spot_img
Wednesday, April 1, 2026
spot_img

ಜ.12ರಂದು ಕುಂದಾಪುರದಲ್ಲಿ ಇನಿದನಿ| ರಾಜ್ಯದ ಪ್ರಸಿದ್ಧ ಗಾಯಕರು, ಹಿನ್ನೆಲೆ ಸಂಗೀತ ಕಲಾವಿದರು ಕುಂದಾಪುರಕ್ಕೆ

ಜನಪ್ರತಿನಿಧಿ ವಾರ್ತೆ (ಕುಂದಾಪುರ) ಕಲಾಕ್ಷೇತ್ರ -ಕುಂದಾಪುರ ಟ್ರಸ್ಟ್ ಆಯೋಜನೆಯಲ್ಲಿ ಜರಗುವ ಹಳೆಯ ಕನ್ನಡ ಚಿತ್ರಗೀತೆಗಳ ಮಧುರ ಮಾರ್ಧನಿ ಇನಿದನಿ ಗಾನ ಮಾಧುರ್ಯ ಜನವರಿ 12 ರವಿವಾರ ಸಂಜೆ 6 ಗಂಟೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ನಡೆಯಲಿದೆ ಎಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಹೇಳಿದರು.

ಅವರು ಕಲಾಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಾಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಮುಖ ಗಾಯಕರಾಗಿ ರಮೇಶ್ಚಂದ್ರ ಬೆಂಗಳೂರು, ಶೃತಿ ಭಿಡೆ ಬೆಂಗಳೂರು, ಮೋಹನ ಕೃಷ್ಣ ಬೆಂಗಳೂರು, ಮಾಲಿನಿ ಕೇಶವ ಪ್ರಸಾದ್ ಮಂಗಳೂರು, ವೈ.ಎಸ್ ರವೀಂದ್ರ, ಅಶೋಕ್ ಸಾರಂಗ್ ಕುಂದಾಪುರ, ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ, ಕಮಲ್ ಕುಂದಾಪುರ ಭಾಗವಹಿಸಲಿದ್ದಾರೆ.

ವಾದ್ಯವೃಂದದಲ್ಲಿ ರಾಜ್ ಗೋಪಾಲ್ ಮಂಗಳೂರು, ದೀಪಕ್ ಶಿವಮೊಗ್ಗ, ರಾಜೇಶ್ ಭಾಗವತ್, ಭಾಸ್ಕರ ಕುಂಬ್ಳೆ, ಗಣೇಶ ನವಗಿರಿ, ವಾಮನ ಕುಮಾರ್ ಕಾರ್ಕಳ, ಕೇರಳದ ಶಿಜಿಮೂನ್, ದೀಪಕ್ ಬೆಂಗಳೂರು, ಸುಮುಖ್, ಅಭಿಷೇಕ್, ಟೋನಿ ಡಿಸಿಲ್ವಾ ಭಾಗವಹಿಸಲಿದ್ದಾರೆ. ವಿದ್ವಾನ್ ಕೆ.ವಿ ರಮಣ್ ಮೂಡುಬಿದಿರೆ ನಿರ್ವಹಣೆ ಮಾಡಲಿದ್ದಾರೆ ಎಂದರು.

ಕಳೆದ 12ವರ್ಷಗಳಿಂದ ಇನಿದನಿಯಲ್ಲಿ ಹೊಸತನ, ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಈ ಬಾರಿ ಸ್ಥಳೀಯ ಕೊರಸ್ ತಂಡವನ್ನು ಪರಿಚಯಿಸಲಾಗುತ್ತಿದೆ. ಅದಕ್ಕಾಗಿ ಸ್ಥಳೀಯ ಪ್ರತಿಭೆಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಐದು ಜನರು ಕೊರಸ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಬಾರಿ 27 ಹಾಡುಗಳನ್ನು ಇನಿದನಿಯಲ್ಲಿ ಹಾಡಲಿದ್ದು, ಅದರಲ್ಲಿ 11 ಹಾಡಿಗೆ ಕೊರಸ್ ಅವಶ್ಯಕತೆ ಇದೆ. ಈ ಬಾರಿ ಕೂಡಾ 2000 ಇಸವಿಗಿಂತ ಹಿಂದಿನ ಕನ್ನಡ ಚಿತ್ರಗೀತೆಗಳನ್ನೇ ಆಯ್ದುಕೊಳ್ಳಲಾಗಿದೆ ಎಂದರು.

ಮಾಧುರ್ಯ ಪ್ರಧಾನವಾದ ಸಿನಿಮಾ ಗೀತೆಗಳನ್ನು ಮಧುರವಾಗಿ ಪ್ರಸ್ತುತ ಪಡಿಸಿ, ಅಬ್ಬರದ ಸಂಗೀತವಿಲ್ಲದ, ಕೇಳಲು ಸುಶ್ರಾವ್ಯ ಎನಿಸುವ ಗೀತೆಗನ್ನು ಆಯ್ದು ಹಾಡಿಸುವುದು ಇನಿದನಿಯ ವೈಶಿಷ್ಟ್ಯ. ಹಾಗಾಗಿ ಇನಿದನಿ ಸಾಮಾನ್ಯ ರಸಮಂಜರಿಯಂತಲ್ಲದೆ ಅದೊಂದು ಅನನ್ಯ ಸಂಗೀತಾನುಭೂತಿಯನ್ನು ಕೇಳುಗರಿಗೆ ಉಣ ಬಡಿಸುತ್ತದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಈ ಬಾರಿ ಇನ್ನೂ ಹೆಚ್ಚು ಸಂಗೀತಾಸಕ್ತರನ್ನು ನಿರೀಕ್ಷಿಸಲಾಗಿದೆ ಎಂದರು.

ಕಲಾಕ್ಷೇತ್ರ ತನ್ನದೆಯಾದ ದೃಷ್ಟಿಕೋನ, ವಿಶಿಷ್ಠವಾದ ಯೋಚನೆ, ವಿಭಿನ್ನವಾದ ಆಯೋಜನೆಯಿಂದ ಪ್ರಸಿದ್ಧಿ ಪಡೆದಿದೆ. ಲಗೋರಿ, ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ, ಕನ್ನಡ ರಥೋತ್ಸವ, ಕನ್ನಡ ಹಬ್ಬ ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ಸನ್ನು ಕಂಡಿದೆ. ಅದೇ ರೀತಿ ಇನಿದನಿ ಕೂಡ ಕಳೆದ 12 ವರ್ಷಗಳಿಂದ ಹಳೆಯ ಕನ್ನಡ ಚಿತ್ರಗೀತೆಗಳ ಇಂಪನ್ನು ಪಸರಿಸಿ ಕೇಳುಗರ ಕರ್ಣಾನಂದಕ್ಕೆ ಕಾರಣವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್ ನಾಯಕ್, ಪ್ರಧಾನ ಕಾರ್ಯದರ್ಶಿ ವಿಕ್ರಮ್ ಪೈ, ಪ್ರವೀಣ್ ಕುಮಾರ್, ದಾಮೋದರ ಪೈ, ಸನತ್ ಕುಮಾರ್ ರೈ, ಶ್ರೀಧರ, ಅನಿಲ್, ಸಾತ್ವಿಕ್ ಉಪಸ್ಥಿತರಿದ್ದರು. ರಾಜೇಶ ಕಾವೇರಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!