spot_img
Tuesday, February 18, 2025
spot_img

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ: ವೈಭವದ ಬ್ರಹ್ಮರಥೋತ್ಸವ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಬ್ರಹ್ಮ ರಥೋತ್ಸವ ಜ,16 ಗುರುವಾರ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ 10.30ರ ಕುಂಭ ಲಗ್ನದಲ್ಲಿ ಶ್ರೀ ಗುರುನರಸಿಂಹ ದೇವರ ರಥಾರೋಹಣ ನಡೆಯಿತು. ನಂತರ ನಡೆದ ವಿಜೃಂಭಣೆಯ ರಥೋತ್ಸವದಲ್ಲಿ ಸಾವಿರಾರು ಜನ ಭಕ್ತಾಧಿಗಳು ಭಾಗಿಯಾದರು. ರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು.

ಮಧ್ಯಾಹ್ನ ಕೆ.ವೈ.ಶ್ರೀಕಾಂತ, ವಿಶ್ರಾಂತಿ ಭವನ ಜಯನಗರ ಬೆಂಗಳೂರು ಇವರ ಸೇವೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ 6 ಗಂಟೆಗೆ ರಥಾವರೋಹಣ ನಡೆಯಿತು. ಬಳಿಕ ಓಲಗ ಮಂಟಪ ಸೇವೆ, ಅಷ್ಟಾವಧಾನ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಕೆ.ಎಸ್ ಕಾರಂತ, ಉಪಾಧ್ಯಕ್ಷರಾದ ವೇ.ಮೂ.ಗಣೇಶಮೂರ್ತಿ ನಾವಡ ಕುಡಿನಲ್ಲಿ, ಕಾರ್ಯದರ್ಶಿ ಪಿ.ಲಕ್ಷ್ಮೀನಾರಾಯಣ ತುಂಗ ಐರೋಡಿ, ಕೋಶಾಧಿಕಾರಿ ವೇ.ಮೂ.ಪರಶುರಾಮ ಭಟ್ಟ ಎಡಬೆಟ್ಟು, ಎ.ವಿ ಶ್ರೀಧರ ಕಾರಂತ ಬೆಂಗಳೂರು, ಕೆ.ಅನಂತಪದ್ಮನಾಭ ಐತಾಳ ಕೋಟ, ವೇ.ಮೂ.ಜಿ.ಚಂದ್ರಶೇಖರ ಉಪಾಧ್ಯ ಗುಂಡ್ಮಿ, ಪಿ.ಸದಾಶಿವ ಐತಾಳ ಕೃಷ್ಣಾಪುರ, ಆರ್.ಎಂ.ಶ್ರೀಧರ ರಾವ್ ಮೀಯಪದವು, ಹಾಗೂ ತಂತ್ರಿಗಳು, ಜೋಯಿಸರು, ಪವಿತ್ರಪಾಣಿ, ಅರ್ಚಕರು, ಉಪಾಧಿವಂತರು, ಗ್ರಾಮಮೊಕ್ತೇಸರರು, ಕೂಟ ಮಹಾಜಗತ್ತು ಸಾಲಿಗ್ರಾಮ, ದೇವಳದ ಸಿಬ್ಬಂದಿಗಳು, ಊರ ಹತ್ತು ಸಮಸ್ತರು ಬ್ರಹ್ಮ ರಥೋತ್ಸವ ಸಂಭ್ರಮದಲ್ಲಿ ಶ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಕೆ.ಎಸ್ ಕಾರಂತರು, ದೇವಳದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಶ್ರೀ ಗುರು ಧಾಮ ವಸತಿ ಸಮುಚ್ಛಯವನ್ನು ಮಾರ್ಚ್ ೯ರಂದು ಗುರುವಾರ್ಪಣೆ ಮಾಡಲು ನಿಶ್ಚಯಿಸಲಾಗಿದೆ ಎಂದು ತಿಳಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!