spot_img
Wednesday, April 1, 2026
spot_img

ಅಂಪಾರು: ಡಿ.29ರಂದು ಚತುಃಪವಿತ್ರ ನಾಗಮಂಡಲೋತ್ಸವ

ಜನಪ್ರತಿನಿಧಿ ವಾರ್ತೆ: ಕುಂದಾಪುರ ತಾಲೂಕು ಅಂಪಾರು ಗ್ರಾಮದ ಬಲಾಡಿ ಕಲ್ ತ್ತೋಡ್ಮಿ ಮನೆಯ ಕುಟುಂಬದವರ ಮೂಲ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ಡಿಸೆಂಬರ್ 29 ಆದಿತ್ಯವಾರ ನಡೆಯಲಿದೆ.

ಡಿ.29ರಂದು ಬೆಳಿಗ್ಗೆ 6.30ರ ನಂತರ ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ, ಸಮಾರಾಧನೆ, ಕೃಚ್ಚಾಚರಣೆ, ಮಹಾಸಂಕಲ್ಪ, ಮಹಾಗಣಪತಿ ಹೋಮ, ನವಗ್ರಹ ಹೋಮ, ಪ್ರಾಯಶ್ಚಿತ್ತ ಅಯುತ ಸಂಖ್ಯಾತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ತತ್ವ ಕಲಶ ಸ್ಥಾಪನೆ, ತತ್ವಹೋಮ, ಸರ್ಪಸೂಕ್ತ ಹೋಮ, ಸುಬ್ರಹ್ಮಣ್ಯ ಹೋಮ, ಪಂಚವಿಂಶತಿ ದ್ರವ್ಯ ಕಲಶಸ್ಥಾಪನೆ, ಪ್ರಧಾನ ಅಧಿವಾಸ ಹೋಮ, ಗಾಯತ್ರಿ ಕಲಶ ಸ್ಥಾಪನೆ, ಗಾಯತ್ರಿ ಜಪ, ಚತುರ್ವೇದ ಪಾರಾಯಣ ಕಲಶಾಭಿಷೇಕ, ಕಲ್ಪೋಕ್ತ ಮಹಾಪೂಜೆ, ದಶದಾನ, ನವಗ್ರಹ ಹೋಮ, ವಟು-ಬ್ರಾಹ್ಮಣ ಆರಾಧನೆ, ಸುಹಾಸಿನಿ ಪೂಜೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಮಹಾ ಮಂಗಳಾರತಿ, ನಾಗಸಂದರ್ಶನ, ಪಲ್ಲಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 12ರ ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಹಾಲಿಟ್ಟು ಸೇವೆ, ರಾತ್ರಿ 8ಕ್ಕೆ ಚತುಃಪವಿತ್ರ ನಾಗಮಂಡಲ ಸೇವೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ನಡೆಯಲಿದೆ.

ನಾಗಮಂಡಲದ ಪ್ರಧಾನ ಅರ್ಚಕರಾಗಿ ವೇ.ಮೂ.ಶಂಕರನಾರಾಯಣ ಉಡುಪರು ಮತ್ತು ವೇ.ಮೂ.ವಿನಾಯಕ ಉಡುಪ ಬಲಾಡಿ ಮತ್ತು ವಿದ್ವತ್ ಪೂರ್ಣ ವೈದಿಕ ವೃಂದದವರಿಂದ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಪ್ರಧಾನ ಪುರೋಹಿತರು-ವೇ.ಮೂ ಶ್ರೀನಿವಾಸ ಅಡಿಗರು ಸೌಕೂರು, ನಾಗಪಾತ್ರಿಗಳಾಗಿ ವೇ.ಮೂ.ಡಾ.ಶ್ರಿಧರ ಮಂಜರು, ನಾಗಯಕ್ಷಿ ಪಾತ್ರಿಗಳು ಹಿಲ್ಕೋಡು-ನೇರಳಕಟ್ಟೆ ಇವರ ಉಪಸ್ಥಿತಿಯಲ್ಲಿ ಶಂಕರ ಮೂರ್ತಿ ಮಂಜರು ಬೆಳ್ಳಿಗದ್ದೆ, ಸುದರ್ಶನ ಉಡುಪರು ಮೂಡುಗೋಪಾಡಿ, ಕೋಟೇಶ್ವರ, ವೈದ್ಯರು-ಸರ್ವೋತ್ತಮ ವೈದ್ಯ, ಗಣಪತಿ ವೈದ್ಯ, ಅನಂತರಾಮ ವೈದ್ಯ ಮತ್ತು ಬಳಕ ಅಂಪಾರು ಭಾಗವಹಿಸಲಿದ್ದಾರೆ.

ಹೊರೆಕಾಣಿಕೆ ಸಮರ್ಪಣೆ: ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ ಡಿ.27ರಂದು ಬೆಳಿಗ್ಗೆ 8 ಗಂಟೆಯಿಂದ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8971347536, 9845094723 ಸಂಪರ್ಕಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!