spot_img
Saturday, August 15, 2026
spot_img

ಗಂಗೊಳ್ಳಿಯಲ್ಲಿ ‘ನಿಭೃತ’ ಕಾದಂಬರಿ ಬಿಡುಗಡೆ

ಗಂಗೊಳ್ಳಿ: ಪತ್ತೆದಾರಿಯಂತಹ ಕಾದಂಬರಿಗಳನ್ನು ಬರೆಯುವುದು ಯಾವುದೇ ಲೇಖಕನಿಗೆ ಬಹಳ ದೊಡ್ಡ ಸವಾಲು. ಈ ಸವಾಲನ್ನು ನರೇಂದ್ರ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ನಿವೃತ್ತ ಇತಿಹಾಸ ಉಪನ್ಯಾಸಕ ಎಚ್ ಭಾಸ್ಕರ್ ಶೆಟ್ಟಿ ಅಭಿಪ್ರಾಯ ಪಟ್ಟರು.
 ಅವರು ಗಂಗೊಳ್ಳಿಯಲ್ಲಿ ನಡೆದ  ಯುವ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅವರ ನಿಭೃತ ಪತ್ತೆದಾರಿ ಕಾದಂಬರಿಯನ್ನು ಜಂಟಿಯಾಗಿ ಬಿಡುಗಡೆಗೊಳಿಸಿ ಮಾತನಾಡಿದರು.
 ಕುಂದಾಪುರದ ಚಿನ್ಮಯ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಉಮೇಶ್ ಪುತ್ರನ್ ಅವರು ಮಾತನಾಡಿ ಪುಸ್ತಕಗಳು ಜೀವನದ ಬಹುದೊಡ್ಡ ಗೆಳೆಯರಿದ್ದಂತೆ. ಹಲವು ಸವಾಲುಗಳನ್ನು ಎದುರಿಸುವಲ್ಲಿ ಅಗತ್ಯವಿರುವ ಆತ್ಮವಿಶ್ವಾಸವನ್ನು ಅವು ನೀಡುತ್ತವೆ ಎಂದು ಹೇಳಿದರು.
 ಉಡುಪಿಯ ಖ್ಯಾತ ವಕೀಲ ಹೆಚ್ ರಾಘವೇಂದ್ರ ಶೆಟ್ಟಿ, ಸಮಾಜ ಸೇವಕಿ ಮಂಜುಳಾ ದೇವಾಡಿಗ ಗಂಗೊಳ್ಳಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ ಬಿಲ್ಲವ,, ಶೋಭರಾಣಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
 ಜಿಎಸ್‌ವಿಎಸ್ ಜಿ. ಎಸ್. ವಿ. ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ.  ಕಾಶಿನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳಾಡಿದರು. ನಾರಾಯಣ ಈ ನಾಯ್ಕ್ ಪುಸ್ತಕ ಪರಿಚಯಿಸಿದರು.
 ಗೋಪಾಲ ಚಂದನ್ ಸ್ವಾಗತಿಸಿದರು. ಶ್ರೀಧರ ಗಾಣಿಗ ನಿರೂಪಿಸಿದರು. ಪೃಥ್ವಿ ಮತ್ತು ಮೆಹಕ್ ಸಹಕರಿಸಿದರು. ಜಿ ಆರ್ ಪ್ರಭಾಕರ್ ಶೇರುಗಾರ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!