spot_img
Tuesday, February 18, 2025
spot_img

ಕೋಟೇಶ್ವರ ಕೆಪಿ‌ಎಸ್ ಶಾಲೆ ಬಯಲು ರಂಗ ಮಂಟಪ ನಿರ್ಮಾಣಕ್ಕೆ ಯತಿದ್ವಯರಿಂದ ಶಿಲಾನ್ಯಾಸ

ಜನಪ್ರತಿನಿಧಿ ವಾರ್ತೆ (ಕುಂದಾಪುರ): ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಕೋಟೇಶ್ವರ ಶತ ಸಂಭ್ರಮ-2025ರ ಸಂದರ್ಭದಲ್ಲಿ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಫೌಂಡಶನ್ ಕೊಡುಗೆಯಾಗಿ ನೀಡುವ ಬಯಲು ರಂಗ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜ.16 ಗುರುವಾರ ಬೆಳಿಗ್ಗೆ ನೆರವೇರಿತು.

ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಶಿಲಾನ್ಯಾಸ ನೆರವೇರಿಸಿ, ಆಶೀರ್ವಚನ ನೀಡಿ, ವಿದ್ಯಾರ್ಥಿಗಳಲ್ಲಿ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳು ಬೇರೆತಾಗ ಸರ್ವಾಂಗೀಣ ಅಭಿವೃದ್ದಿ ಸಾಧ್ಯ. ಪಾಠ ಹಾಗೂ ಪಾಠೇತರ ಚಟುವಟಿಕೆಗಳು ಆತ್ಮ ಮತ್ತು ದೇಹ ಇದ್ದಂತೆ. ಒಂದಕ್ಕೊಂದು ಅವಿನಾಭಾವ ಸಂಬಂಧಹೊಂದಿವೆ. ಈ ಎರಡು ವಿಭಾಗ ಪರಿಪೂರ್ಣಗೊಂಡಾಗ ಪರಿಪೂರ್ಣ ವ್ಯಕ್ತಿಯನ್ನು ಕಾಣಲು ಸಾಧ್ಯ. ಆ ನೆಲೆಯಲ್ಲಿ ಗೋಪಾಡಿ ಶ್ರೀನಿವಾಸ ರಾಯರು ತಾವು ತಮ್ಮ ಕುಟುಂಬದವರು ಕಲಿತ ಶಾಲೆಗೆ ರಂಗ ಮಂಟಪದ ಕೊಡುಗೆ ನೀಡಲು ಮುಂದಾಗಿರುವುದು ಶ್ಲಾಘನಾರ್ಹವಾದುದು. ವಿದ್ಯೆ ನೀಡಿದ ವಿದ್ಯಾಸಂಸ್ಥೆಯನ್ನು ಮರೆಯಬಾರದು. ಅದಕ್ಕೆ ಶ್ರೀನಿವಾಸ ರಾಯರ ಕೊಡುಗೆ ಉತ್ತಮ ಉದಾಹರಣೆಯಾಗಲಿದೆ ಎಂದರು.

ಶಿಲಾನ್ಯಾಸ ನೆರವೇರಿಸಿದ ಇನ್ನೋರ್ವ ಯತಿಗಳಾದ ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಆಶೀರ್ವಚನದ ನುಡಿಗಳನ್ನಾಡಿ, ಶೈಕ್ಷಣಿಕ ಸಂಸ್ಥೆಗಳು ಅಭಿವೃದ್ಧಿಯಾಗಲು ನಾಲ್ಕು ವ್ಯವಸ್ಥೆಗಳು ಒಂದಾಗಿ ಮುನ್ನೆಡೆಯಬೇಕು. ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಬಗ್ಗೆ ಅಭಿಮಾನ ಹೊಂದಿರಬೇಕು. ಶತಮಾನೋತ್ಸವದ ಸಂಭ್ರಮದಲ್ಲಿರುವ ಈ ಶಾಲೆಗೆ ಆ ಸಂಭ್ರಮ ಇಮ್ಮುಡಿಗೊಳಿಸಲು ಉದ್ಯಮಿ ಗೋಪಾಡಿ ಶ್ರೀನಿವಾಸ ರಾಯರು ತಮ್ಮ ಫೌಂಡೇಶನ್ ಮೂಲಕ ತಾವು ಓದಿದ ಶಾಲೆಯ ಅಭಿಮಾನದಿಂದ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ಇದೊಂದು ಉತ್ತಮವಾದ ಕೆಲಸ. ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ರಾಜಧಾನಿಯ ಆಹಾರೋದ್ಯಮದ ದಿಗ್ಗಜರಾದ ಶ್ರೀನಿವಾಸ ರಾವ್ ಗೋಪಾಡಿ ಹಾಗೂ ರುಕ್ಮಿಣಿ ದಂಪತಿಗಳು ಸ್ವಾಮೀಜಿಗಳನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಧರ ವಿಠಲ್ ಕಾಮತ್, ಶತಮಾನೋತ್ಸವ ಸಮಿತಿ ಗೌರವ ಉಪಾಧ್ಯಕ್ಷರಾದ ಡಾ.ಭಾಸ್ಕರ ಆಚಾರ್ಯ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಉಡುಪ, ಕೆಪಿ‌ಎಸ್ ಕೋಟೇಶ್ವರ ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿ, ಸಿ.ಆರ್.ಪಿ ಪ್ರಕಾಶ್ ಜೋಗಿ, ಶಾಲಾ ಶೈಕ್ಷಣಿಕ ಸಮಿತಿ ಅಧ್ಯಕ್ಷರಾದ ಮನೋಹರ್ ಪೈ, ಶಾಲಾ ಶೈಕ್ಷಣಿಕ ಸಮಿತಿ ನಿಕಟಪೂರ್ವಾಧ್ಯಕ್ಷರಾದ ಜಿ.ಅಶೋಕ್ ಗೋಪಾಡಿ, ರಾಜೇಶ ಪ್ರಭು, ಕೋಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೃಷ್ಣದೇವ ಕಾರಂತ, ಇಂಜಿನಿಯರ್ ಗುರುರಾಜ ರಾವ್, ಅಮೃತ್ ತೌಳರು, ಸೀತಾರಾಮ ಧನ್ಯ, ರಾಮಚಂದ್ರ ವರ್ಣ, ಸುಬ್ಬಣ್ಣ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರ ನಾಯ್ಕ್ ಹೆಚ್ ವಂದಿಸಿದರು.

 

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!