spot_img
Monday, December 23, 2024
spot_img

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ: ರೂ. 20 ಕೋಟಿ ವೆಚ್ಚದಲ್ಲಿ “ರೈತಸಿರಿ ಅಗ್ರಿ ಮಾಲ್”|ರೈತರಿಗಾಗಿ ರಾಜ್ಯಕ್ಕೆ ಮಾದರಿಯಾದ ಯೋಜನೆ-ಎಸ್.ಪ್ರಕಾಶ್ಚಂದ್ರ ಶೆಟ್ಟಿ

ಉಪ್ಪುಂದ, ಡಿ.18: (ಜನಪ್ರತಿನಿಧಿ ವಾರ್ತೆ) ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ರೈತರಿಗಾಗಿ ಬೃಹತ್ ಯೋಜನೆಯನ್ನು ರೂಪಿಸಿದ್ದು 20 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರೈತಸಿರಿ ಅಗ್ರಿಮಾಲ್‍ನ್ನು ಆರಂಭಿಸಲಾಗುವುದು ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ರೈತರ ಮತ್ತು ಸಂಘದ ಬಹು ನಿರೀಕ್ಷೆಯ ಈ ಅಗ್ರಿ ಮಾಲ್‍ನಲ್ಲಿ ವಿವಿಧ ಬಗೆಯ ಕೃಷಿ ಸರ್ವಿಸ್ ಸೆಂಟರ್‍ಗಳು. ಸೂಪರ್ ಮಾರ್ಕೇಟ್‍ಗಳು, ಬಡಗಿ, ಕಮ್ಮಾರಿಕೆ, ಗ್ಯಾರೇಜ್, ವೆಲ್ಡಿಂಗ್ ಶಾಪ್, ಇಲೆಕ್ಟಿಕಲ್ ಸರ್ವಿಸ್, ಫಾರ್ಮರ್ ಕ್ಲಬ್, ಕೃಷಿಕ ತರಬೇತಿ ಕೇಂದ್ರ, ಕೃಷಿ ಯಂತ್ರೋಪಕರಣಗಳ ಮಳಿಗೆ, ಉಪಹಾರ ಕೇಂದ್ರ, ಸಭಾಂಗಣ, ಎಸ್ಕ್ಯೊಲೇಟರ್, ಲಿಫ್ಟ್ ಹಾಗೂ ಮತ್ತು ವಿಶೇಷವಾಗಿ ಚಿಕ್ಕ ಸಿನಿಮಾ ಮಂದಿರವು ಇರುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ವಿಶಾಲವಾದ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇದೆ. ಮಳಿಗೆಯು ಒಟ್ಟು 32000/- ಚದರ ಅಡಿ ವಿಸ್ತೀರ್ಣ ಮತ್ತು 8000 ಚದರ ಅಡಿ ಟೆರೇಸ್ ಇದ್ದು 4 ಮಹಡಿಯ ಕಟ್ಟಡವನ್ನು ವಿಶೇಷ ವಿನ್ಯಾಸದಲ್ಲಿ ಸಜ್ಜುಗೊಳಿಸಲಾಗುತ್ತದೆ ಎಂದರು.

ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕೆಲಸವನ್ನು ಬೆಂಗಳೂರಿನ ಪ್ರತಿಷ್ಟಿತ ಎಸ್. ಆರ್. ರವಿ ಕಂಪೆನಿಗೆ ಟೆಂಡರ್ ಆಗಿದೆ ಎಂದು ಹೇಳಿದರು.

ಒಟ್ಟು ರೂ. 20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತಿರುವ ಈ ಯೋಜನೆಯು 13 ಕೋಟಿ ರೂಪಾಯಿ ಕಟ್ಟಡ ನಿರ್ಮಾಣಕ್ಕೆ ಮತ್ತು ಏಳು ಕೋಟಿ ರೂಪಾಯಿ ದುಡಿಯುವ ಬಂಡವಾಳಕ್ಕೆ ಬೇಕಾಗುತ್ತದೆ ಎಂದರು. ಇದನ್ನು ನಿರ್ಮಾಣ ಮಾಡಲು ಸರಕಾರದಿಂದಾಗಲಿ ನಬಾರ್ಡನಿಂದಾಗಲಿ ಸಹಾಯ ಯಾಚಿಸುವುದಿಲ್ಲ. ಸಂಘವು ತನ್ನ ಸ್ವಂತ ಕಟ್ಟಡ ನಿಧಿಯಲ್ಲಿ ಹಣವನ್ನು ಹೊಂದಿದ್ದು ಅದನ್ನು ಬಳಸಿಕೊಳ್ಳುತ್ತೇವೆ ಎಂದರು.

