spot_img
Thursday, December 26, 2024
spot_img

ಅದಾನಿ ಲಂಚ ಪ್ರಕರಣಕ್ಕಿಂತ ಸಂಭಾಲ್ ಹಿಂಸಾಚಾರ ವಿಚಾರ ದೊಡ್ಡದು ! : ʼಇಂಡಿಯಾʼ ಪ್ರತಿಭಟನೆಗೆ ಅಖಿಲೇಶ್‌ ಗೈರು !

ಜನಪ್ರತಿನಿಧಿ (ನವ ದೆಹಲಿ) : ಇಂಡಿಯಾ ಮೈತ್ರಿಕೂಟದ ಪ್ರಮುಖ ಅಂಗ ಪಕ್ಷವಾದ ಸಮಾಜವಾದಿ ಪಾರ್ಟಿ, ಸತತ ಎರಡನೇ ದಿನವೂ “ಅದಾನಿ ಲಂಚದ ಆರೋಪಗಳ” ಗಳ ಬಗ್ಗೆ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗೆ ಗೈರಾಗಿದ್ದು ವಿರೋಧ ಪಕ್ಷಗಳ ಬಿರುಕು ಮೂಡಿರುವ ಲಕ್ಷಣಗಳು ಗೋಚರವಾಗುತ್ತಿದೆ.

ಕಳೆದ ನವೆಂಬರ್ 25 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಇಂಡಿಯಾ ಬ್ಲಾಕ್ ನ ಮಿತ್ರ ಪಕ್ಷ ತೃಣಮೂಲ ಕಾಂಗ್ರೆಸ್ (TMC) ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಧ್ವನಿಯೆತ್ತದ ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊಂದಿದೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳುತ್ತಾರೆ. ಎಸ್‌ಪಿ ಕೂಡ ಅದಾನಿ ಲಂಚ ಆರೋಪ ಪ್ರಕರಣದಿಂದ ದೂರ ಉಳಿದಿದ್ದು, ಉಭಯ ಸದನಗಳಲ್ಲಿ ಸಂಭಾಲ್ ಹಿಂಸಾಚಾರದತ್ತ ಮಾತ್ರ ಗಮನ ಹರಿಸಿದೆ.

ಇಂಡಿಯಾ ಬ್ಲಾಕ್ ಮಿತ್ರಪಕ್ಷಗಳ ನಡುವಿನ ಅಸಮಾಧಾನವು ಸಂಸತ್ತಿನ ಕೆಳಮನೆಯಲ್ಲಿ ಅದಾನಿ ಲಂಚ ಪ್ರಕರಣದಿಂದ ಸಂಭಾಲ್‌ ಹಿಂಸಾಚಾರದತ್ತ ತನ್ನ ಪ್ರತಿಭಟನೆಯನ್ನು ಅನಿವಾರ್ಯವಾಗಿ ಬದಲಿಸುವಂತೆ ಕಾಂಗ್ರೆಸ್ ಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್, ಡಿಎಂಕೆ, ಆರ್‌ಜೆಡಿ ಮತ್ತು ಶಿವಸೇನೆ (UBT) ಸೇರಿದಂತೆ ಹಲವು ಇಂಡಿಯಾ ಬ್ಲಾಕ್ ಪಕ್ಷಗಳು ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ದೋಷಾರೋಪಣೆ ಮತ್ತು ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ವಿರೋಧಿಸಿ ಕಳೆದ ಎರಡು ದಿನಗಳಿಂದ ಸಂಸತ್ ಗೇಟ್ ಮುಂದೆ ಪ್ರತಿಭಟನೆ ನಡೆಸುತ್ತಿವೆ.

ಅದಾನಿ ಲಂಚ ಪ್ರಕರಣ ಕುರಿತ ಪ್ರತಿಭಟನೆಯಲ್ಲಿ ಸಮಾಜವಾದಿ ಪಕ್ಷದ ಗೈರುಹಾಜರಿಯ ಬಗ್ಗೆ ಕೇಳಿದಾಗ, ಸಂಭಾಲ್ ಹಿಂಸಾಚಾರವು ಪಕ್ಷಕ್ಕೆ ನಿರ್ಣಾಯಕ ವಿಷಯವಾಗಿದೆ, “ಬೇರೆ ಯಾವುದೂ ಮುಖ್ಯವಲ್ಲ” ಎಂದು ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್ ಒತ್ತಿ ಹೇಳಿದ್ದಾರೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಂಭಾಲ್‌ಗೆ ಭೇಟಿ ನೀಡುವುದನ್ನು ತಡೆದ ಉತ್ತರ ಪ್ರದೇಶ ಪೊಲೀಸರ ಕ್ರಮದ ವಿರುದ್ಧ ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್ ಸೇರಿದಂತೆ ಸಮಾಜವಾದಿ ಪಕ್ಷದ ನಾಯಕರು ಲೋಕಸಭೆಯಲ್ಲಿ ಇಂಡಿಯಾ ಬ್ಲಾಕ್ ಮೈತ್ರಿಕೂಟಗಳ ಜೊತೆ ಪ್ರತಿಭಟನೆಯಲ್ಲಿ ಸೇರಿದವು.

ಲೋಕಸಭೆಯಲ್ಲಿ ಆಸನ ಸ್ಥಳ ಹಂಚಿಕೆ ಬಗ್ಗೆ ಅಖಿಲೇಶ್ ಯಾದವ್ ಕೂಡ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದಿನ ಆಸನದಲ್ಲಿ ಅಖಿಲೇಶ್ ಯಾದವ್ ಅವರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪಕ್ಕದ ಆಸನವನ್ನು ವಹಿಸಿಕೊಳ್ಳುತ್ತಿದ್ದರು. ಇದೀಗ ಅಖಿಲೇಶ್ ಯಾದವ್ ಅವರಿಗೆ ಕಾಂಗ್ರೆಸ್ ನಾಯಕರಿಂದ ದೂರದಲ್ಲಿ ಸ್ಥಾನ ನೀಡಲಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!