spot_img
Tuesday, March 31, 2026
spot_img

ಕೃಷಿಯ ಬಗ್ಗೆ ವಿಶೇಷ ಆಸಕ್ತಿಯಿಂದ ಯಶಸ್ಸು ಸಾಧ್ಯ-ರವಿಕಿರಣ್ ಮುರ್ಡೆಶ್ವರ

ಕುಂದಾಪುರ: ಜೆಸಿ‌ಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಅಡಿಯಲ್ಲಿ ಬಸ್ರೂರು ಕೃಷಿಕ ಹರೀಶ್ ಅಡಿಗರವರನ್ನು ಅವರ ನಿವಾಸದಲ್ಲಿ ವಕೀಲರಾದ ರವಿಕಿರಣ್ ಮುರ್ಡೇಶ್ವರ ಸನ್ಮಾನಿಸಿದರು.

ಸನ್ಮಾನ ಕಾರ್ಯಕ್ರಮ ನೆರೆವೇರಿಸಿ ಮಾತನಾಡಿದ ಅವರು ಹರೀಶ್ ಅಡಿಗರು ತಮ್ಮ ಬದುಕನ್ನು ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟು, ವಿವಿಧ ಬಗೆಯ ಬೆಳೆಗಳನ್ನು ಬೆಳೆಸುವುದರ ಮುಖೇನ ಸಮಾಜಕ್ಕೆ ಮಾದರಿಯಾಗಿದ್ದಾರೆ, ಅವರ ಮನಸ್ಸಿನ ಖುಷಿ ಅಡಗಿರುವುದು ಅವರ ಕೃಷಿ ಬದುಕಿನಲ್ಲಿ ವ್ಯವಸಾಯಕ್ಕೆ ಸಂಬಂಧಪಟ್ಟ ಹೊಸ ಹೊಸ ಉಪಕರಣಗಳನ್ನು, ಸಾಧನೆಗಳನ್ನು ಅನ್ವೇಷಣೆ ಮಾಡಿ ಬಳಕೆಗೆ ತಂದವರು, ಈ ಸಮಾಜಕ್ಕೆ ಅವರ ಕೊಡುಗೆ ಅಪಾರ, ಕೃಷಿಯಲ್ಲಿನ ನಿಷ್ಕಲ್ಮಶ ಆಸಕ್ತಿ ನಿಮ್ಮ ಸಾಧನೆಯನ್ನು ಉತ್ತಂಗಕ್ಕೆ ಏರಿಸಲಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ವಿಕಾಸ್ ಹೆಗ್ಡೆ ಮಾತನಾಡಿ ಕೃಷಿ ಕ್ಷೇತ್ರ ದಲ್ಲಿ ಅದೆಷ್ಟೋ ಸಮಸ್ಸೆ ಗಳಿದ್ದರು ಅದನ್ನು ಮನಗೊಂಡು ಕೃಷಿಯನ್ನೇ ಮಾಡಿ ಜನರ ಮನಸ್ಸಿನಲ್ಲಿ ಮನೆ ಮಾತಾಗಿದ್ದಾರೆ, ಹಾಗು ಮಾದರಿಯಾಗಿದ್ದಾರೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜೆಸಿ‌ಐ ಕುಂದಾಪುರ ಸಿಟಿಯ ಅಧ್ಯಕ್ಷರಾದ ಯೂಸುಫ್ ಸಲೀಮ್ ವಹಿಸಿದರು.

ಸಮಾರಂಭ ದಲ್ಲಿ ವಲಯ ೧೫ ರ ವಲಯಾಧಿಕಾರಿ ಸುಮ ಆಚಾರ್, ಜೆಸಿ‌ಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ನಾಗೇಶ್ ನಾವಡ, ವಿಜಯ ಭಂಡಾರಿ, ಉಪಾಧ್ಯಕ್ಷ ರಾದ ಸರೋಜಾ, ಲೇಡಿ ಜೇಸಿ ಚೈರ್ಪೆರ್ಸನ್ ಶೈಲಾ ಲೂಯ್ಸ್ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಕಿರಣ್ ಜಾಲಾಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!