spot_img
Monday, March 16, 2026
spot_img

ಸಾಹಿತ್ಯ, ಬೌದ್ಧಿಕ, ಚಳುವಳಿಯ ಪ್ರಜ್ಙೆ ಚಿಮ್ಮಿದ ಕಡೆಗಳಲ್ಲಿ ನಿರಂಜನರ ಸ್ಮರಣೆ ಅಗತ್ಯ : ಚಿಂತಕ ಜಿ. ಎನ್‌ ನಾಗರಾಜ್

ಜನಪ್ರತಿನಿಧಿ (ಕುಂದಾಪುರ) : ನಿರಂಜನರ ಬಗ್ಗೆ ಸಾಹಿತ್ಯ, ಬೌದ್ಧಿಕ, ಚಳುವಳಿಯ ಪ್ರಜ್ಙೆ ಚಿಮ್ಮಿದ ಕಡೆಗಳಲ್ಲಿ ನೆನಪು ಮಾಡಿಕೊಳ್ಳಬೇಕಿರುವುದು ಅಗತ್ಯ. ನಿರಂಜನರ ಶತಮಾನೋತ್ಸವ ಹೊಸ ತಲೆಮಾರಿಗೆ ಅವರ ಬಗ್ಗೆ ತಿಳಿದುಕೊಳ್ಳಲು ಒಂದು ಅವಕಾಶ. ಅವರು ಸದಾ ಮರುಹುಟ್ಟು ಪಡೆದ ಸಾಹಿತಿ ಎಂದು ಚಿಂತಕ, ಬರಹಗಾರ ಜಿ. ಎನ್. ನಾಗರಾಜ್ ಹೇಳಿದರು.

ಸೌಹಾರ್ದ ಕರ್ನಾಟಕ,‌ಕುಂದಾಪುರ ಘಟಕ, ಇಲ್ಲಿನ ಹಂಚು ಕಾರ್ಮಿಕರ ಭವನದಲ್ಲಿ ಆಯೋಜಿಸಿದ ನಿರಂಜನ 100 ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅವಮಾನ, ನಿಂದನೆಗೊಳಗಾಗುವಂತಹ ಒಂದು ಹುಟ್ಟು ಪಡೆದು, ಸಾಹಿತ್ಯದ  ಮೂಲಕ ಮರುಹುಟ್ಟು ಪಡೆದು ಬದುಕಿದವರು ನಿರಂಜನರು. ಬದುಕಿದ್ದೆಲ್ಲವನ್ನು ನಿರ್ಭಿಡೆಯಿಂದ ಅವರ ಬರಹಗಳ ಮೂಲಕ ಪ್ರಕಟಪಡಿಸಿಕೊಂಡರು. ಅದಕ್ಕೆ ಅವರು ಬದುಕಿದ ಆಳ ಮತ್ತು ಅಗಲ ಬಹಳ ದೊಡ್ಡದು. ಗಾಂಧೀಜಿ ಹಾಗೂ ಕಾಂಗ್ರೆಸ್ ನ ಪ್ರಭಾವಕ್ಕೊಳಗಾಗಿ ಚಳುವಳಿಗೆ ಧುಮುಕಿದರು. ಕಮ್ಯುನಿಸ್ಟ್ ತತ್ವಗಳ ಸೆಳೆತಕ್ಕೊಳಗಾಗಿ ಅದರಲ್ಲಿ ತೊಡಗಿಸಿಕೊಂಡರು. ಬಹಳ ದೊಡ್ಡ ಹೋರಾಟದ ಧ್ವನಿಯಾಗಿ ಕಾಣಿಸಿಕೊಂಡರು. ಬಳಿಕ ಪ್ರಗತಿಶೀಲ ಚಳುವಳಿಗೆ ತೊಡಗಿಸಿಕೊಂಡರು. ಜನಪರತೆಯನ್ನು ಅಕ್ಷರಶಃ ಪ್ರತಿಪಾದಿಸಿದರು ಎಂದವರು ಹೇಳಿದರು.

ಬಹಳ ವಿಶೇಷವಾಗಿ ಕಾದಂಬರಿ, ಲೇಖನಗಳನ್ನು ಹೊರತಾಗಿ ಅಂಕಣ ಬರಹಗಳಿಗೂ ಸಾಹಿತ್ಯದ ಮಹತ್ವವನ್ನು ತಂದುಕೊಟ್ಟವರು ನಿರಂಜನರು. ಪ್ರಸ್ತುತ ವಿಷಯಗಳ ಬಗ್ಗೆ ಅಂದಂದಿನ ನೋಟವನ್ನು ವಿಸ್ತರಿಸುವ ಕಾರಣಕ್ಕೆ ಅಂಕಣ ಬರಹಗಳನ್ನು ಜವಾಬ್ದಾರಿಯುತವಾಗಿ ಬರೆದು ಸಾಹಿತಿ ಕೇವಲ ಜನಪ್ರಿಯತೆಗಷ್ಟೆ ಒಳಗಾಗಬಾರದು, ಜನಪರತೆಯೂ ಸಾಹಿತಿಗೆ ಇರಬೇಕು ಎಂದು ಅವರು ತೋರಿಸಿಕೊಟ್ಟವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೇಜಸ್ವಿನಿ ನಿರಂಜನ ಬರೆದ ʼನಿರಂಜನ ಬದುಕು ಬರಹಗಳ ಕತೆʼ ಹಾಗೂ ಎಚ್.‌ ಅರ್‌ ನವೀನ್‌ ಕುಮಾರ್‌ ಬರೆದ ರೈತರಿಗಾಗಿ ನಿರಂಜನʼ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಸೌಹಾರ್ದ ಕರ್ನಾಟಕದ ಉಡುಪಿ ಜಿಲ್ಲಾ ಘಟಕದ ವಿ. ಚಂದ್ರಶೇಖರ್ ಸಭಾ ಅಧ್ಯಕ್ಷತೆ ವಹಿಸಿದ್ದರು. ಸೌಹಾರ್ದ ಕರ್ನಾಟಕದ ಉಡುಪಿ ಜಿಲ್ಲಾ ಘಟಕದ ರಮೇಶ್ ಪ್ರಸ್ತಾವಿಸಿ ಸ್ವಾಗತಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!