spot_img
Wednesday, January 22, 2025
spot_img

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೆಟ್ ವರ್ಕ್ ಸಮಸ್ಯೆ ಸರಿಪಡಿಸಿ-ಜಿಲ್ಲಾಡಳಿತಕ್ಕೆ ಶಾಸಕ ಗಂಟಿಹೊಳೆ ಆಗ್ರಹ

ಜನಪ್ರತಿನಿಧಿ (ಕುಂದಾಪುರ) : ಉಡುಪಿ ಜಿಲ್ಲೆಯ ಆಡಳಿತ ಶಕ್ತಿ ಕೇಂದ್ರವಾಗಿರುವ ಜಿಲ್ಲಾಧಿಕಾರಿಗಳ ಕಚೇರಿ ಸಹಿತ ಮಣಿಪಾಲದಲ್ಲಿರುವ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಬಂದೋದಗಿದೆ.

ಸ್ವತಃ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ಹಾಗೂ ನೌಕರರ ವರ್ಗದವರೂ ಮಾಹಿತಿ ಪಡೆಯಲು ಇತರ ಕಡೆಗೆ ಕರೆ ಮಾಡಲು ಕಚೇರಿಯಿಂದ ಹೊರ ಬರುವ ಪರಿಸ್ಥಿತಿ ಇದೆ ಹಾಗೂ ಜನ ಹಾಗೂ ಜನ ಪ್ರತಿನಿಧಿಗಳಿಗೆ ಫೋನ್ ಕರೆಗೆ ಅಲಭ್ಯರಾಗಿದ್ದಾರೆ. ಕಂದಾಯ, ಜಿಲ್ಲಾ ಪಂಚಾಯತ್, ಮಹಿಳಾ, ಮಕ್ಕಳ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ನೋಂದಣಿ & ಮುದ್ರಂಕ, ನಗರ ಗ್ರಾಮಾಂತರ, ಸಹಿತ ಪ್ರಮುಖ ಇಲಾಖೆಗಳಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಹಾಗೂ ಸಂಸದರ ಕಚೇರಿಯೂ ಇರುವುದರಿಂದ ದಿನ ನಿತ್ಯ ಹಲವು ಸಮಸ್ಯೆಯೊಂದಿಗೆ ಬರುವ ಸಾರ್ವಜನಿಕರು ಅಗತ್ಯ ಮಾಹಿತಿ ಅಥವಾ ಇತರ ಸಂಪರ್ಕದ ಸಲುವಾಗಿ ಕರೆ ಮಾಡಲು ತೊಡಕಾಗುತ್ತಿದೆ. ಹಾಗೂ ಬಹು ಮಹಡಿ ಕಟ್ಟಡವಾಗಿರುವ ಜಿಲ್ಲಾ ಸಂಕೀರ್ಣದಿಂದ ಮಹಡಿಯಿಂದ ಕೆಳಗಿಳಿದು ಹೊರಗಡೆ ಬರಬೇಕಾದ ಸನ್ನಿವೇಶ ಇರುವುದಾಗಿದೆ.

ಜಿಲ್ಲಾ ಕಚೇರಿಯಲ್ಲಿ ನಡೆಯುವ ಕೆಡಿಪಿ, ದಿಶಾ ಹಾಗೂ ಕ್ಷೇತ್ರದ ಸಮಸ್ಯೆ ಗಳ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಸಮಯದಲ್ಲೂ ತುರ್ತು ಕರೆಗಳಿಗೆ ಸ್ಪಂದಿಸಲು ಆಗದ ಪರಿಸ್ಥಿತಿ ಇದ್ದು ನೆಟ್ ವರ್ಕ್ ಸಮಸ್ಯೆ ನನ್ನ ಅನುಭವಕ್ಕೂ ಬಂದಿದೆ. ಹಾಗಾಗಿ ಬಿ‌ಎಸ್‌ಎನ್ ಎಲ್ ಸಹಿತ ಖಾಸಗಿ ನೆಟ್ ವರ್ಕ್ ಸಂಸ್ಥೆಗಳಿಂದ ಉಂಟಾಗುತ್ತಿರುವ ಸಮಸ್ಯೆ ಗಳನ್ನು ಸರಿಪಡಿಸಿ ಜಿಲ್ಲಾಡಳಿತದ ಅಧಿಕಾರಿ ಸಿಬ್ಬಂದಿ ಯಾದಿಯಾಗಿ ಎಲ್ಲರೂ ಜನರಿಗೆ ಹಾಗೂ ಜನ ಪ್ರತಿನಿಧಿಗಳಿಗೆ ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೆ ಸಿಗುವ ಹಾಗೆ ಹಾಗೂ ಜಿಲ್ಲೆಯ ದೂರದ ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿ ಹೊಳೆಯವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!