spot_img
Wednesday, December 4, 2024
spot_img

ನ.30ರಂದು ಸಾಲಿಗ್ರಾಮದಲ್ಲಿ  ದೀಪೋತ್ಸವ

ಸಾಲಿಗ್ರಾಮ: ಇದೇ ನವಂಬರ್ 30ರಂದು ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ದೀಪೋತ್ಸವದ ಅಂಗವಾಗಿ  ಬೆಳಿಗ್ಗೆ 5 ಗಂಟೆಗೆ ರುದ್ರಾಭಿಷೇಕ ಮಹಾಮಂಗಳಾರತಿ ಹಾಗೂ ಶ್ರೀ ಗುರು ನರಸಿಂಹ ದೇವರ ಭವ್ಯದರ್ಶನ 9ರಿಂದ ಅಧಿವಾಸ ಹೋಮ ಕಲಶಾಭಿಷೇಕ ವೇದಪಾರಾಯಣ ಸಂಹಿತಾಭಿಷೇಕ  ಮಹಾಪೂಜೆ  ನಡೆಯಲಿದೆ.
ಸಂಜೆ 4-30ರಿಂದ ಶ್ರೀದೇವಳದ ವಠಾರದಲ್ಲಿ ಸಭಾ ಕಾರ್ಯಕ್ರಮ ಮತ್ತು ಸಾಧಕರಾದ ಕೆ. ತಾರಾನಾಥ ಹೊಳ್ಳ, ಪಿ. ವಿ. ಆನಂದ, ಸುಜಯಿಂದ್ರ ಹಂದೆ, ಶ್ರೀಧರ್ ಉಳಿತ್ತಾಯ, ಜನಾರ್ಧನ ಹೊಳ್ಳ, ಚಿತ್ತೂರು ಪ್ರಭಾಕರ ಆಚಾರ್ಯ, ನರೇಂದ್ರಕುಮಾರ ಕೋಟ ಸತೀಶಚಂದ್ರ ಶೆಟ್ಟಿ, ವೇ. ಮೂ. ವಿಜಯಕುಮಾರ ಅಡಿಗ, ಸಮೃದ್ಧಿ ಎಸ್ ಮೊಗವೀರ ಮತ್ತು  ಇತ್ತೀಚಿಗಷ್ಟೇ ಅಂತಾರಾಷ್ಟ್ರೀಯ ಈಜು ಸ್ಪರ್ಧೆಗೆ ಆಯ್ಕೆಯಾಗಿರುವ ಕೋಡಿಕನ್ಯಾನದ ಗೋಪಾಲ ಖಾರ್ವಿಯವರಿಗೆ ಶುಭವನ್ನು ಹಾರೈಸಿ  ಶಾಸಕ  ಕಿರಣ ಕುಮಾರ ಕೊಡ್ಗಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಮತ್ತು ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ಸುರೇಶ ತುಂಗರ ಉಪಸ್ಥಿತಿಯ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು.
ರಂಗಮಂದಿರದಲ್ಲಿ ಸಂಜೆ 6-30ರಿಂದ ಯಕ್ಷಾಂತರಂಗ ವ್ಯವಸಾಯೀ ಯಕ್ಷ ತಂಡ ಕೋಟ ಇವರಿಂದ ಯಕ್ಷಗಾನ ಪ್ರದರ್ಶನ ‘ಗಯ ಚರಿತ್ರೆ’  ಸಂಜೆ 7-00ರಿಂದ ದೀಪೋತ್ಸವ ಹಿರೇರಂಗಪೂಜೆ, ಉತ್ಸವಬಲಿ, ಪುಷ್ಪರಥೋತ್ಸವ, ತೆಪ್ಪೋತ್ಸವ ನಡೆಯಲಿದೆಯಂದು  ಅಧ್ಯಕ್ಷ ಡಾ. ಕೆ. ಎಸ್. ಕಾರಂತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!