spot_img
Thursday, April 2, 2026
spot_img

ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ತೆರಾಲಿಯ ಸಂಭ್ರಮ

ಕುಂದಾಪುರ: ಕುಂದಾಪುರ ರೋಜರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ ೨೬ ರಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡು ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಪೂಜಾವಿಧಿಯನ್ನು ಬಸ್ರೂರು ಇಗರ್ಜಿಯ ಸಹಾಯಕ ಧರ್ಮಗುರು ವಂ|ಫಾ| ವಿಲ್ಸನ್ ಸಲ್ಡಾನ್ಹ ನಡೆಸಿಕೊಟ್ಟು “ಮೇರಿ ಮಾತೆ ದೇವರ ವಾಕ್ಯವನ್ನು ವಿದೇಯಳಾಗಿ ನಡೆಸಿಕೊಟ್ಟ ಮಾತೆ, ಕೆಲವೊಂದು ಸಂದರ್ಭದಲ್ಲಿ ಮೇರಿ ಮಾತೆ ದೇವರ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಒಂದು ಸಂದರ್ಭದಲ್ಲಿ ‘ಯಾರು ನನ್ನ ತಾಯಿ, ಯಾರು ನನ್ನ ಸಹೋದರರು ಎಂದು ಕಠಿಣವಾಗಿ ಕೇಳಿದ್ದರು, ಆವಾಗ ಮೇರಿ ಮಾತೆಗೆ ದುಖ, ನೋವು ಆಗಿರಬಹುದು, ಯೇಸು ಕ್ರಿಸ್ತರು ಇದನ್ನು ಯಾಕಾಗಿ ಹೇಳಿದ್ದರೆಂದರೆ, ನನ್ನ ತತ್ವಗಳನ್ನು ಯಾರು ಪಾಲಿಸುತ್ತಾರೊ, ಅವರು ನನ್ನ ತಾಯಿ, ಸಹೋದರು, ಇದನ್ನು ಮೇರಿ ಮಾತೆ ನಂತರ ಅರ್ಥೈಸಿಕೊಂಡಳು, ಹಾಗೇ ನಾವು ಅರ್ಥೈಸಿಕೊಳ್ಳಬೇಕು ಎಂದು ಸಂದೇಶ ನೀಡಿದರು.

ಕುಂದಾಪುರ ಇಗರ್ಜಿಯ ಧರ್ಮಗುರುಗಳಾದ ಅ|ವಂ| ಪೌಲ್ ರೇಗೊ, ಹಿಂದಿನ ಧರ್ಮಗುರುಗಳಾದ ವಂ|ಸ್ಟ್ಯಾನಿ ತಾವ್ರೊ, ಹಿಂದಿನ ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಕೆರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಕೆರೆಕಟ್ಟೆ ಪುಣ್ಯಕ್ಷೇತ್ರದ ರೆಕ್ಟರ್ ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು. ಈ ಧಾರ್ಮಿಕ ಕಾರ್ಯಕ್ರಮದ ಪೋಷಕರಾದ ಜೂಲಿಯೆಟ್ ಪಾಯ್ಸ್, ಲವೀನಾ ಡಿ‌ಆಲ್ಮೇಡಾ, ಶರ್ಮಿಳಾ ಸುವಾರಿಸ್ ಉಪಸ್ಥಿತರಿದ್ದರು.

ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಚರ್ಚಿನ ಸದಸ್ಯರು, ನೆಂಟರು ಬಹು ಸಂಖೆಯಲ್ಲಿ ಭಾಗಿಯದಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಜನರು ಆಗಮಿಸಿ ಭಾವೈಕತೆ ಮೆರೆದರು.

ಸೆಂಟ್ ಅಂತೋನಿ ಲೈಟಿಂಗ್ ಸೌಂಡ್ಸ್ ಇದರ ರಾಯನ್ ಬರೆಟ್ಟೊ ಇವರಿಂದ ಧರ್ಮಾರ್ಥವಾಗಿ ಇಗರ್ಜಿಯ ಮುಂಭಾಗದಲ್ಲಿ ಪ್ರದರ್ಶಿಸಿದ್ದ ಲೇಸರ್ ಲೈಟಿಂಗ್ ಶೋ ಜನಕಾರ್ಷಣೆಗೆ ಒಳಗಾಯಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!