spot_img
Saturday, February 14, 2026
spot_img

ಪಂಚಾಯತ್‌ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಬಳಕೆಗೆ ರಾಜ್ಯ ಸರ್ಕಾರ ಚಿಂತನೆ : ಇದು ಗ್ರಾಮ ಸ್ವರಾಜ್‌ ಪರಿಕಲ್ಪನೆಯ ಅಣಕ : ರಮೇಶ್‌ ಶೆಟ್ಟಿ ವಕ್ವಾಡಿ

ಜನಪ್ರತಿನಿಧಿ (ಕುಂದಾಪುರ) : ಗ್ರಾಮ ಪಂಚಾಯತ್ ಚುನಾವಣೆ ನಡೆದು ಈಗಾಗಲೇ  ನಾಲ್ಕು ವರ್ಷ ಕಳೆದಿದೆ, ಇನ್ನೇನು ಒಂದು ವರ್ಷದೊಳಗೆ ಪುನಃ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಕಳೆದ ನಾಲ್ಕು ವರ್ಷದಿಂದ ಗ್ರಾಮ ಸ್ವರಾಜ್ ಪರಿಕಲ್ಪನೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯದೇ ಅಲ್ಲಿ ಅಧಿಕಾರಗಳೇ  ಆಡಳಿತ ನಡೆಸುವಂತೆ ಆಗಿದ್ದು ಪ್ರಜಾಪ್ರಭುತ್ವದಡಿ, ಗ್ರಾಮ ಸ್ವರಾಜ್ ಪರಿಕಲ್ಪನೆಯ ಅಣಕ ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ (ರಿ), ಕುಂದಾಪುರ ವಲಯದ ಸಂಚಾಲಕ ರಮೇಶ್‌ ಶೆಟ್ಟಿ ವಕ್ವಾಡಿ ಹೇಳಿದ್ದಾರೆ.

ಇದೀಗ ಗ್ರಾಮ ಪಂಚಾಯತ್ ಗಳಿಗೆ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಸುವ ಪ್ರಸ್ತಾವನೆ ಬಂದಿದ್ದು ಇದರ ಸಾಧಕ ಭಾದಕಗಳ ಬಗ್ಗೆ ಮತ್ತು ಪರಿಣಾಮಗಳ ಬಗ್ಗೆ ಚರ್ಚೆಯಾಗಬೇಕಿದೆ. ಪಕ್ಷದ ಚಿಹ್ನೆಯಡಿ ಚುನಾವಣೆ ನಡೆದರೆ ಒಂದು ವಾರ್ಡಿಗೆ ಪುರಸಭೆ ಮತ್ತು ನಗರಸಭೆಯಂತೆ ಒಂದೇ ಅಭ್ಯರ್ಥಿಗಳು ಆಗಬೇಕಾಗುತ್ತದೆ. ಹಾಗೆಯೇ ಎಲ್ಲಾ ವ್ಯವಸ್ಥೆಗಳೂ ರಾಜಕೀಯಗೊಂಡಿರುವಾಗ , ಇದೊಂದು ವ್ಯವಸ್ಥೆಯಾದರೂ ರಾಜಕೀಯ ರಹಿತವಾಗಿರಲಿ ಎನ್ನುವ ಆಸೆಯೂ ಜನರಲ್ಲಿ ಇದೆ ಎಂದವರು ಹೇಳಿದ್ದಾರೆ.

ರಾಜಕೀಯ ಬೆಂಬಲಕ್ಕೆ ಒಳಗಾದರೂ ಕೂಡಾ ನೇರವಾಗಿ ಹಾಗೂ ಪಕ್ಷದ ಚಿಹ್ನೆಯಡಿ ಇಲ್ಲದೇ ಇರುವುದರಿಂದ ಇದು ಜನರಿಗೆ ಪಕ್ಷಾತೀತವಾಗಿ ಮತ ಚಲಾಯಿಸಲು ಅಧಿಕಾರವನ್ನು ಕಲ್ಪಿಸುತ್ತದೆ. ಗ್ರಾಮ ಪಂಚಾಯತ್ ಚುನಾವಣೆಗೆ ಕೆಲವೇ ತಿಂಗಳುಗಳು ಇರುವುದರಿಂದ ಸರಕಾರ ಕೂಡಲೇ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್  ಅಧಿನಿಯಮದಂತೆ ಆಡಳಿತ ನಡೆಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು, ಆದಷ್ಟು ಕೂಡಲೇ ಪಕ್ಷದ ಚಿಹ್ನೆಯಡಿ ನಡೆಸುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ನಡೆಸಬೇಕು ಹಾಗೂ ನೇರವಾಗಿ ಜನರ ಕೈಗೆ ಸಿಗುವ ಗ್ರಾಮಸರಕಾರವಾದ ಗ್ರಾಮ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನ ಮತ್ತು ಬಲ ತುಂಬಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನು, ಗ್ರಾಮ ಪಂಚಾಯತ್‌ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!