spot_img
Wednesday, April 1, 2026
spot_img

ನನ್ನ ಮೇಲೆ 150 ಕೋಟಿ ಆರೋಪದ ತನಿಖೆಯಾಗಲಿ : ಸಿಎಂ ಸಿದ್ದರಾಮಯ್ಯರಿಗೆ ವಿಜಯೇಂದ್ರ ಸವಾಲ್‌ !

ಜನಪ್ರತಿನಿಧಿ (ಬೆಂಗಳೂರು/ಬೆಳಗಾವಿ) : ನನ್ನ ಅನುಪಸ್ಥಿತಿಯಲ್ಲಿ, ಸಚಿವರು ನನ್ನ ಮೇಲೆ ಆರೋಪವನ್ನು ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಕೂಡ ಅದನ್ನು ಪುನರುಚ್ಚಾರ ಮಾಡಿದ್ದಾರೆ. ಈ ಸರ್ಕಾರ ಬಂದಾಂಗಿನಿಂದಲೂ ಜನ ಕಲ್ಯಾಣ ಮಾಡ್ತೀವಿ, ಅಭಿವೃದ್ಧಿ ಮಾಡ್ತೀವಿ ಅಂತಾರೆ. ಅನ್ವರ್ ಮಾಣಪ್ಪಾಡಿ ಹೇಳಿಕೆಯ ಮೇಲೆ ನನ್ನ ಆಪಾದನೆ ಮಾಡಿದ್ದೀರಾ. ಬಿಜೆಪಿ ಅಧಿಕಾರಿ ದಲ್ಲಿದ್ದಾಗ, ಕಾಂಗ್ರೆಸ್ ನವರು ಎಷ್ಟು ಲೂಟಿ ಮಾಡಿದ್ರು ಎಂದು ಅನ್ವರ್ ಹೇಳಿದ್ರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ, ಉಪ ಲೋಕಯುಕ್ತರಿಂದಲೂ‌ ತನಿಖೆಗೂ ಆದೇಶ ಕೊಟ್ಟಿದ್ರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.

ಸಿಬಿಐ ಮೇಲೆ ಸಿಎಂಗೆ ವಿಶ್ವಾಸ ಬಂದಿರುವುದು ಸಂತಸ

ಇಂದು ಸದನದಲ್ಲಿ ಮಾತನಾಡಿದ ಅವರು, 2016 ಮಾರ್ಚ್ ನಲ್ಲಿ ವರದಿಯನ್ನು ಮಂಡನೆ ಮಾಡುತ್ತಾರೆ. ಆ ವರದಿಯ ಮೇಲೆ ಸೂಕ್ತ ತನಿಖೆ ಆಗಬೇಕು ಎಂದಾಗ ಸಿದ್ದರಾಮಯ್ಯ ಸರ್ಕಾರ ಇತ್ತು. ಆದರೆ ಅಂದಿನ ವರದಿಯನ್ನು ಸಿದ್ದರಾಮಯ್ಯ ಸರ್ಕಾರ ತಿರಸ್ಕಾರ ಮಾಡಿತ್ತು. ಸಿಬಿಐ ಮೇಲೆ ಮುಖ್ಯಮಂತ್ರಿಗಳಿಗೆ ವಿಶ್ವಾಸ ಬಂದಿರುವುದು ಸಂತೋಷದ ಸಂಗತಿ. ನಾನು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ. ನನ್ನ ಮೇಲೆ 150 ಕೋಟಿ ಆರೋಪದ ತನಿಖೆಯಾಗಲಿ. ಉಪ ಲೋಕಯುಕ್ತರ ವರದಿಯನ್ನು ಸಿಬಿಐಗೆ ಕೊಡಲಿ. ನನ್ನ ಮೇಲೆ ಸಿಎಂ  ಆರೋಪ ಮಾಡಿರೋದಕ್ಕೆ ಆಕ್ರೋಶ ಕೋಪ ಇಲ್ಲ ಎಂದವರು ತಿಳಿಸಿದರು.

ಕಾಂಗ್ರೆಸ್‌ ಹಗರಣಗಳು ಸಿಬಿಐ ತನಿಖೆ ಆಗಲಿ

ಇನ್ನು, ಸಿಎಂ ಮೇಲೆ ನನಗೆ ಅನುಕಂಪ ಬರ್ತಿದೆ. ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬ ಸಿಲುಕಿಕೊಂಡಿದ್ದು, ಇದರಿಂದ ಹೊರ ಬರಲು ಈ ರೀತಿಯ ಆರೋಪ ಮಾಡ್ತಿದ್ದಾರೆ. ನನ್ನ ಮಾತಿಗೆ ಸಚಿವ ಕೃಷ್ಣ ಭೈರೇಗೌಡ ಸೇರಿ ಕಾಂಗ್ರೆಸ್ ಸದಸ್ಯರ ಆಕ್ಷೇಪ  ಮಾಡಿದ್ದಾರೆ. ಮುಡಾ ಹಗರಣ, ಹಾಗೂ ಅಬಕಾರಿ ಹಗರಣವನ್ನು ಸಿಬಿಐಗೆ ತನಿಖೆ ಕೊಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸವಾಲ್‌ ಹಾಕಿದ್ದಾರೆ.

ಕಾಂಗ್ರೆಸ್‌ ಹಗರಣಗಳು ಸಿಬಿಐ ತನಿಖೆ ಆಗಲಿ

ಇನ್ನು ಸಿಎಂ ಮೇಲೆ ನನಗೆ ಅನುಕಂಪ ಬರ್ತಿದೆ. ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬ ಸಿಲುಕಿಕೊಂಡಿದ್ದು, ಇದರಿಂದ ಹೊರ ಬರಲು ಈ ರೀತಿಯ ಆರೋಪ ಮಾಡ್ತಿದ್ದಾರೆ. ನನ್ನ ಮಾತಿಗೆ ಸಚಿವ ಕೃಷ್ಣ ಭೈರೇಗೌಡ ಸೇರಿ ಕಾಂಗ್ರೆಸ್ ಸದಸ್ಯರ ಆಕ್ಷೇಪ  ಮಾಡಿದ್ದಾರೆ. ಮುಡಾ ಹಗರಣ, ಹಾಗೂ ಅಬಕಾರಿ ಹಗರಣವನ್ನು ಸಿಬಿಐಗೆ ತನಿಖೆ ಕೊಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸವಾಲ್‌ ಹಾಕಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!