spot_img
Wednesday, December 4, 2024
spot_img

ಬಿಜೆಪಿಯಿಂದ ಯತ್ನಾಳ್‌ ಉಚ್ಛಾಟನೆಗೆ ವಿಜಯೇಂದ್ರ ಬಣ ಒತ್ತಾಯ | ನೀನೊಬ್ಬ ನಾಗರಹಾವು, ಬ್ಲ್ಯಾಕ್ಮೇಲರ್‌ : ರೇಣುಕಾಚಾರ್ಯ ಆಕ್ರೋಶ

ಜನಪ್ರತಿನಿಧಿ (ಬೆಂಗಳೂರು) : ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸೋನಿಯಾ ಹಾಗೂ ರಾಹುಲ್‌ ಗಾಂಧಿ ಅವರಿಂದ ಸುಪಾರಿ ಪಡೆದಿದ್ದಾರೆ ಅವರಿಂದ ಸುಪಾರಿ ಪಡೆದಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅವರನ್ನು ಪಕ್ಷದಿಂದ ಕೂಡಲೇ ಉಚ್ಛಾಟನೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಬಣ ಒತ್ತಾಯಿಸಿದೆ.

ಬಿಜೆಪಿಯ ಇಪ್ಪತ್ತಕ್ಕೂ ಹೆಚ್ಚು ಮಾಜಿ ಶಾಸಕರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಇಂದು(ಶುಕ್ರವಾರ) ಸಭೆ ನಡೆಸಿದರು. ಸಭೆಯಲ್ಲಿ ಎಂ.ಪಿ ರೇಣುಖಾಚಾರ್ಯ, ಹರತಾಳ್‌ ಹಾಲಪ್ಪ, ಪರವಣ್ಣ ಮನವಳ್ಳಿ, ಬಸವರಾಜ್‌ ದಡೇಸೂರ್‌, ಗೋಪಾಲ್‌ ನಾಯಕ್‌, ಸುನೀಲ್‌ ಹೆಗಡೆ, ಸುನೀಲ್‌ ನಾಯಕ್‌, ಬಸವರಾಜ್‌ ನಾಯಕ್‌, ಪಿಳ್ಳೆ ಮುನಿಸ್ವಾಮಪ್ಪ, ಬೆಳ್ಳಿ ಪ್ರಕಾಶ್‌. ಮಸಾಲೆ ಜಯರಾಮ್‌, ಎಂ.ಡಿ. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೇಣುಖಾಚಾರ್ಯ, ಕಾಂಗ್ರೆಸ್‌ ನಾಯಕರು ಕರ್ನಾಟಕದಲ್ಲಿ ಬಿಜೆಪಿಯನ್ನು ಮುಗಿಸಬೇಕೆಂದು ಸುಪಾರಿ ನೀಡಿದ್ದಾರೆ. ಆದ್ದರಿಂದ ಯತ್ನಾಳ್‌ ಎಲ್ಲರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಅವರು ಬಾಯಿ ಮುಚ್ಚಿಕೊಂಡು ಸುಮ್ಮನಿರದಿದ್ದರೇ ನಾವು ಬೀದಿಗೆ ಬರಬೇಕಾಗುತ್ತದೆ ಎಂದು ಅವರಿ ಎಚ್ಚರಿಕೆ ನೀಡಿದರು.

ಪಕ್ಷದ ಒಳಿತಿಗಾಗಿ ಹಿರಿಯ ನಾಯಕ ಸದಾನಂದ ಗೌಡರು ಸಲಹೆ ನೀಡಿದರೇ, ಅವರ ವಿರುದ್ಧವೇ ಹೇಳಿಕೆ ನೀಡುವಷ್ಟು ಯತ್ನಾಳ್‌ ಮಹಾನಾಯಕರಾಗಿದ್ದಾರೆ. ಸದಾನಂದಗೌಡರದ್ದು ಬಿಚ್ಚಿಡುತ್ತೇನೆ ಎಂದಿದ್ದಾರೆ. ಏನು ಬಿಚ್ಚಿಡುತ್ತೀಯೋ ನೋಡೋಣ. ನೀನೊಬ್ಬ ನಾಗರಹಾವು, ಬ್ಲ್ಯಾಕ್ಮೇಲರ್‌ ಎಂದು ಏಕವಚನದಲ್ಲೇ ಕಿಡಿಕಾರಿದರು.

ಪಕ್ಷಕ್ಕೆ ಯತ್ನಾಳ್‌ ಕೊಡುಗೆ ಏನು ? ವಿಜಯಪುರದಲ್ಲಿ ತಾವೊಬ್ಬ ಗೆದ್ದು, ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಹಾಗೂ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಭರತ್‌ ಬೊಮ್ಮಾಯಿ ಸೋಲಲೂ ಯತ್ನಾಳ್‌ ಕಾರಣ ದು ಆರೋಪಿಸಿದರು.

ಶೋಭಾ ಕರಂದ್ಲಾಜೆ ಹಾಗೂ ಪ್ರಹ್ಲಾದ್‌ ಜೋಶಿ ವಕ್ಫ್‌ ಹೋರಾಟಕ್ಕೆ ಬೆಂಬಲ ಕೊಟ್ಟರೇ ಹೊರತು, ನಿಮಗಲ್ಲ. ಸಂಘರ್ಷಕ್ಕೆ ಇಳಿಯಲು ನಿಮಗೆ ಅನುಮತಿ ಕೊಟ್ಟ ರಾಷ್ಟ್ರೀಯ ನಾಯಕರು ಯಾರು ? ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ದೊಡ್ಡವನಾಗಿದ್ದೀರಾ ? ಯತ್ನಾಳ್‌ ಅವರನ್ನು ಪ್ರಶ್ನಿಸಿದರು.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ನಮ್ಮಲ್ಲಿ ಯಾವುದೇ ರೀತಿಯ ಒಡಕುಗಳಿಲ್ಲ. ಕೆಲವು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಈಡೇರುವುದಿಲ್ಲ ಎಂದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!