spot_img
Tuesday, January 14, 2025
spot_img

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ | ಸಂಭ್ರಮದ ಮಕರ ಸಂಕ್ರಮಣ ಉತ್ಸವ

ಜನಪ್ರತಿನಿಧಿ (ಮಾರಣಕಟ್ಟೆ/ವಂಡ್ಸೆ) : ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ವರ್ಷಾವ ಧಿ ಮಕರ ಸಂಕ್ರಮಣ ಉತ್ಸವವು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು. ದೇಗುಲದ ಆನುವಂಶೀಯ ಆಡಳಿತ ಮೊಕ್ತೇಸರರು ಸಂಕಲ್ಪದಲ್ಲಿ ಪಾಲ್ಗೊಂಡು ಅರ್ಚಕರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ದೇವರ ಸನ್ನಿಧಿಯಲ್ಲಿ ಮಹಾ ಮಂಗಳಾರತಿ ನಡೆಯಿತು. ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕೃಷ್ಣಮೂರ್ತಿ ಮಂಜ, ಮಾಜಿ ಶಾಸಕ ಬಿ. ಎಂ ಸುಕುಮಾರ ಶೆಟ್ಟಿ ಸೇರಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರು, ಯಕ್ಷ ಹಾಗೂ ಚಿಕ್ಕು ಪಾತ್ರಿಗಳು, ಅರ್ಚಕರು, ಸಿಬಂದಿ, ಚಿತ್ತೂರು ಗುಡಿಕೇರಿ ಮನೆಯವರು, ಗ್ರಾಮಸ್ಥರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ, ಬೈಂದೂರು ಹಾಗೂ ಉಡುಪಿ ತಾಲೂಕುಗಳಿಂದ ಆಗಮಿಸಿದ 35 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ದೇವರ ಅನಾಯಾಸ ದರ್ಶನಕ್ಕೆ ಸಕಲ ಸೌಕರ್ಯ ಒದಗಿಸಲಾಗಿತ್ತು.

ಸೇವಂತಿಗೆ ಸೇವೆ

ಬುಟ್ಟಿಯಲ್ಲಿ ಸೇವಂತಿಗೆ, ಸಿಂಗಾರ ಹೂ ಸಹಿತ ಹಣ್ಣುಕಾಯಿಯೊಡನೆ ತಲೆಯ ಮೇಲೆ ಹೊತ್ತು ಶ್ರೀ ದೇವರಿಗೆ ಹರಕೆ ರೂಪದಲ್ಲಿ ಸಮರ್ಪಣೆ ಮಾಡುವ ಪದ್ಧತಿ ರೂಢಿಯಲ್ಲಿದ್ದು, ಅದಕ್ಕಾಗಿ ವಿವಿಧ ತಾಲೂಕುಗಳಿಂದ ಆಗಮಿಸಿದ ಭಕ್ತರು ಸರತಿಯಲ್ಲಿ ಸೇರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!