spot_img
Monday, March 16, 2026
spot_img

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘ : ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ | ಕಾಂಗ್ರೆಸ್‌ ಗೆ ಒಂಬತ್ತು, ಬಿಜೆಪಿಗೆ ನಾಲ್ಕು ಸ್ಥಾನ !

ಜನಪ್ರತಿನಿಧಿ (ಕೋಟೇಶ್ವರ) : ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಬೆಂಬಲಿತ ಗುಂಪಿಗೆ ಒಂಬತ್ತು ಸ್ಥಾನ ಹಾಗೂ, ಬಿಜೆಪಿ ಬೆಂಬಲಿತ ಗುಂಪಿಗೆ ನಾಲ್ಕು ಸ್ಥಾನ ದೊರಕಿದೆ.

ದಿನಾಂಕ 05.01.2025ರಂದು ಮುಂದಿನ ಐದು ವರ್ಷಗಳ ಅವಧಿಗೆ ನಡೆಯಬೇಕಾಗಿದ್ದ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಿರುವ ಉಮೇದುದಾರರ ನಾಮಪತ್ರಗಳನ್ನು ಪರಿಶೀಲಿಸಿ ಸಂಘದ ಉಪವಿಧಿಯ ಪ್ರಕಾರ ಆಯ್ಕೆಯಾಗಬೇಕಾದ ಸ್ಥಾನಗಳ ಸಂಖ್ಯೆಗೆ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯು ಸರಿಸಮನಾಗಿರುವುದರಿಂದ ಅರ್ಹ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಸಾಮಾನ್ಯ ಕ್ಷೇತ್ರದಲ್ಲಿ, ನವೀನ ಕುಮಾರ್‌ ಹೆಗ್ಡೆ ಶಾನಾಡಿ ಕೆದೂರು, ಸದಾನಂದ ಶೆಟ್ಟಿ ಕೆದೂರು, ಮೋಹನದಾಸ ಶೆಟ್ಟಿ ಎಂ, ಭರತ್‌ ಕುಮಾರ್‌ ಶೆಟ್ಟಿ, ಶರತ್‌ ಕುಮಾರ್‌ ಹೆಗ್ಡೆ, ರಮೇಶ್‌ ಸುವರ್ಣ ಕೋಟೇಶ್ವರ, ಗೋಪಾಲ ಕುಂಭಾಶಿ ಆಯ್ಕೆಗೊಂಡರು. ಮಹಿಳಾ ಮೀಸಲಾತಿಯಲ್ಲಿ ಆಶಾಲತಾ ಶೆಟ್ಟಿ ವಕ್ವಾಡಿ, ಶ್ರೀಮತಿ ಸುಶೀಲ ಕೋಟೇಶ್ವರ ಆಯ್ಕೆಗೊಂಡರು. ಹಿಂದುಳಿದ ವರ್ಗ ಮೀಸಲು ಸ್ಥಾನ(ಪ್ರವರ್ಗ ಎ)ದಲ್ಲಿ ಅಶೋಕ್‌ ಪೂಜಾರಿ ಬೀಜಾಡಿ, ಹಿಂದುಳಿದ ವರ್ಗ ಮೀಸಲು ಸ್ಥಾನ (ಪ್ರವರ್ಗ ಬಿ)ದಲ್ಲಿ ಗೋಪಾಲ ಶೆಟ್ಟಿ ಹೊಸ್ಮಠ ಕೊರ್ಗಿ ಆಯ್ಕೆಯಾದರು. ಪ.ಜಾತಿ ಮೀಸಲು ಸ್ಥಾನದಲ್ಲಿ ಸುರೇಶ ಕೆ. ವಿ ಕಾಳಾವರ ಹಾಗ ಪ. ಪಂಗಡ ಮೀಸಲು ಸ್ಥಾನದಲ್ಲಿ ಶ್ರೀಮತಿ ಚಿಕ್ಕು ಅಸೋಡು ಆಯ್ಕೆಗೊಂಡರು.

ಸಹಕಾರ ಅಭಿವೃದ್ಧಿ ಅಧಿಕಾರಿ/ರಿಟರ್ನಿಂಗ್‌ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾದ ಸುನೀಲ್‌ ಕುಮಾರ್‌ ಸಿ. ಎಮ್‌ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಐತಾಳ್‌ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!