spot_img
Sunday, February 15, 2026
spot_img

ರಾಜವಂಶದ ಮಾದರಿಯ ನೇತೃತ್ವ ಹೊಂದಿರುವ ಕಾಂಗ್ರೆಸ್ ಅಂಬೇಡ್ಕರ್ ಪರಂಪರೆಯನ್ನು ಅಳಿಸಿಹಾಕಲು ತಂತ್ರ ಹೂಡಿತ್ತು : ಮೋದಿ ಆಕ್ರೋಶ

ಜನಪ್ರತಿನಿಧಿ (ನವ ದೆಹಲಿ) : ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದುಕೊಳ್ಳುವುದಷ್ಟೇ ಅಲ್ಲದೇ, ಅಮಿತ್‌ ಶಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ಎಕ್ಸ್‌ ನಲ್ಲಿ ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರಹಾಕಿದ ಮೋದಿ, ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಅವರನ್ನು ಅವಮಾನ ಮಾಡಿರುವ ಕರಾಳ ಇತಿಹಾಸವಿದೆ ಎಂದು ಹೇಳಿದ್ದಾರೆ.

ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿರುವ ಅವಮಾನದ ಕುರಿತು ಅಮಿತ್ ಶಾ ಸದನದಲ್ಲಿ ಸಾಕ್ಷ್ಯ ಸಹಿತವಾಗಿ ನಿರೂಪಿಸಿದ್ದಾರೆ. ಈ ವಾಸ್ತವಾಂಶವನ್ನು ಕಂಡು ಪ್ರತಿಪಕ್ಷ ದಿಗ್ಭ್ರಮೆಗೊಂಡಿದ್ದು, ಈಗ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಆದರೆ ಸತ್ಯ ಏನು ಎಂಬುದು ಜನರಿಗೆ ಗೊತ್ತಿದೆ ಎಂದು ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.

ಅಂಬೇಡ್ಕರ್ ವಿಷಯಕ್ಕೆ ಬಂದರೆ, ನಮ್ಮ ಸರ್ಕಾರದ ಅವರೆಡೆಗೆ ಸಂಪೂರ್ಣ ಗೌರವ ಮತ್ತು ಶ್ರದ್ಧೆಯನ್ನು ಹೊಂದಿದೆ ಎಂದು ಮೋದಿ ಪ್ರತಿಪಾದಿಸಿಕೊಂಡಿದ್ದಾರೆ.

“ಕಾಂಗ್ರೆಸ್ ಪಕ್ಷ ಮತ್ತು ಅದರ “ಕೊಳೆತ ವ್ಯವಸ್ಥೆ” ತಮ್ಮ “ದುರುದ್ದೇಶಪೂರಿತ ಸುಳ್ಳುಗಳ ಮೂಲಕ ತಮ್ಮ ಹಲವಾರು ವರ್ಷಗಳ ದುಷ್ಕೃತ್ಯಗಳನ್ನು ಮರೆಮಾಡಬಹುದು ಎಂದು ಭಾವಿಸಿದರೆ, ವಿಶೇಷವಾಗಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನಿಂದ ಉಂಟಾದ ಅವಮಾನಗಳನ್ನು ಮರೆಮಾಚಬಹುದು ಎಂದು ಭಾವಿಸಿದ್ದರೆ, ಅದು ತಪ್ಪು ಗ್ರಹಿಕೆ ಎಂದು ಹೇಳಿದ್ದಾರೆ.

ನೆಹರು-ಗಾಂಧಿ ಕುಟುಂಬವನ್ನು ಉಲ್ಲೇಖಿಸಿರುವ ಮೋದಿ, ರಾಜವಂಶದ ಮಾದರಿಯ ನೇತೃತ್ವ ಹೊಂದಿರುವ ಒಂದು ಪಕ್ಷ(ಕಾಂಗ್ರೆಸ್) ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಅವಮಾನಿಸಲು ಸಾಧ್ಯವಿರುವ ಎಲ್ಲಾ ತಂತ್ರಗಳಲ್ಲಿ ಹೇಗೆ ತೊಡಗಿದೆ ಎಂಬುದನ್ನು ಭಾರತದ ಜನರು ಮತ್ತೆ ಮತ್ತೆ ನೋಡಿದ್ದಾರೆ ಎಂದು ಮೋದಿ ತೀಕ್ಷ್ಣವಾಗಿ ಟೀಕಾ ಪ್ರಹಾರ ನಡೆಸಿದ್ದಾರೆ.

ಅವರಿಗೆ ಭಾರತ ರತ್ನ ನೀಡದಿರುವುದು ಮತ್ತು ಅವರ ಭಾವಚಿತ್ರಕ್ಕೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸ್ಥಾನ ನೀಡದಿರುವುದು ಕಾಂಗ್ರೆಸ್ ಪಾಪಗಳ ಪಟ್ಟಿಯಲ್ಲಿ ಸೇರಿದೆ. ಎಂದು ಪ್ರಧಾನಿ ಹೇಳಿದರು. “ಕಾಂಗ್ರೆಸ್ ನವರು ಅವರು ಬಯಸಿದಂತೆ ಪ್ರಯತ್ನಿಸಬಹುದು ಆದರೆ ಎಸ್‌ಸಿ/ಎಸ್‌ಟಿ ಸಮುದಾಯಗಳ ವಿರುದ್ಧ ಕೆಟ್ಟ ಹತ್ಯಾಕಾಂಡಗಳು ಅವರ ಆಡಳಿತದಲ್ಲಿ ನಡೆದಿವೆ ಎಂಬುದನ್ನು ಅವರು ಅಲ್ಲಗಳೆಯಲು ಸಾಧ್ಯವಿಲ್ಲ, ಅವರು ವರ್ಷಗಳ ಕಾಲ ಅಧಿಕಾರದಲ್ಲಿ ಕುಳಿತು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಸಬಲೀಕರಣಗೊಳಿಸಲು ಏನನ್ನೂ ಮಾಡಲಿಲ್ಲ.” ಎಂದು ಮೋದಿ ಆರೋಪಿಸಿದ್ದಾರೆ.

If the Congress and its rotten ecosystem think their malicious lies can hide their misdeeds of several years : Narendra Modi

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!