ಈ ಕಟ್ಟಡವನ್ನು 2019ರಲ್ಲಿಯೇ ನಿರ್ಮಾಣಮಾಡಲು ಸಂಘದ ಆಡಳಿತ ಮಂಡಳಿ ನಿರ್ಣಯಿಸಿದ್ದು ಆಗ ಇದನ್ನು 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿತ್ತು. ಆದರೆ ಸಂಘದ ನಿರ್ದೇಶಕರೊಬ್ಬರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದದಂದ ತಡವಾಯತು. ಈಗ ಅದರ ನಿರ್ಮಾಣ ವೆಚ್ಚ 13 ಕೋಟಿ ಆಗಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ಚ0ದ್ರ ಶೆಟ್ಟಿ ತಿಳಿಸಿದರು.

ರೈತರಿಗೆ ಗೊಬ್ಬರದಿಂದ ಹಿಡಿದು ಚಿನ್ನದವರೆಗೆ ಈ ಅಗ್ರಿಮಾಲ್‍ನಲ್ಲಿ ದೊರೆಯುತ್ತದೆ. ಸಂಘದಲ್ಲಿ ಒಟ್ಟು 18 ಸಾವಿರ ಸದಸ್ಯರಿದ್ದು 2 ಸಾವಿರ ರೈತ ಸದಸ್ಯರಿದ್ದಾರೆ. ಶಿರಸಿಯ ಟಿ.ಎಸ್.ಎಸ್. ಮಾದರಿಯಲ್ಲಿ ಇದನ್ನು ರೂಪಿಸಲಾಗುವುದು ಎಂದರು. ಇದರಿಂದಾಗಿ ಸಂಘದ ಕಾರ್ಯ ವ್ಯಾಪ್ತಿಯ ನೂರಾರು ಯುವಕರಿಗೆ ಉದ್ಯೋಗ ದೊರೆಯಲಿದೆ. ಸಾಕಷ್ಟು ಜನರಿಗೆ ವ್ಯವಹಾರ ವಾಗಲಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಕೃಷಿ ಮತ್ತು ಕೃಷಿಯೇತರ ವಲಯದಲ್ಲಿ ಬೃಹತ್ ಆರ್ಥಿಕ ವಲಯ ಸೃಷ್ಟಿಸುವುವ ಗುರಿಯನ್ನು ಹೊಂಲಾಗಿದೆ ಎಂದರು.
ಸಂಘವು ಈಗಾಗಲೇ ಒಂದು ಸಾವಿರ ಕೋಟಿ ವ್ಯವಹಾರವನ್ನು ಹೊಂದಿದೆ. ಈ ಸಾಧನೆ ರಾಜ್ಯದ ಕೆಲವೆ ಕೃಷಿ ಪತ್ತಿನ ಸಂಘಗಳಲ್ಲಿ ನೋಡಬಹುದು. ಸಂಘವು 250 ಕೋಟಿ ಠೇವಣಿಯನ್ನು ಹೊಂದಿದ್ದು 40 ಕೋಟಿ ನಿಧಿಗಳಿವೆ. 100 ಕೋಟಿ ರೂಪಾಯಿಗಳನ್ನು ಬೇರೆ ಕಡೆ ವಿನಿಯೋಗಿಸಿದೆ. ಸಂಘದ ಕಟ್ಟಡ ನಿಧಿಯಲ್ಲಿಯೇ 15 ಕೋಟಿ ರೂಪಾಯಿಗಳಿವೆ. ಈ ಬಾರಿ ಸಂಘವು 6 ಕೋಟಿ ರೂಪಾಯಿನ್ನು ಲಾಭಗಳಿಸಿದೆ ಎಂದು ಹೇಳಿದ ಅವರು ಈ ಬೃಹತ್ ವ್ಯವಹಾರ ನೆಡೆಸಲು ಸಂಘವು ಆರ್ಥಿಕವಾಗಿ ಸಡೃಡವಾಗಿದೆ ಎಂದರು. ಸಂಘದ ವಾಣಿಜ್ಯ ವ್ಯವಹಾರದ ಮಳಿಗೆಯ ಮೂಲಕ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಿಗೆ. ವಸತಿ ನಿಲಯಗಳಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಎಂದರು.

ಕಾಮಗಾರಿಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು 2027 ಜನವರಿ ಒಳಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಇದೊಂದು ಸಹಕಾರಿ ಕ್ಷೇತ್ರದಲ್ಲಿ ವಿಶೇಷವಾದ ಯೋಜನೆಯಾಗಿದೆ. ಸಂಘವು ಆರ್ಥಿಕ ಚಟುವಟಿಕೆ ಜೊತೆಗೆ ವ್ಯವಹಾರ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷರಾದ ಈಶ್ವರ ದೇವಾಡಿಗ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್ ಪೈ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!