spot_img
Sunday, December 22, 2024
spot_img

ಅಂಬೇಡ್ಕರ್‌ ಗೆ ಅವಮಾನ : ಕೇಂದ್ರ ಗೃಹ ಸಚಿವ ಶಾ ವಿರುದ್ಧ ರಾಜ್ಯಸಭೆಯಲ್ಲಿ ಟಿಎಂಸಿ ಹಕ್ಕು ಚ್ಯುತಿ ನೋಟೀಸ್‌ !

ಜನಪ್ರತಿನಿಧಿ (ನವ ದೆಹಲಿ) : ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ ನ ಡೆರೆಕ್‌ ಓಬ್ರಯಾನ್‌ ಹಕ್ಕು ಚ್ಯುತಿ ನೋಟೀಸ್‌ ನೀಡಿದ್ದಾರೆ.

ಇಂದು(ಬುಧವಾರ) ಮಧ್ಯಾಹ್ನದ ಬಳಿಕ ಹಕ್ಕು ಚ್ಯುತಿ ನೋಟೀಸ್‌ ನೀಡಿದ್ದಾರೆ. ಅಮಿತ್‌ ಶಾ ಹೇಳಿಕೆ ಹಾಗೂ ಅವರು ಹೇಳಿದ ರೀತಿ ಎರಡೂ ಅವಮಾನಕಾರಿಯಾಗಿತ್ತು ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

ಅಮಿತ್‌ ಶಾ ಹೇಳಿಕೆ ನೀಡಿರುವುದನ್ನು ಖಂಡಿಸಿ ಸಂಸತ್‌ ಭವನದ ಹತ್ತಿರ ಇಂದು ಕಾಂಗ್ರೆಸ್‌ ನೇತೃತ್ವದ ಪ್ರತಿಭಟನೆಗೆ ಟಿಎಂಸಿ ಪಕ್ಷದ ಸಂಸದರು ಗೈರಾಗಿದ್ದರು. ರಾಜ್ಯಸಭೆಯಲ್ಲೂ ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿ ಸಭಾತ್ಯಾಗ ಮಾಡಿದ್ದರು.

ಅಮಿತ್‌ ಶಾ ಹೇಳಿದ್ದೇನು ?

ನಿನ್ನೆ(ಮಂಗಳವಾರ) ರಾಜ್ಯಸಭೆಯಲ್ಲಿ ಮಾತನಾಡಿದ್ದ ಅಮಿತ್‌ ಶಾ, ʼಅಂಬೇಡ್ಕರ್‌, ಅಂಬೇಡ್ಕರ್‌ ಎಂದು ಹೇಳುವುದು ಈಗ ಒಂದು ರೀತಿಯ ಫ್ಯಾಷನ್‌ ಆಗಿ ಬಿಟ್ಟಿದೆ. ಅಂಬೇಡ್ಕರ್‌ ಬದಲು ದೇವರ ನಾಮಸ್ಮರಣೆ ಮಾಡಿದ್ದರೇ, ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು ಎಂದು ಹೇಳಿದ್ದರು.

ಶಾ ಹೇಳಿಕೆಯನ್ನು ಟೀಕಿಸಿದ ದೀದಿ :

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಯು ಬಿಜೆಪಿಯ ಜಾತಿವಾದಿ ಹಾಗೂ ದಲಿತ ವಿರೋಧಿ ಮಾನಸೀಕತೆಯನ್ನು ತೋರಿಸುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(ದೀದಿ) ಹೇಳಿದ್ದಾರೆ. ಅಂಬೇಡ್ಕರ್‌ ಅವರನ್ನು ಮಾರ್ಗದರ್ಶಕ ಹಾಗೂ ಸ್ಪೂರ್ತಿಯನ್ನಾಗಿಸಿಕೊಂಡ ಲಕ್ಷಾಂತರ ಜನರಿಗೆ ಮಾಡಿದ ಅವಮಾನ ಎಂದವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!