spot_img
Thursday, December 12, 2024
spot_img

1,316ಕ್ಕೂ ಹೆಚ್ಚು ಐಎಎಸ್‌ ಹಾಗೂ 586 ಐಪಿಎಸ್ ಹುದ್ದೆಗಳು ಖಾಲಿ : ಕೇಂದ್ರ ಸರ್ಕಾರ ಮಾಹಿತಿ

ಜನಪ್ರತಿನಿಧಿ (ನವದೆಹಲಿ) : ದೇಶದಲ್ಲಿ ಸುಮಾರು 1,316ಕ್ಕೂ ಹೆಚ್ಚು ಐಎಎಸ್‌ ಹಾಗೂ 586 ಐಪಿಎಸ್ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಒಟ್ಟು 6,858 ಐಎಎಸ್ ಹುದ್ದೆಗಳಿದ್ದು, ಈ ಪೈಕಿ 5,542 ಹುದ್ದೆಗಳು ಭರ್ತಿಯಿದ್ದು, 1,316ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಎಂದು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ. 5,055 ಐಪಿಎಸ್ ಹುದ್ದೆಗಳಿದ್ದು, ಈ ಪೈಕಿ 4,469 ಹುದ್ದೆಗಳು ಭರ್ತಿ ಇವೆ ಎಂದು ಮಾಹಿತಿ ನೀಡಿದ್ದಾರೆ.

ಖಾಲಿ ಇರುವ 1,316 ಐಎಎಸ್ ಹುದ್ದೆಗಳ ಪೈಕಿ 794 ನೇರ ನೇಮಕಾತಿ, 522 ಹುದ್ದೆಗಳು ಪದೋನ್ನತಿ ಆಧಾರದ ಮೇಲೆ ಭರ್ತಿ ಮಾಡಬೇಕಿದೆ. 586 ಐಪಿಎಸ್ ಹುದ್ದೆಗಳ ಪೈಕಿ 209 ಹುದ್ದೆಗಳು ನೇರ ನೇಮಕಾತಿ, 377 ಹುದ್ದೆಗಳನ್ನು ಪದೋನ್ನತಿ ಮೂಲಕ ಭರ್ತಿ ಮಾಡಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.

ಇನ್ನು, ಭಾರತೀಯ ಅರಣ್ಯ ಸೇವೆಯ(ಐಎಫ್‌ಎಸ್) 3,193 ಹುದ್ದೆಗಳ ಪೈಕಿ 2,151 ಹುದ್ದೆಗಳು ಭರ್ತಿಯಾಗಿವೆ ಎಂದೂ ಮಾಹಿತಿ ನೀಡಿದ್ದಾರೆ. 1,042 ಐಎಫ್‌ಎಸ್‌ ಹುದ್ದೆಗಳು ಖಾಲಿ ಇದ್ದು, 503 ನೇರ ನೇಮಕಾತಿ ಮತ್ತು 539 ಪದೋನ್ನತಿ ಮೂಲಕ ಭರ್ತಿಯಾಗಬೇಕಿದೆ. ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆಗಳ ಮೂಲಕ ಪ್ರತಿ ವರ್ಷ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

ಮೀಸಲಾತಿ ಅನ್ವಯ ಕಳೆದ ಐದು ವರ್ಷಗಳಲ್ಲಿ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ನೇಮಕಾತಿಗಳ ಮಾಹಿತಿಯನ್ನೂ ಅವರು ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!