spot_img
Saturday, February 14, 2026
spot_img

KEA Recruitment 2025 : ಜೂನಿಯರ್‌ ಅಸಿಸ್ಟೆಂಟ್‌, ಕಂಪ್ಯೂಟರ್‌ ಆಪರೇಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ !

ಜನಪ್ರತಿನಿಧಿ (ಮಾಹಿತಿ) : ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿನ ವಿವಿಧ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲಾಗುತ್ತಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 28 ಜೂನಿಯರ್‌ ಅಸಿಸ್ಟೆಂಟ್‌, ಕಂಪ್ಯೂಟರ್‌ ಆಪರೇಟರ್‌ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜನವರಿ 5, 2025 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಹುದ್ದೆಯ ಮಾಹಿತಿ:
ಸೀನಿಯರ್‌ ಪ್ರೋಗ್ರಾಮರ್- 2
ಜೂನಿಯರ್‌ ಪ್ರೋಗ್ರಾಮರ್‌ – 2
ಜೂನಿಯರ್‌ ಕೌನ್ಸಲ್‌ ಆಪರೇಟರ್-‌ 4
ಕಂಪ್ಯೂಟರ್‌ ಆಪರೇಟರ್- 4
ಅಸಿಸ್ಟೆಂಟ್-‌ 3
ಜೂನಿಯರ್‌ ಅಸಿಸ್ಟೆಂಟ್-‌ 8
ಡೇಟಾ ಎಂಟ್ರಿ ಅಸಿಸ್ಟೆಂಟ್/‌ ಟೈಪಿಸ್ಟ್‌- 5

ವಿದ್ಯಾರ್ಹತೆ:
ಸೀನಿಯರ್‌ ಪ್ರೋಗ್ರಾಮರ್, ಜೂನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಕೌನ್ಸಲ್‌ ಆಪರೇಟರ್ – ಕಂಪ್ಯೂಟರ್‌ ಸೈನ್ಸ್/‌ ಇನ್ಫರ್ಮೇಶನ್‌ ಸೈನ್ಸ್‌/ ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಶನ್‌ನಲ್ಲಿ ಪದವಿ
ಕಂಪ್ಯೂಟರ್‌ ಆಪರೇಟರ್ – ಕಂಪ್ಯೂಟರ್‌ ಅಪ್ಲಿಕೇಶನ್‌ನಲ್ಲಿ ಪದವಿ, ಬಿಸಿಎ, ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿ.ಎಸ್ಸಿ
ಅಸಿಸ್ಟೆಂಟ್-‌ ಕಾನೂನಿನಲ್ಲಿ ಪದವಿ, ಎಲ್‌ಎಲ್‌ಬಿ
ಜೂನಿಯರ್‌ ಅಸಿಸ್ಟೆಂಟ್-‌ ಪದವಿ
ಡೇಟಾ ಎಂಟ್ರಿ ಅಸಿಸ್ಟೆಂಟ್/‌ ಟೈಪಿಸ್ಟ್‌- 12ನೇ ತರಗತಿ

ವಯೋಮಿತಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್‌ 23, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-I ಅಭ್ಯರ್ಥಿಗಳು: 05 ವರ್ಷಗಳು
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಶುಲ್ಕ:
ವಿಶೇಷ ಚೇತನ ಅಭ್ಯರ್ಥಿಗಳು: ರೂ.250/-
SC/ST/ಪ್ರವರ್ಗ-I/ಮಾಜಿ ಸೈನಿಕ ಅಭ್ಯರ್ಥಿಗಳು: ರೂ.500/-
ಸಾಮಾನ್ಯ/OBC/2A/2B/3A/3B ಅಭ್ಯರ್ಥಿಗಳು: ರೂ.750/-
ಪಾವತಿ ವಿಧಾನ: ಆನ್‌ಲೈನ್

ವೇತನ:
ಸೀನಿಯರ್‌ ಪ್ರೋಗ್ರಾಮರ್- ಮಾಸಿಕ ₹ 52,650- 97,100
ಜೂನಿಯರ್‌ ಪ್ರೋಗ್ರಾಮರ್‌ – ಮಾಸಿಕ ₹ 43,100- 83,900
ಜೂನಿಯರ್‌ ಕೌನ್ಸಲ್‌ ಆಪರೇಟರ್-‌ ಮಾಸಿಕ ₹ 37,900- 70,850
ಕಂಪ್ಯೂಟರ್‌ ಆಪರೇಟರ್- ಮಾಸಿಕ ₹ 30,350- 58,250
ಅಸಿಸ್ಟೆಂಟ್-‌ ಮಾಸಿಕ ₹ 30,350- 58,250
ಜೂನಿಯರ್‌ ಅಸಿಸ್ಟೆಂಟ್-‌ ಮಾಸಿಕ ₹ 21,400- 42,000
ಡೇಟಾ ಎಂಟ್ರಿ ಅಸಿಸ್ಟೆಂಟ್/‌ ಟೈಪಿಸ್ಟ್‌- ಮಾಸಿಕ ₹ 21,400- 42,000

ಉದ್ಯೋಗದ ಸ್ಥಳ:
ಕರ್ನಾಟಕ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ ?
ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸುಲಭವಾಗಲೆಂದೇ ಈ ಕೆಳಗೆ ನೇರ ಲಿಂಕನ್ನು ಕೊಡಲಾಗಿದೆ. ʼನೇರ ಲಿಂಕ್‌ʼ ಮೇಲೆ ಕ್ಲಿಕ್‌ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನೇರ ಲಿಂಕ್‌ : ಈ ಮೂಲಕ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/12/2025
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 3, 2025
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜನವರಿ 4, 2025

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23460460 ಗೆ ಕರೆ ಮಾಡಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!