spot_img
Wednesday, April 1, 2026
spot_img

ಮಂಗಳೂರು : ಕೋಟೇಕಾರು ಬ್ಯಾಂಕ್‌ ಕೆ.ಸಿ ರೋಡ್‌ ಶಾಖೆಯಲ್ಲಿ ದರೋಡೆ

ಜನಪ್ರತಿನಿಧಿ (ದಕ್ಷಿಣ ಕನ್ನಡ) : ಕೋಟೇಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ ರೋಡ್‌ ಶಾಖೆಗೆ ನುಗ್ಗಿದ ಐದು ಮಂದಿ ದರೋಡೆಕೋರರ ತಂಡ ಬಂದೂಕು ತೋರಿಸಿ ದರೋಡೆ ನಡೆಸಿರುವ ಘಟನೆ ನಡೆದಿದೆ.

ಫಿಯಠ್‌ ಕಾರ್‌ ನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು, ಕಚೇರಿಯ ಒಳ ನುಗ್ಗಿ, ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿ ಚಿನ್ನ, ನಗದು, ಒಡವೆ ಹೊತ್ತೊಯ್ದಿದ್ದಾರೆ. ನಂತರ ಕಾರಿನಲ್ಲಿ ದೋಡೆಕೋರರು ಮಂಗಳೂರು ಕಡೆಗೆ ತೆರಳಿದ್ದಾರೆ ಎಂದು ಬ್ಯಾಂಕ್‌ ನ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ರಕ್ಷಣೆಗೆಂದು ತೆರಳಿದ ಸ್ಥಳೀಯರ ವಿರುದ್ಧವೂ ದರೋಡೆಕೋರರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!