spot_img
Thursday, December 5, 2024
spot_img

ಕಾಳಾವರದಲ್ಲಿ ಲೋಕಾರ್ಪಣೆಗೆ ಸನ್ನದ್ಧಗೊಂಡಿದೆ ‘ಶ್ರೀ ಶಂಕರ ಸಭಾ ಭವನ’

ಕುಂದಾಪುರ: (ಜನಪ್ರತಿನಿಧಿ ವರದಿ) ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಸುಪ್ರಸಿದ್ದ ಕ್ಷೇತ್ರವಾದ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದ ಹತ್ತಿರ ನೂತನ ಶ್ರೀ ಶಂಕರ ಸಭಾಭವನ ನಿರ್ಮಾಣಕಾರ್ಯ ಮುಕ್ತಾಯ ಹಂತದಲ್ಲಿದ್ದು ಇದೇ ಬರುವ ಡಿಸೆಂಬರ್15ರಂದು ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಲಿದೆ.

ಸುಸಜ್ಜಿತವಾದ ಕಟ್ಟಡದ ನಿರ್ಮಾಣಕರ್ತರಾದ ಕಾಳಾವರದ ಶ್ರೀಮತಿ ಮೋಹಿನಿ ಮತ್ತು ಪ್ರೊ.ಶಂಕರ್ ರಾವ್ ಹಾಗೂ ಅವರ ಮಕ್ಕಳಾದ ಅವಿನಾಶ ಕಾಳಾವರ, ಅಮರೇಶ ಕಾಳಾವರ, ಅಭಿಲಾಶ್ ಕಾಳಾವರ ಹಾಗೂ ಸೊಸೆಯಂದಿರು ಇವರ ಹಲವಾರು ವರ್ಷಗಳ ಬಹುದಿನಗಳ ಕನಸನ್ನು ಕಂಡುಕೊಂಡಿದ್ದರು. ಮೂರು ವರ್ಷಗಳ ಹಿಂದೆಯೇ ಕಾರ್ಯಕ್ಕೆ ಕೈಹಾಕಿದರು. ಆದರೆ ಕೋರೋನಾದಿಂದ ಕೆಲಸವು ಸ್ವಲ್ಪ ವಿಳಂಬವಾಯಿತು. ಆದರೆ ಇವರ ಮುಂದಾಳತ್ವ ಕಾರ್ಯವೈಖರಿ, ಶ್ರದ್ದೆ, ಪರಿಶ್ರಮಕ್ಕೆ ಸಭಾಭವನ ಮುಕ್ತಾಯ ಹಂತದಲ್ಲಿದೆ. ಜನರಿಗೆ ಅನುಕೂಲತಕ್ಕಂತೆ ಸಭಾಭವನ ನಿರ್ಮಾಣ ಮಾಡಲಾಗಿದೆ. ಶುಭಸಮಾರಂಭ ಕಾರ್ಯಕ್ರಮವಾದ ಮದುವೆ, ಸೀಮಂತ ಕಾರ್ಯಕ್ರಮ, ಇನ್ನಿತರ ಕಾರ್ಯಕ್ರಮವನ್ನು ನಡೆಸಲು ಯೋಗ್ಯವಾದ ಸೂರು ಎನ್ನಬಹುದು.

