spot_img
Thursday, March 26, 2026
spot_img

ಸರ್ಕಾರಿ ಗೋಶಾಲೆಗೆ ಗೋವುಗಳನ್ನು ತಲುಪಿಸುವ ಜವಾಬ್ದಾರಿ ನಮ್ಮದು- ಶಾಸಕ ಗುರುರಾಜ್‌ ಗಂಟಿಹೊಳೆ

ಬೈಂದೂರು:   ಗೋಶಾಲೆಗಳಿಗೆ ಅಗತ್ಯ ಪ್ರಮಾಣದಲ್ಲಿ ಗೋವುಗಳು ಬರುತ್ತಿಲ್ಲ ಹಾಗಾಗಿ ಹೊಸ ಗೋಶಾಲೆಗಳನ್ನು  ನಿರ್ಮಿಸುವ ಬದಲು ಈಗಿರುವ ಗೋಶಾಲೆಗಳನ್ನು ಬಲವರ್ಧನೆ ಮಾಡುತ್ತೇವೆ ಎಂಬ  ಸಚಿವರು ನೀಡಿರುವ ಹೇಳಿಕೆ ಹಾಗೂ ಸ್ಪಷ್ಟೀಕರಣಕ್ಕೆ ಶಾಸಕ ಗುರುರಾಜ್‌ ಗಂಟೊಹೊಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಇರುವ ಗೋಶಾಲೆ ಗಳಿಗೆ ಗೋವುಗಳು ಬರುತ್ತಿಲ್ಲ ಎಂದು ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುವಂತೆ ಹೇಳಿಕೆ ಸರಿಯಲ್ಲ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಗೋ ಶಾಲೆಗಳು ಇದ್ದರೂ ಯಾರೂ ಕೂಡ ಗೋವುಗಳನ್ನು ತೆಗೆದು ಕೊಳ್ಳುವ ಪರಿಸ್ಥಿಯಲ್ಲಿ ಇಲ್ಲ. ಹಾಗಿರುವಾಗ  ಯಾವ ಆಧಾರದಲ್ಲಿ ಗೋಶಾಲೆ ಗಳಿಗೆ ಗೋವುಗಳು ಬರುತ್ತಿಲ್ಲ ಎಂದು ಹೇಳುತ್ತಾರೆ ಎಂದು ಪ್ರಶ್ನಿಸಿದರು.
 ಜಿಲ್ಲೆಗೆ ಒಂದರಂತೆ ಎಲ್ಲಾ ಜಿಲ್ಲೆ ಗಳಿಗೂ ಸರಕಾರಿ ಗೋ ಶಾಲೆ ನಿರ್ಮಾಣವಾಗಲೆಬೇಕು. ಹಾಗೂ ಜಿಲ್ಲೆಯೊಳಗೆ ಅಗತ್ಯ ಇದ್ದ ಕಡೆ ತಾಲೂಕಿಗೂ ಒಂದರಂತೆ ಸರಕಾರಿ ಗೋಶಾಲೆ ನಿರ್ಮಾಣಕ್ಕೆ ಕ್ರಮವಾಗಬೇಕು.
ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನ ನಿತ್ಯ ಬೀಡಾಡಿ ಗೋವುಗಳು ಅಪಘಾತದಲ್ಲಿ ಸಾವನಪ್ಪುತ್ತಿದೆ. ಹಾಗಾಗಿ ಬೈಂದೂರಿಗೆ ಹೊಸ ಗೋಶಾಲೆ ಮಂಜೂರುಮಾಡಲಿ ಗೋಶಾಲೆಗೆ ಪೂರ್ತಿ ಗೋವುಗಳನ್ನು ಬರುವ ಹಾಗೆ ಮಾಡುವ ಜವಾಬ್ದಾರಿ ನಮ್ಮದು. ಆದಷ್ಟು ಬೇಗ ಸರ್ಕಾರಿ ಗೋ ಶಾಲೆ ಮಂಜೂರು ಮಾಡಲಿ ಎಂದು ಶಾಸಕರು ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!