spot_img
Thursday, March 26, 2026
spot_img

ಗುಲ್ವಾಡಿ ಹಾಡಿದೈವದಮನೆ: ಜ.14ರಿಂದ ಜ.17: ಶ್ರೀ ನಂದಿಕೇಶ್ವರ, ಚಿಕ್ಕಮ್ಮ, ಹೈಗುಳಿ ಸಪರಿವಾರ ದೈವಸ್ಥಾನ ನೂತನ ಶಿಲಾಮಯ ದೈವಸ್ಥಾನ ಲೋಕಾರ್ಪಣೆ

ಜನಪ್ರತಿನಿಧಿ ವಾರ್ತೆ (ಕುಂದಾಪುರ):  ಕುಂದಾಪುರ ತಾಲೂಕು ಗುಲ್ವಾಡಿ ಹಾಡಿದೈವದಮನ ಶ್ರೀ ನಂದಿಕೇಶ್ವರ, ಚಿಕ್ಕಮ್ಮ, ಹೈಗುಳಿ ಸಪರಿವಾರ ದೈವಸ್ಥಾನ ನೂತನ ಶಿಲಾಮಯ ದೈವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಜ.14ರಿಂದ ಜ.17ರ ತನಕ ನಡೆಯಲಿದೆ.
ಜ.14ರಂದು ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯೊಳಗೆ ದೈವಗಳ ಸಾನಿಧ್ಯದಲ್ಲಿ ನಾಗದೇವರ ಪುನರ್ ಪ್ರತಿಷ್ಠಾಪನೆ, ರಾತ್ರಿ 7.30ರಿಂದ 8.30ರ ಮಧ್ಯದಲ್ಲಿ ಒದಗುವ ಸಿಂಹಲಗ್ನ ಸುಮುಹೂರ್ತದಲ್ಲಿ ಸಪರಿವಾರ ಶ್ರೀ ನಂದಿಕೇಶ್ವರ, ಚಿಕ್ಕಮ್ಮ, ಹೈಗುಳಿ ದೈವಗಳ ಪ್ರತಿಷ್ಠಾಪನೆ ನಡೆಯಲಿದೆ.
ಜ.15 ಬುಧವಾರ ಧರ್ಮದೈವಗಳಿಗೆ ಅಷ್ಟೋತ್ತರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ದೈವ ಸಂದರ್ಶನ, ಅನ್ನದಾನ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ವೇ.ಮೂ.ಶ್ರೀನಿವಾಸ್ ಉಪಾಧ್ಯಾಯ ಅರೆಕಲ್ಲು ಮಠ ಗುಲ್ವಾಡಿ ಇವರ ಪ್ರಧಾನ ಆಚಾರ್ಯತ್ವದಲ್ಲಿ ನಡೆಯಲಿದೆ.
ಜ.16ರಂದು ರಾತ್ರಿ 8 ಗಂಟೆಗೆ ವಾರ್ಷಿಕ ಗೆಂಡಸೇವೆ, ಜ.17ರಂದು ಶುಕ್ರವಾರ ಬೆಳಿಗ್ಗೆ ನಾಗದೇವರಿಗೆ ಹಾಲಿಟ್ಟು ಸೇವೆ, ಧರ್ಮದೈವಗಳಿಗೆ ಡಕ್ಕೆಬಲಿ ಹಾಗೂ ತುಲಾಭಾರ ಸೇವೆ ನಡೆಯಲಿದೆ.
ಜ.13ರಂದು ಬೆಳಿಗ್ಗೆ 8 ಗಂಟೆಗೆಯಿಂದ ಗುಲ್ವಾಡಿ ನಾಲ್ಕು ಮನೆಯವರು ನಂಬಿಕೊಂಡು ಬಂದಿರುವ ಮೂಲ ಈಶ್ವರ ಸಾನಿಧ್ಯದಲ್ಲಿ ಅನುಗೃಹ ಪ್ರಾಪ್ತಿಗಾಗಿ ‘ಮಹಾರುದ್ರಯಾಗ’ ನಡೆಯಲಿದೆ.
ಜ.15 ಬುಧವಾರ ಸಂಜೆ 3.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಶ್ರೀ ವಿಷ್ಣುಮೂರ್ತಿ ಪೀಠಂ ಸುಬ್ರಹ್ಮಣ್ಯ ಮಠದ ಡಾ.ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.
ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯರಾದ ವಿದ್ವಾನ್ ಮಾಧವ ಅಡಿಗರು ಧಾರ್ಮಿಕ ಪ್ರವಚನ ನೀಡಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ನರಸಿಂಹ ಮೂರ್ತಿ ಉಪಾಧ್ಯಾಯ ಅರೆಕಲ್ಲು ಮಠ ಗುಲ್ವಾಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ್ ಶೆಟ್ಟಿ, ಸೌಕೂರು ದೇವಸ್ಥಾನದ ಆಡಳಿತ ಮೊಕ್ತೇಸರರು, ಗುಲ್ವಾಡಿ ದೊಡ್ಮನೆ ಸುಧಾಕರ ಶೆಟ್ಟಿ, ಭಾಸ್ಕರ ಶೆಟ್ಟಿ, ಜಿ.ರವೀಂದ್ರನಾಥ ಶೆಟ್ಟಿ, ಹಟ್ಟಿಯಂಗಡಿ ಲೋಕನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ಸಬ್ಲಾಡಿ ಪಟೇಲರಮನೆ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ನೂತನ ಶಿಲಾಮಯ ದೇಗುಲದ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಜ.15ರ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂಜೆ 5.30ರಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 8 ಗಂಟೆಯಿಂದ ಸೌಕೂರು ಮೇಳದವರಿಂದ ಯಕ್ಷಗಾನ ಸಂಪೂರ್ಣ ಶ್ರೀದೇವಿ ಮಹಾತ್ಮೆ ಪ್ರದರ್ಶನಗೊಳ್ಳಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!