spot_img
Sunday, February 15, 2026
spot_img

ಕ್ಯಾನ್ಸರ್‌ ಗೆದ್ದ ಶಿವಣ್ಣ : ಐ ವಿಲ್ ಬಿ ಬ್ಯಾಕ್ ವಿಥ್‌ ಡಬಲ್‌ ಪವರ್‌ : ಶಿವರಾಜ್‌ ಕುಮಾರ್‌

ಜನಪ್ರತಿನಿಧಿ (ಬೆಂಗಳೂರು) : ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್​ಕುಮಾರ್ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಯಶಸ್ವಿ ಸರ್ಜರಿ ಬಳಿಕ ಪತ್ನಿ ಗೀತಾ ಶಿವರಾಜ್​ಕುಮಾರ್, ಬಾಮೈದ ಮಧು ಬಂಗಾರಪ್ಪ ಮತ್ತು ವೈದ್ಯರು ವಿಡಿಯೋ ಸಂದೇಶ ಹಂಚಿಕೊಂಡಿದ್ದರು. ಜನಪ್ರಿಯ ನಟ ಚೇತರಿಸಿಕೊಳ್ಳುತ್ತಿದ್ದು, ಸದ್ಯ ಗೀತಾ ಮತ್ತು ಶಿವರಾಜ್​ಕುಮಾರ್ ಅಭಿಮಾನಿಗಳಿಗಾಗಿ ವಿಡಿಯೋ ಶೇರ್ ಮಾಡಿದ್ದಾರೆ.

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಗೀತಾ ಶಿವರಾಜ್​ಕುಮಾರ್, ”ಎಲ್ಲರಿಗೂ ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ನಿಮ್ಮ ಪ್ರಾರ್ಥನೆ ಫಲಿಸಿತು. ರಿಪೋರ್ಟ್​​​ಗಳೆಲ್ಲವೂ ನೆಗೆಟಿವ್​ ಎಂದು ಬಂದಿದೆ. ಇದೀಗ ವೈದ್ಯರು ಅಧಿಕೃತವಾಗಿ ಕ್ಯಾನ್ಸರ್​ ಫ್ರೀ ಎಂದು ಘೋಷಿಸಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದದಿಂದ ಶಿವರಾಜ್​ಕುಮಾರ್​ ಅವರು ಚೇತರಿಸಿಕೊಳ್ಳಲು ಸಾಧ್ಯವಾಯಿತು. ನಾನಿದನ್ನು ನನ್ನ ಬದುಕಲ್ಲಿ ಎಂದಿಗೂ ಮರೆಯುವುದಿಲ್ಲ ಎಂದರು.

ನಟ ಶಿವರಾಜ್‌ ಕುಮಾರ್‌ ಮಾತನಾಡಿ, ”ಎಲ್ಲರಿಗೂ ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ಮಾತಾಡ್​ಬೇಕಾದ್ರೆ ಎಲ್ಲಿ ಭಾವುಕನಾಗುತ್ತೇನೆಂದು ಸ್ವಲ್ಪ ಭಯ ಆಗುತ್ತೆ. ಯಾಕಂದ್ರೆ ಅಲ್ಲಿಂದ ಹೊರಡಬೇಕಾದ್ರೆ ಸ್ವಲ್ಪ ಎಮೋಶನಲ್​ ಆಗಿದ್ದೆ. ಮನುಷ್ಯನಿಗೆ ಭಯ ಅನ್ನೋದು ಇದ್ದೇ ಇರುತ್ತೆ. ಆ ಭಯ ನೀಗಿಸೋಕ್ಕೆಂದೇ ಅಭಿಮಾನಿ ದೇವರುಗಳಿರುತ್ತಾರೆ. ಸಹನಟರಿರುತ್ತಾರೆ, ಸ್ನೀಹಿತರು ಇರುತ್ತಾರೆ, ಸಂಬಂಧಿಕರಿರುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಟ್ರಾಂಗ್​ ಹ್ಯಾಂಡ್​ ವೈದ್ಯರಿರುತ್ತಾರೆ. ಹೀಗೆ ಪ್ರತಿಯೊಬ್ಬರು ನೋಡಿಕೊಂಡ ರೀತಿ ನನಗೆ ಧೈರ್ಯ ಕೊಟ್ಟಿತು” ಎಂದರು.

ಎಲ್ಲರ ಸಹಕಾರದಿಂದ ಆರಾಮಾಗಿ ಇದ್ದೆ, ಶೂಟಿಂಗ್​ಗೆ ಹೋಗುತ್ತಿದ್ದೆ. ಅದ್ಯಾವ ಜೋಶ್​ ಬಂತೋ ನನಗೂ ಗೊತ್ತಿಲ್ಲ. ಹಾಗೆ ನೋಡೋಕ್ಕೋದ್ರೆ ’45’ ಇಡೀ ಸಿನಿಮಾದ ಚಿತ್ರೀಕರಣವನ್ನು ಕಿಮೋ ಥೆರಪಿ ಮಾಡುತ್ತಿರುವಾಗಲೇ ಮಾಡಿದ್ದೇನೆ. ಹೀಗೆ ಎಲ್ಲವೂ ಆಯ್ತು. ಹೊರಡೋ ಸಮಯ ಹತ್ತಿರ ಬರುತ್ತಿದ್ದಂತೆ ಟೆನ್ಷನ್​​ ಹೆಚ್ಚಾಯಿತು. ಬರುವ ಮುನ್ನ ಎಲ್ಲರೂ ನನಗೆ ಧೈರ್ಯ ತುಂಬಿದ್ರು. ವಿಶೇಷವಾಗಿ ಗೀತಾ ಬಗ್ಗೆ ಹೇಳಲೇಬೇಕು. ಗೀತಾ ಇಲ್ಲದೇ ಶಿವರಾಜ್​​ಕುಮಾರ್ ಇಲ್ಲ. ಮಧು ಬಂಗಾರಪ್ಪ ನನ್ನನ್ನು ಮಗುವಿನಂತೆ ನೋಡಿಕೊಂಡಿದ್ದಾರೆ. ಹೀಗೆ ಎಲ್ಲರ ಸಹಕಾರ ದೊಡ್ಡ ಮಟ್ಟದಲ್ಲಿತ್ತು. ನಿಮ್ಮೆಲ್ಲರ ಪ್ರಾರ್ಥನೆ, ಶುಭಹಾರೈಕೆಯನ್ನು ನಾನೆಂದಿಗೂ ಮರೆಯೋದಿಲ್ಲ. ಶೀಘ್ರವೇ ವಾಪಸ್ಸಾಗುತ್ತೇನೆ. ಐ ವಿಲ್​ ಬಿ ಬ್ಯಾಕ್​. ಡಬಲ್​ ಪವರ್​​ನೊಂದಿಗೆ ಬರುತ್ತೇನೆ. ನಿಮ್ಮ ಆಶೀರ್ವಾದ ಇರೋವರೆಗೂ ನಾನು ಖಂಡಿತಾ ಚೆನ್ನಾಗಿರುತ್ತೇನೆ. ಈ ಪ್ರೀತಿ ವಿಶ್ವಾಸವನ್ನು ನಾನೆಂದಿಗೂ ಮರೆಯೋದಿಲ್ಲ. ಲವ್​ ಯೂ ಆಲ್​ ಎಂದು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!