spot_img
Thursday, December 5, 2024
spot_img

ಬೆಳ್ಳಾಲ: ಯಕ್ಷಗಾನ ಕಲಾವಿದರಿಗೆ ಬಿರುದಿನೊಂದಿಗೆ ಸನ್ಮಾನ

(ಶನೀಶ್ವರ ದೇವಸ್ಥಾನದ ಧರ್ಮದರ್ಶಿ ಜೋನಮನೆ ಡಾ.ಅಶೋಕ್ ಕುಮಾರ್ ಶೆಟ್ಟಿ ಹಾಗೂ ದೇವಸ್ಥಾನದ ಪಾತ್ರಿಗಳಾದ ಗಿಳಿಯಾರು ಮಂಜುನಾಥ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.)

ಕುಂದಾಪುರ: ಬೆಳ್ಳಾಲ ಶ್ರೀ ಮಹಾಲಿಂಗೇಶ್ವರ ಯುವ ಭಜನಾ ಮಂಡಳಿ, ಶ್ರೀ ಅಯ್ಯಪ್ಪಸ್ವಾಮಿ ಭಕ್ತ ವೃಂದ, ಶ್ರೀ ಶನೀಶ್ವರಸ್ವಾಮಿ ಭಕ್ತವೃಂದ ಹಾಗೂ ಶ್ರೀ ಮಹಾಲಿಂಗೇಶ್ವರ ಯಕ್ಷಾಭಿಮಾನಿ ಬಳಗ ಬೆಳ್ಳಾಲ ಇವರು ಅಭಿಮಾನದಿಂದ ಮಾಲತಿ ಕರುಣಾಕರ ಪೂಜಾರಿ ಶೇಡಿನಮಕ್ಕಿ ಬೆಳ್ಳಾಲ ಇವರ ಗೃಹಪ್ರವೇಶದ ಅಂಗವಾಗಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಆಜ್ರಿ ಚೋನಮನೆ ಶನೀಶ್ವರ ಮೇಳದ ವೇದಿಕೆಯಲ್ಲಿ ಆಜ್ರಿ ಚೋನಮನೆ ಶ್ರೀ ಶನೀಶ್ವರ ಮೇಳದ ಪ್ರಧಾನ ವೇಷಧಾರಿ ರಾಘವೇಂದ್ರ ಶೆಟ್ಟಿ ಬಡಾಬಾಳು ಇವರಿಗೆ ಅಭಿನವ ಶನೀಶ್ವರ ಹಾಗೂ ಆಜ್ರಿ ಮೇಳದ ಪುರುಷ ವೇಷಧಾರಿ ಗಣೇಶ್ ಪೂಜಾರಿ ಕುಳ್ಳಂಬಳ್ಳಿ ಕೆರಾಡಿ ಇವರಿಗೆ ಕಲಾ ಸಿಂಧೂರ ಬಿರುದನ್ನಿತ್ತು ಸನ್ಮಾನಿಸಲಾಯಿತು.

ಸಮಿತಿಯ ವತಿಯಿಂದ ಶನೀಶ್ವರ ದೇವಸ್ಥಾನದ ಧರ್ಮದರ್ಶಿ ಜೋನಮನೆ ಡಾ.ಅಶೋಕ್ ಕುಮಾರ್ ಶೆಟ್ಟಿ ಹಾಗೂ ದೇವಸ್ಥಾನದ ಪಾತ್ರಿಗಳಾದ ಗಿಳಿಯಾರು ಮಂಜುನಾಥ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಸತತ 20 ವರ್ಷಗಳಿಂದ ಮಹಾಲಿಂಗೇಶ್ವರ ಯುವ ಭಜನಾ ತಂಡದ ಸದಸ್ಯರಾಗಿ ಪ್ರಸ್ತುತ ಕಾರ್ಯದರ್ಶಿ ಹಾಗೂ 21ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಂಡಿರುವ ಕರುಣಾಕರ ಪೂಜಾರಿ ಬೆಳ್ಳಾಲ ಇವರನ್ನು ಬೆಳ್ಳಾಲ ಮಹಾಲಿಂಗೇಶ್ವರ ತಂಡದ ಗೌರವಾಧ್ಯಕ್ಷ ಗಣೇಶ್ ಪೂಜಾರಿ ಹಾಗೂ ಅಯ್ಯಪ್ಪ ಗುರುಸ್ವಾಮಿ ನರಸಿಂಹ ನಾಯ್ಕ್ ಬೆಳ್ಳಾಲ ಇವರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಕಲಾವಿದರ ಪರವಾಗಿ ಹಿರಿಯ ಭಾಗವತರಾದ ಆರ್ಗೊಡು ಸದಾನಂದ ಶೆಣೈ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದರ್ಶನ್ ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಸುಮ, ಗ್ರಾ.ಪಂ.ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರಾಘವೇಂದ್ರ ಕೊಠಾರಿ, ಬೆಳ್ಳಾಲ ಪೋಸ್ಟ್ ಮಾಸ್ಟರ್ ಸಂತೋಷ್ ಕುಮಾರ್ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಆನಂದ ಶೆಟ್ಟಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ವಿನೋದ್ ಪೂಜಾರಿ ಹುಲಿಕೊಡ್ಲು, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಸೀತಾರಾಂ ಪೂಜಾರಿ, ವೆಂಕಟರಮಣ ಫೈನಾನ್ಸ್ ನ ಮಂಜುನಾಥ್ ಮೊಗವೀರ, ಸಂದೇಶ್, ಮಂಜುನಾಥ್, ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

ಬೆಳ್ಳಾಲ ಮಹಾಲಿಂಗೇಶ್ವರ ಭಜನಾ ತಂಡದ ಗೌರವಾಧ್ಯಕ್ಷ ಗಣೇಶ್ ಪೂಜಾರಿ ಬೆಳ್ಳಾಲ ಸನ್ಮಾನ ಪತ್ರವನ್ನು ವಾಚಿಸಿ, ಭಾಸ್ಕರ ಪೂಜಾರಿ ಬಾಳೆಹಿತ್ಲುಕೊಡ್ಲು ಸ್ವಾಗತಿಸಿ, ಸುಚೇತನ್ ಪೂಜಾರಿ ವಂದಿಸಿದರು. ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!