spot_img
Sunday, March 22, 2026
spot_img

ಕಲಾಪೋಷಕರ ಆಶೀರ್ವಾದವೇ ಕಲಾವಿದರಿಗೆ ಶ್ರೀರಕ್ಷೆ-ವಸಂತ ಗೌಡ

ಕುಂದಾಪುರ: ಯಕ್ಷಗಾನ ಕಲೆಯು ನಮಗೆ ಬದುಕಿನ ದಾರಿ ತೋರಿಸಿದೆ. ಸರ್ವ ಸಮರ್ಪಣಾ ಭಾವದಿಂದ ರಂಗದಲ್ಲಿ ತೊಡಗಿಸಿಕೊಂಡ ಕಲಾವಿದರಿಂದ ಕಲೆ ಬೆಳಗಿದೆ, ಕಲಾವಿದನೂ ಬೆಳೆದಿದ್ದಾನೆ. ಕಲಾಪೋಷಕರ ಆಶೀರ್ವಾದವೇ ಕಲಾವಿದರಿಗೆ ಶ್ರೀರಕ್ಷೆ ಎಂದು ಹಿರಿಯ ಯಕ್ಷಗಾನ ಕಲಾವಿದ ವಸಂತ ಗೌಡ ಕಾಯರ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

ಜನವರಿ 25ರಂದು ಇಡೂರು ಕುಂಜ್ಞಾಡಿಯ ಕೇದಿಗೆಮನೆ ಆನಂದ ಶೆಟ್ಟಿ ಹಾಗೂ ಮಕ್ಕಳು ನಡೆಸಿದ ಧರ್ಮಸ್ಥಳ ಮೇಳದ ಸೇವೆ ಬಯಲಾಟದ ರಂಗವೇದಿಕೆಯಲ್ಲಿ ನಡೆದ ಸನ್ಮಾನವನ್ನು ಸ್ವೀಕರಿಸಿ ಉತ್ತರಿಸಿದರು.

ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕೆ ಹಿರಿಯ ಕಲಾವಿದರಾದ ವಸಂತ ಗೌಡ ಕಾಯರ್ತಡ್ಕ, ಹಾಗೂ ಯುವ ಪ್ರತಿಭೆ ಶರತ್ ಶೆಟ್ಟಿ ತೀರ್ಥಹಳ್ಳಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

ಸೇವಾಕರ್ತರಾದ ಆನಂದ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಶ್ರೀಕಾಂತ್.ಎಂ.ಶೆಟ್ಟಿ, ಕಾಲ್ತೋಡು, ಶಶಿಕಾಂತ್ ಶ್ಯಾನುಭಾಗ್ ಜನ್ನಾಲ್, ರಾಜಾರಾಂ ಶೆಟ್ಟಿ ಕಾಡಿನಕಲ್ಲು, ನಾಗರಾಜ ಶೆಟ್ಟಿ ಹರ್ಕೂರು ಹಾಗೂ ಮೇಳದ ಮೆನೇಜರ್ ಗಿರೀಶ್ ಹೆಗ್ಡೆ ಮತ್ತು ಪುಷ್ಪರಾಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಗಜೇಂದ್ರ ಮೋಕ್ಷ-ಶ್ರೀನಿವಾಸ ಕಲ್ಯಾಣ ಯಕ್ಷಗಾನ ಕಾರ್ಯಕ್ರಮ ಜರುಗಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!