರ್: 551, 24ನೇ ತಿರುವು, ಹೆಬ್ಬಾಳ 2ನೇ ಹಂತ, ಸಂಕ್ರಾಂತಿ ಸರ್ಕಲ್,ಮೈಸೂರು.
ಸಂಪರ್ಕ ಸಂಖ್ಯೆ : 9449695304

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!