spot_img
Wednesday, April 1, 2026
spot_img

ಕಾಳಾವರದಲ್ಲಿ ಶ್ರೀ ಶಂಕರ ಸಭಾ ಭವನ ಉದ್ಘಾಟನೆ

ಕುಂದಾಪುರ: ಡಿ.15: ಕುಂದಾಪುರ ತಾಲೂಕು ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದ ಹತ್ತಿರ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಂಕರ ಸಭಾ ಭವನದ ಉದ್ಘಾಟನೆ ಕಾರ್ಯಕ್ರಮ ಡಿ.15ವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಪ್ರಜ್ವಲನೆಗೊಳಿಸಿ ಮಾತನಾಡಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಈ ಭಾಗಕ್ಕೆ ಉತ್ತಮ ಕೊಡುಗೆಯನ್ನು ಶಂಕರ್ ರಾವ್ ಕೊಟ್ಟಿದ್ದಾರೆ. ಪ್ರೊ.ಶಂಕರ ರಾವ್ ಛಲವಾದಿ ಮನುಷ್ಯ. ಅಂದುಕೊಂಡಿರುವುದನ್ನು ಸಾಧಿಸಿಯೇ ಸಾಧಿಸುತ್ತಾರೆ. ತನ್ನ ಹುಟ್ಟೂರಿಗೆ ಉತ್ತಮವಾದ ಕೊಡುಗೆ ನೀಡಬೇಕು ಎನ್ನುವ ಅವರ ಸಂಕಲ್ಪ ಈಡೇರಿದೆ. ಕಾಳಾವರದಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ, ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಿದ್ದಾರೆ. ಇದರ ಸದುಪರೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಗ್ರಾಮಗಳ ಬೆಳವಣಿಗೆಗೆ ಇಂಥಹ ಆಧುನಿಕ, ಇವತ್ತು ಅವಶ್ಯಕತೆಗೆ ತಕ್ಕಂತಹ ಸೌಲಭ್ಯಗಳು ಬೇಕಾಗುತ್ತದೆ. ಗ್ರಾಮದ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂದರು.

ಶೃಂಗೇರಿ ಶಂಕರ ಮಠ, ಕೋಟೆಕಾರು-ಮಂಗಳೂರು ಇಲ್ಲಿನ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ನಾಮ ಫಲಕ ಅನಾವರಣಗೊಳಿಸಿ, ಆಶೀರ್ವಚನ ನೀಡಿದರು.

ಹೈದರಾಬಾದ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಪಾಕಶಾಲೆ ಉದ್ಘಾಟನೆ ಮಾಡಿದರು.

ವೇ.ಮೂ.ಡಾ.ಚೆನ್ನಕೇಶವ ಭಟ್ ಆನಗಳ್ಳಿ ಶ್ರೀ ಗುರು ಗಣೇಶಮೂರ್ತಿ ಅನಾವರಣಗೊಳಿಸಿದರು. ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ ಕೇಂದ್ರೀಯ ಹವಾನಿಯಂತ್ರಿತ ವ್ಯವಸ್ಥೆ ಉದ್ಘಾಟಿಸಿದರು. ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಶೆಟ್ಟಿಗಾರ್, ಪತ್ರಕರ್ತ ಯು.ಎಸ್ ಶೆಣೈ, ಮೋಹಿನಿ ಎಸ್ ಕಾಳಾವರ, ಅವಿನಾಶ ಕಾಳಾವರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಿ.ಅಪ್ಪಣ್ಣ ಹೆಗ್ಡೆ ಹಾಗೂ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಇವರನ್ನು ಸನ್ಮಾನಿಸಲಾಯಿತು.

ಪ್ರೊ.ಶಂಕರ ರಾವ್ ಕಾಳಾವರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀನಿವಾಸ ಭಟ್ ಪ್ರಾರ್ಥನೆ ಮಾಡಿದರು. ಅಕ್ಷತಾ ಐತಾಳ್ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಪ್ರದರ್ಶನ, ಕೋಲಾಟ, ಕುಣಿತ ಭಜನೆ, ಜಾದೂ ಪ್ರದರ್ಶನ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಜಾನಪದ ನೃತ್ಯ, ಮಿಮಿಕ್ರಿ, ಮಿನಿ ನಾಟಕ, ಭರತ ನಾಟ್ಯ ಹಾಗೂ ಮಹಿಳೆಯರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!