ಜನರಿಗೆ ತುಂಬಾ ಹೊರೆಯಾಗಬಾರದೆಂಬ ಕೈಗೆಟ್ಟುಕುವ ದೃಷ್ಠಿಯಿಂದ ಈ ಸಭಾಭವನವನ್ನು ನಿರ್ಮಿಸಲಾಗಿದೆ. ಈ ಅತ್ಯಾಧುನಿಕ ಶೈಲಿಯ ಕಟ್ಟಡವಾಗಿದ್ದು ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿದೆ, ಎನ್.ಎಚ್ 66ರಿಂದ 4 ಕಿಮೀ. ಮತ್ತು ಕೋಟೇಶ್ವರ ಹಾಲಾಡಿ ರಸ್ತೆಯಿಂದ 1 ಕಿಮೀ ಅಂತರದಲ್ಲಿದೆ. ಸಭಾಭವನದ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡಮರಗಳಿದ್ದು ಶುದ್ದವಾದ ಗಾಳಿ, ಬೆಳಕಿನ ವ್ಯವಸ್ಥೆಯಿದೆ. ಪ್ರಶಾಂತವಾದ ವಾತಾವರಣದಲ್ಲಿ ಶಾಂತತೆಯಿಂದ ಕೂಡಿದ್ದು ಹತ್ತಿರದಲ್ಲಿ ಮಾನಸಿಕ, ದೈಹಿಕ, ಹಲವಾರು ಸಮಸ್ಯೆಯಿಂದ ಹೊರಬರಲು ರಮಣಿಯವಾದ ಸ್ಥಳವಾಗಿದ್ದು ಎರಡನೇ ಶ್ರೀ ಸುಬ್ರಹ್ಮಣ್ಯನ ಸನ್ನಿಧಿ ಹತ್ತಿರದಲ್ಲಿದೆ. ಸುಂದರ ಶಿಲ್ಪ ವಿನ್ಯಾಸದಿಂದ ಕೂಡಿರುವ ಕಿಟಕಿ, ಬಾಗಿಲು, ಕಂಬಗಳು ಮತ್ತಷ್ಟು ಸಭಾಗಂಣಕ್ಕೆ ಮೆರಗನ್ನು ನೀಡಿದೆ, ಉಷ್ಣ ಮತ್ತು ಶಬ್ದವನ್ನು ತಡೆಯುವ ಮೇಲ್ಛಾವಣಿ ಹೊಂದಿದ್ದು 400ಕ್ಕೂ ಮಿಕ್ಕಿ ಆಸನಗಳಿಂದ ಸುಸಜ್ಜಿತವಾದ ಕೇಂದ್ರೀಯ ಹವಾನಿಯಂತ್ರಿತ ವಿಶಾಲವಾದ ಸಭಾಂಗಣ ಹೊಂದಿದ್ದು ಉತ್ತಮವಾದ ಬೃಹತ್ ಹವಾನಿಯಂತ್ರಿತ ವೇದಿಕೆ, ಎರಡು ಬೃಹತ್ ಆಕಾರದ ಎಲ್‍ಇಡಿ ಟಿವಿ ವೇದಿಕೆಗೆ ಇನ್ನಷ್ಟು ಮೆರಗನ್ನು ಮೂಡಿಸುತ್ತದೆ. ಶೃಂಗಾರಕೋಣೆ, ಆಧುನಿಕ ವ್ಯವಸ್ಥೆಗಳಿರುವ ಸ್ನಾನದ ಕೋಣೆಯನ್ನು ಹೊಂದಿದೆ. ಅಲ್ಲದೇ ಅಡುಗೆಕೋಣೆಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದ್ದು ಅಡಿಗೆಕೋಣೆ, ಪರಿಕರಗಳು, ಶುದ್ದನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 300 ಜನ ಕುಳಿತುಕೊಳ್ಳುವ ಊಟದ ಹಾಲ್ ಸಮರ್ಪಕವಾದ ಕೈ ಕಾಲು ತೊಳೆಯುವ ಸ್ಥಳ, ಸ್ತ್ರೀ ಹಾಗೂ ಪುರುಷರಿಗೆ ಪ್ರತ್ಯೇಕವಾದ ಸ್ನಾನಗೃಹ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಭವನಕ್ಕಾಗಿ ವಿಶೇಷ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು, ತಕ್ಷಣವೇ ವಿದ್ಯುತ್ ಕಡಿತವಾದಲ್ಲಿ 110ಕೆವಿಎ ಜನರೇಟರ್ ಸೌಲಭ್ಯವನ್ನು ಮುಂದಾಲೋಚನೆಯಿಂದ ಮಾಡಲಾಗಿದೆ. ಅಲ್ಲದೇ ಮೆಟ್ಟಿಲ್ಲನ್ನು ಹತ್ತಲು ಕಷ್ಟವಾದಲ್ಲಿ ಲಿಪ್ಟ್‍ನ ವ್ಯವಸ್ಥೆ ಮಾಡಲಾಗಿದೆ. ವಾಹನ ತಂಗಲು ವಿಶಾಲವಾದ ಪಾರ್ಕಿಂಗ್ ಸೇವೆಗಳು ಲಭ್ಯವಾಗಿದೆ. ಕುಂದಾಪುರ, ಕೋಟೇಶ್ವರ, ಹಾಲಾಡಿ, ಬಸ್ರೂರು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಅಲ್ಲದೇ ನೆಲಮಹಡಿಯಲ್ಲಿ ಬಾಡಿಗೆ ಕೋಣೆಗಳು ಲಭ್ಯವಿದೆ. ಆಧುನಿಕ ಸೌಲಭ್ಯಗಳನ್ನೊಳಗೊಂಡ ಈ ಸಭಾಭವನವು ಜನರನ್ನು ಆಕರ್ಷಿಸಲು ಸಿದ್ದತೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-9448177648.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!