spot_img
Tuesday, March 31, 2026
spot_img

ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರೊಂದಿಗೆ ಭಾಂದವ್ಯ ಬೆಸದ ಎಸ್ ಪಿ ಪಿ

ಜನಪ್ರತಿನಿಧಿ (ಬಸ್ರೂರು) : “ಆರೋಗ್ಯವಂತ ಮನಸ್ಸು ಆರೋಗ್ಯವಂತ ದೇಹ”ದಲ್ಲಿದೆ ಎಂಬ ಉಕ್ತಿಯಂತೆ  ಮಕ್ಕಳಲ್ಲಿ ಕ್ರೀಡಾಮನೋಭಾವನೆಯನ್ನು ಹೆಚ್ಚಿಸುವ ಸದುದ್ದೇಶದಿಂದ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಸ್ರೂರು ಇಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳಿಗಾಗಿ ಎರಡು ದಿನದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಯಿತು.

ಕಿಕೇಟ್‌ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಸತ್ಯನಾರಾಯಣ, ” ಮಕ್ಕಳಿಗೆ ಓದುವುದರ ಜೊತೆಗೆ ಕ್ರೀಡೆಯ ಬಗ್ಗೆ ಸದಭಿರುಚಿಯನ್ನು ಬೆಳೆಸಲು ಪಾಲಕರೊಂದಿಗೆ ಮಕ್ಕಳ ಭಾಗವಹಿಸುವಿಕೆಯಿಂದ ಹೆಚ್ಚಿನ ಬಾಂಧವ್ಯ ವೃದ್ಧಿಯಾಗುತ್ತದೆ” ಎಂದರು. ಹಾಗೂ ಕ್ರೀಡಾಳುಗಳಿಗೆ ಶುಭಕಾಮನೆಗಳನ್ನು ತಿಳಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನಕರ್ ಶೆಟ್ಟಿ ಮಾತನಾಡಿ, ಜೀವನದಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗುತ್ತಿರುವ ಶಾಲಾ ಸಂಚಾಲಕರ ಕರ‍್ಯ ವೈಖರಿಯನ್ನು ಹುರಿದುಂಬಿಸಿ ಶ್ಲಾಘಿಸಿದರು.

ಮನೋಜ್ ನಾಯರವರು ಮಾತನಾಡಿ “ಮಕ್ಕಳಿಗೆ ತಮ್ಮ ಪಾಲಕರ ಸಾಧನೆಯು ದಾರಿದೀಪವಾಗಲಿ “ಎಂದು ಹಾರೈಸಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಸಂತೋಷ ಶೆಟ್ಟಿ, “ಕ್ರೀಡಾ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕವಾಗಿ ಕರ‍್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಿ” ಎಂದು ಕ್ರೀಡಾಳುಗಳಿಗೆ ಮನವರಿಕೆ ಮಾಡಿದರು.

ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಗೌತಮ್ ಶೆಟ್ಟಿ ಟಾಪರ್ ಡೂಸ್ ಕ್ರಿಕೆಟ್ ಕ್ಲಬ್ ಕುಂದಾಪುರ , ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ದಿನಕರ್ ಶೆಟ್ಟಿ ಹಾಗೂ ದೇವಾನಂದ ಶೆಟ್ಟಿ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ  ೧೦ ತಂಡಗಳು ತಂಡಗಳು ಭಾಗವಹಿಸಿದ್ದು, ಸಂಪತ್ ಶೆಟ್ಟಿಯವರ ಮಾಲಕತ್ವದ ಶಾರದಾ ಪವರ್ ನಾಮಾಂಕಿತ  ತಂಡವು ವಿಜಯಭೇರಿ ಗಳಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಶಾರದಾ ಕಿಂಗ್ಸ್ ನಾಮಾಂಕಿತ  ತಂಡವು ಜಾವೆದ್ ಕಲಿಫ್ ಅವರ ಮಾಲಕತ್ವದ ತಂಡವು ರನ್ನರಪ್ ಆದರು. ಜಯಂತ್ ಬಳ್ಕೂರ್  ಅವರು ಸರಣಿ ಶ್ರೇಷ್ಠರಾಗಿ ಹೊರಹೊಮ್ಮಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಲಾ ಶೈಕ್ಷಣಿಕ ನಿರ್ದೇಶಕ ಪ್ರಕಾಶ್ ಶೆಟ್ಟಿ, ಕ್ರಿಕೆಟ್ ನಡೆದು ಬಂದ ಹಾದಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!