spot_img
Monday, March 16, 2026
spot_img

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ :ಉಡುಪಿ ಉಪನಿಬಂಧಕರ ಮಧ್ಯಂತರ ಆದೇಶ ರದ್ದುಪಡಿಸಿದ ಉಚ್ಛನ್ಯಾಯಾಲಯ

ಬೈಂದೂರು: ಜ.12ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಇದರ ಆಡಳಿತ ಮಂಡಲಿಯ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ : 19-09-2018ರಲ್ಲಿ ಸಂಘದ ಉಪನಿಯಮದ ಪ್ಯಾರಾ 47ರಲ್ಲಿ ‘ಎ’ ವರ್ಗದ ರೈತ ಸದಸ್ಯರು ಕೃಮಿಕ ಪತ್ತಿನ ಯಾದಾಸ್ತು ತಯಾರಿಸಿ ಚುನಾವಣಾ ದಿನಾಂಕಕ್ಕೆ 12ತಿಂಗಳು ಮೊದಲು ಎಂಬ ತಿದ್ದುಪಡಿ ಇದೆ. ಸಂಘದ ಸದಸ್ಯ ಶೇಖರ ಪೂಜಾರಿ ಮತ್ತು ಗೌರಿ ದೇವಾಡಿಗ ಇವರು ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ಆದೇಶ ತಂದು ನಾಮಪತ್ರ ಸಲ್ಲಿಸಿದ್ದು ಈ ತಿದ್ದುಪಡಿಯು 6 ವರ್ಷಗಳಾಗಿದ್ದು, 2020ರಲ್ಲಿ ಮಂಡಳಿಯ ಚುನಾವಣೆ ನಡೆದಿದೆ. ಉಪನಿಬಂಧಕರು 19-09-2018ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ ಇವರು ನೀಡಿರುವ ತಿದ್ದುಪಡಿ ಆದೇಶಕ್ಕೆ ದಿನಾಂಕ : 04-01- 2025ರಂದು ಮಧ್ಯಂತರ ತಡೆಯಾಜ್ಞೆ ಆದೇಶ ಹೊರಡಿಸಿರುವುದನ್ನು ಸಂಘವು ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಉಚ್ಚನ್ಯಾಯಾಲಯವು ರಿಟ್ ಅರ್ಜಿಯನ್ನು ಪುರಸ್ಕರಿಸಿ, ಸಂಘದ ಸದಸ್ಯರಾದ ಶೇಖರ ಪೂಜಾರಿ ಮತ್ತು ಗೌರಿ ದೇವಾಡಿಗ ಇವರ ನಾಮಪತ್ರ ತಿರಸ್ಕರಿಸಿ ಚುನಾವಣೆಯನ್ನು ನಡೆಸಲು ಆದೇಶಿಸಿದೆ.

ಇದು ಸತ್ಯ ಮತ್ತು ನ್ಯಾಯಕ್ಕೆ ಸಿಕ್ಕಿರುವ ಜಯವಾಗಿರುತ್ತದೆ ಎಂದು ಸಂಘದ ಹಾಲಿ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!