spot_img
Thursday, December 5, 2024
spot_img

ನ.30 ಕ್ಕೆ 400 ಆಳ್ವಾಸ್ ವಿದ್ಯಾರ್ಥಿಗಳಿಂದ ಬಸ್ರೂರಿನಲ್ಲಿ ‘ಆಳ್ವಾಸ್ ಸಾಂಸ್ಕೃತಿಕ ಲೋಕ’ 

ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಿಗೆ ಇದೇ ಡಿಸೆಂಬರ್ 24 ಕ್ಕೆ 90 ವರ್ಷ ಹಿನ್ನೆಲೆಯಲ್ಲಿ ಅವರ ಹುಟ್ಟು ಹಬ್ಬವನ್ನು ಸಾರ್ವಜನಿಕ ಭಾಗೀದಾರಿಕೆಯೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ಚಿಂತನೆಯಲ್ಲಿ ಒಂದಷ್ಟು ಆಲೋಚನೆಗಳ ಚುಕ್ಕಿಗಳನ್ನು ರಂಗೋಲಿಯನ್ನಾಗಿಸುವ ಸತ್ಕಾರ್ಯಕ್ಕೆ ಮುಂದಡಿ ಇಡಲಾಗಿದೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಮರಣೀಯವಾದ ಸೇವೆ ಸಲ್ಲಿಸಿರುವ ಬಿ.ಅಪ್ಪಣ್ಣ ಹೆಗ್ಡೆಯವರಿಗೆ ಸಾಂಸ್ಕೃತಿಕ ಕ್ಷೇತ್ರದ ಮೇಲಿರುವ ಗೌರವ ಹಾಗೂ ಅಭಿಮಾನಗಳ ಕಾರಣಗಳಿಗಾಗಿ ನ.30 ರಂದು ಸಂಜೆ 6 ರಿಂದ ಬಸ್ರೂರು ಶ್ರೀ ಶಾರದಾ ಕಾಲೇಜು ಆವರಣದಲ್ಲಿ ಮೂಡುಬಿದರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹೆಗ್ಡೆ ಅವರ 90 ರ ಹುಟ್ಟು ಹಬ್ಬದ ಅರ್ಪಣೆಗಾಗಿ ವಿನೂತನ ಶೈಲಿಯಲ್ಲಿ ‘ ಆಳ್ವಾಸ್ ಸಾಂಸ್ಕೃತಿಕ ಲೋಕ’ ವನ್ನು ಪ್ರಸ್ತುತಿ ಪಡಿಸಲಿದ್ದಾರೆ. 400 ಜನ ವಿದ್ಯಾರ್ಥಿಗಳು ವಿಶಾಲವಾದ ರಂಗದ ಮೇಲೆ ದೇಶ-ವಿದೇಶದ ಅಪರೂಪದ ಸಾಂಸ್ಕೃತಿಕ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಲಿದ್ದಾರೆ. ದೇಶದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೆ ಆದ ಹೆಸರನ್ನು ಹಾಗೂ ಛಾಪನ್ನು ಮೂಡಿಸಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅಪ್ಪಣ್ಣ ಹೆಗ್ಡೆಯವರಿಗೆ ‘ ಕಲಾ ಗೌರವ ‘ ವನ್ನು ಸಮರ್ಪಿಸುವ ಮೂಲಕ ವಿಶಿಷ್ಠವಾಗಿ 90 ರ ಹುಟ್ಟು ಹಬ್ಬದಾಚರಣೆಗೆ ಪ್ರೀತಿಯ ಕೊಡುಗೆಯನ್ನು ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸ್ತ್ರೀಯ ನೃತ್ಯ -ಭೋ ಶಂಭೊ, ಗುಜರಾತಿನ ಗಾರ್ಭ ಮತ್ತು ದಾಂಡಿಯ, ಸೃಜನಾತ್ಮಕ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಣಿಪುರಿಯ ಸ್ಟಿಕ್ ಡ್ಯಾನ್ಸ್, ಬಡಗುತಿಟ್ಟಿನ -ಶ್ರೀರಾಮ ಪಟ್ಟಾಭಿಷೇಕ, ಕಥಕ್ ನೃತ್ಯ-ವರ್ಷಧಾರೆ, ಪಶ್ಚಿಮ ಬಂಗಾಳದ ಪುರುಲಿಯಾ ನೃತ್ಯ, ಡುಳ್ಳು ಕುಣಿತ, ಮಲ್ಲಕಂಬ ಹಾಗೂ ರೋಪ್ ಕಸರತ್ತು ಸೇರಿದಂತೆ ಸುಮಾರು 2.30 ಗಂಟೆಗಳ ಕಾಲ ವಿದ್ಯಾರ್ಥಿಗಳು ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುವ ಅತ್ಯಾಕರ್ಷಕ ಪ್ರದರ್ಶನವನ್ನು ನೀಡಲಿದ್ದಾರೆ.
ಕಾರ್ಯಕ್ರಮ ನಿಗದಿತ ಸಮಯಕ್ಕೆ ಪ್ರಾರಂಭವಾಗುವುದರಿಂದಾಗಿ ಆಸಕ್ತ ಪ್ರೇಕ್ಷಕರು ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಅಭಿಮಾನಿಗಳು ಕಾರ್ಯಕ್ರಮ ಪ್ರಾರಂಭಕ್ಕಿಂತ ಮುಂಚಿತವಾಗಿ ಆಗಮಿಸಿ ಆಸನಗಳನ್ನು ಸ್ವೀಕರಿಸಬೇಕು. ಕಾರ್ಯಕ್ರಮಕ್ಕಾಗಿ ವಾಹನಗಳಲ್ಲಿ ಆಗಮಿಸುವ ಪ್ರೇಕ್ಷಕರಿಗಾಗಿ ಬಸ್ರೂರು ನಿವೇದಿತಾ ಹೈಸ್ಕೂಲ್ ಆವರಣದಲ್ಲಿ, ಬಸ್ರೂರು ಶ್ರೀದೇವಿ ದೇವಸ್ಥಾನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!