spot_img
Friday, April 3, 2026
spot_img

ಬೈಲೂರು: ಕನ್ನಡ ರಾಜ್ಯೋತ್ಸವ 2024-ಕನ್ನಡ ನಡೆನುಡಿ ಸಮಾರೋಪ

ಕುಂದಾಪುರ: ಕುಂದಾಪುರ ಶೈಕ್ಷಣಿಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ಕನ್ನಡ ರಾಜ್ಯೋತ್ಸವ 2024-ಕನ್ನಡ ನಡೆನುಡಿ ಸಮಾರೋಪ ಕಾರ್ಯಕ್ರಮ, ಬಣ್ಣದ ಗರಿ ಶಾಲಾ ಅರ್ಧವಾರ್ಷಿಕ ಪತ್ರಿಕೆ ಅನಾವರಣ ನ.30ರಂದು ಜರಗಿತು.

ರಾಜ್ಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಇಂಡಿಯಾ ಪೌಂಡೇಷನ್ ಫಾರ್ ಆರ್ಟ್ಸ್ ಬೆಂಗಳೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇವರ ಸಹಯೋಗದಲ್ಲಿ ಕಲಿ ಕಲಿಸು ಕಲಾ ಅಂತರ್ಗತ ಕಲಿಕೆಯ “ಕರಾವಳಿಯ ವೀರ ವನಿತೆಯರು ಸಾಮಾಜಿಕ ಶೋಷಣೆ ಮತ್ತು ವಿದೇಶಿಯರ ವಿರುದ್ಧ ಹೋರಾಡಿ ನಾಡು ಕಟ್ಟಿದ ಕಥನಕ್ಕೆ ಯಕ್ಷರಂಗ ರೂಪ ನೀಡಿ ಶಾಲಾ ವಿದ್ಯಾರ್ಥಿನಿಯರಿಂದ ಅಭಿನಯಿಸುವುದು” ಎಂಬ ಯೋಜನೆಯ ಅಂಗವಾಗಿ ಕನ್ನಡ ರಾಜ್ಯೋತ್ಸವ 2024ರ – ಕನ್ನಡ ನಡೆನುಡಿ ಕಾರ್ಯಕ್ರಮದ ಯಕ್ಷ ರಂಗಪಠ್ಯ ರಚನೆ ಮತ್ತು ವಾಚನ ಸರಣಿ ಕಾರ್ಯಗಾರಗಳ ನಾಲ್ಕನೇ ಕಾರ್ಯಗಾರದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಂಕರನಾರಾಯಣ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶಂಕರ ದೇವಾಡಿಗ ಅವರು ಶಾಲಾ ಮಕ್ಕಳ ಅರ್ಧವಾರ್ಷಿಕ ಪತ್ರಿಕೆ ಬಣ್ಣದ ಗರಿಯನ್ನು ಅನಾವರಣ ಮಾಡಿ ಮಾತನಾಡುತ್ತ “ಬಣ್ಣದ ಗರಿ ಮಕ್ಕಳ ಸೃಜನಶೀಲ ಚಟುವಟಿಕೆಗೆ ಉತ್ತಮ ವೇದಿಕೆ” ಎಂದು ಅಭಿಪ್ರಾಯ ಪಟ್ಟರು.

ಇಂದಿನ ಯಕ್ಷ ಪಠ್ಯ ವಾಚನ ಕಾರ್ಯಾಗಾರದಲ್ಲಿ ನಂಗೇಲಿ ಕಥನದ ಯಕ್ಷ ಪಠ್ಯವನ್ನು ಸಂಪನ್ಮೂಲ ವ್ಯಕ್ತಿ ಕಿಶೋರ ಕುಮಾರ ಆರೂರು ಇವರು ವಾಚಿಸಿ ಮಕ್ಕಳಿಗೆ ಅರ್ಥೈಸಿದರು. ನಂತರದಲ್ಲಿ ಮಕ್ಕಳಿಗೆ ಕನ್ನಡ ನಡೆನುಡಿ ಕಾರ್ಯಕ್ರಮದ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೊನೆಯಲ್ಲಿ ನಡೆದ ಸಮಾರೋಪದಲ್ಲಿ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಂಜುನಾಥ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ೪ನೇ ತರಗತಿ ಮಕ್ಕಳ ಹಸ್ತ ಪತ್ರಿಕೆ ನುಡಿ ತೇರನ್ನು ಸಂಪನ್ಮೂಲ ವ್ಯಕಿ ಕಿಶೋರ ಕುಮಾರ ಅನಾವರಣ ಮಾಡಿದರು. ಒಂದು ತಿಂಗಳ ಕಾಲ ನಡೆದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ತಂಡಕ್ಕೆ ಸಮಗ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ. ಸ್ವಾಗತಿಸಿದರು,. ಕಾರ್ಯಕ್ರಮವನ್ನು ಸಂಯೋಜಿಸಿದ ಕಲಿಕಲಿಸು ಯೋಜನೆಯ ನಿರ್ವಾಹಕ ಆನಂದ ಕುಲಾಲ ಪ್ರಸ್ತಾವನೆಗೈದರು. ಗೌರವ ಶಿಕ್ಷಕಿ ವೈಶಾಲಿ ಶೆಟ್ಟಿ ವಂದಿಸಿದರು. ಸಹಶಿಕ್ಷಕಿ ಸಂಧ್ಯಾ ಕೆ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!